ಹಳಿಯಾಳದಲ್ಲಿ ದಿನಾಂಕ 26-02-2022 ರಂದು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಇವರ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಲಯನ್ ಎಸ್ ಎಲ್ ಘೋಟ್ನೆಕರ್ ಹಾಗೂ ತಜ್ಞ ವೈದ್ಯರಾದ ಲಯನ್ ನಿತೇಶ್ ಜೈನ್ ಹಾಗೂ ವೈದ್ಯರಾದ ದೀಪಕ್ ಕಲ್ಮಠ ಇವರು ಭಾಗವಹಿಸಿದ್ದರು.

ಅತಿಥಿಗಳಾಗಿ ಲಯನ್ ಮಹಾಂತೇಶ ಹಿರೇಮಠ ಜೋನ ಚೇರ ಪರ್ಸನ್ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಜನರು ಮಧುಮೇಹ ಮತ್ತು ರಕ್ತದ ಒತ್ತಡದ ಪರೀಕ್ಷೆ ಮಾಡಿಕೊಂಡು ಉಚಿತವಾಗಿ ಸಲಹೆ ಸೂಚನೆಗಳನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಬಸವರಾಜ್ ಬೆಂಡಿಗೇರಿ, ಖಜಾಂಚಿ ಡಿ. ವಾಯ್. ಡಾoಗೆ, ಪ್ರಕಾಶ್ ಕಿತ್ತೂರ, ಸಿ. ಎಸ್. ಸೊಲ್ಲಾಪುರಿ, ಜಿ. ಡಿ. ಗಂಗಾಧರ, ವಿಠಲ್ ಸೂರ್ಯವಂಶಿ, ಮಹೇಶ್ ಮಿಂಡೋಲ್ಕರ್, ವಕೀಲರಾದ ಮಂಜುನಾಥ ಮಾದಾರ, ಮಹೇಶ್ ನಾಯ್ಕ್, ಶಿವಾನಂದ ಶೆಟ್ಟಿ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
Haliyal News ; Join our whatsapp group
Leave a Comment