ಕಾರವಾರ : ಜಿಲ್ಲೆಯಲ್ಲಿರುವ ಬಿ ಪ್ರವರ್ಗದದ 2 ಅಧಿಸೂಚಿತ ಹಾಗೂ ಸಿ ಪ್ರವರ್ಗದ 8 ಅಧಿಸೂಚಿತ ಸಂಸ್ಥೆ/ ದೇವಾಲಯಕ್ಕೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಮಟಾ ತಾಲೂಕಿನ ಗೋಕರ್ಣದ ಮಹಾಗಣಪತಿ, ಭದ್ರಕಾಳಿ ದೇವಸ್ಥಾನ, ಹೊಸ್ಕೇರಿಯ ಗಣಪತಿ ದೇವಸ್ಥಾನ, ಅಂಕೋಲಾ ತಾಲೂಕಿನ ತೆಂಕಣಕೇರಿಯ ಮೊಮ್ಮಯ್ಯ, ಅಡಿಗೋಣದ ಗೋಳಿಬೀರ, ಮೊಗಟಾದ ಶಾಂತಿಕಾ ಪರಮೇಶ್ವರಿ ದೇವಸ್ಥಾನ, ಕಾರವಾರ ತಾಲೂಕಿನ ಚೆಂಡಿಯಾದ ಮಹಾದೇವ ಕೇಶವ ನಾರಾಯಣ ಭೂದೇವಿ ದೇವಸ್ಥಾನ, ಶಿರಸಿ ತಾಲೂಕಿನ ನಾಡಿಗಲ್ಲಿಯ ಹನುಮಂತ ದೇವಸ್ಥಾನ, ಹೊನ್ನಾವರ ತಾಲೂಕಿನ ಇಂಡಗುAಜಿ ಕುಳಿಮನೆ ಅರಸಿ ಶಂಭುಲಿAಗ ದೇವಸ್ಥಾನ, ಸಿದ್ಧಾಪುರ ತಾಲೂಕಿನ ಕಾನಸೂರಿನ ಕೇಶವ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗುವುದು.
ನಿಗದಿತ ನಮೂನೆ – 1 (ಬಿ) (22 ನೇ ನಿಯಮ ) ರಲ್ಲಿ ಭರ್ತಿ ಮಡಿ, ಭರ್ತಿ ಮಾಡಿದ ಅರ್ಜಿಯನ್ನು ಮಾ. 20 ರೊಳಗಾಗಿ ನೇರವಾಗಿ ಕರ್ಯದರ್ಶಿ ಜಿಲ್ಲಾ ಧಾರ್ಮಿಕ ಪರಿಷತ್ ಮತ್ತು ಸಹಾಯಕ ಆಯುಕ್ತರು ಹಿಂದೂ ಧಾರ್ಮೀಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉತ್ತರ ಕನ್ನಡ ಕಾರವಾರ ಅವರ ಕಚೇರಿಗೆ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆ ಹಾಗೂ ಸದಸ್ಯರಾಗಲು ಇರುವ ಅರ್ಹತೆ, ಅನರ್ಹತೆಗಳ ವಿವರಗಳು ತಹಶೀಲ್ದಾರ ಕುಮಟಾ, ಅಂಕೋಲಾ ಕಾರವಾರ, ಶಿರಸಿ, ಹೊನ್ನಾವರ ಹಾಗೂ ಸಿದ್ಧಾಪುರ ಕಾರ್ಯಾಲಯ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮಜರಾಯಿ ಶಾಖೆಯಲ್ಲಿ ಲಭ್ಯವಿರುತ್ತವೆ. ಎಂದು ಜಿಲ್ಲಾ ಮಜುರಾಯಿ ಇಲಾಖೆಯ ಪ್ರಕಟಣೆ ತಿಳಿಸಿದೆ.
Leave a Comment