ಶಿರಸಿ: ಬಾರ್ ಬೆಂಡರ್ ಕಾರ್ಮಿಕನೊಬ್ಬ ಕೆಲಸ ನಿರತನಾಗಿದ್ದಾಗ, ವಿದ್ಯುತ್ ಕಂಬದ ಇನಸುಲೇಟರ್ ಒಡೆದು ಹೈಟೆನ್ನನ್ ವೈರ್ ಕೆಳಗೆ ಬಿದ್ದು ಕಾರ್ಮಿಕನಿಗೆ ಶಾಕ್ ತಗುಲಿ ಆತ ವೈಕಲ್ಯಕ್ಕೆ ಈಡಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರನೆ ನಡೆಸಿದ ಧಾರವಾಡ ಕಾಯಂ ಲೋಕ ಅದಾಲತ್ ನ್ಯಾಯಾಲಯವು ಹೆಸ್ಕಾಂ ವಿರುದ್ಧ ತೀರ್ಪು ನೀಡಿ, ಪೀಡಿತನಿಗೆ 20,38,272 ರೂ ಪರಿಹಾರ ನೀಡುವಂತೆ ಆದೇಶಿಸಿದೆ.
2016 ಜುಲೈ 31 ರಂದು ಶಿರಸಿ ಮುಸ್ಲಿಂಗಲ್ಲಿಯ ಜಾವೇದ ಅಕ್ತರ್ ಅಬ್ದುಲ್ ಗಫಾರ್ ಎಂಬ ಕಾರ್ಮಿಕ ತಾಲೂಕಿನ ಹಲಸಿಗೆಯ ನರಹರಿ ಹೆಗಡೆ ಎಂಬವರ ಮನೆಯ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದಾಗ ಕೆಳಕ್ಕೆ ಬಿದ್ದ ವಿದ್ಯುತ್ ಲೈನ್ ತಾಗಿ ಆಘಾತದಿಂದ ಜಾವೇದ್ ಸಂಪೂರ್ಣ ನ್ಯೂನತೆಗೆ ಈಡಾದ.
ಈ ಕುರಿತು ಹೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ಧಾರವಾಡ ಕಾಯಂ ಲೋಕ ಅದಾಲತ್ ನ್ಯಾಯಾಲಯದಲ್ಲಿ ಪರಿಹಾರದ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಅದಾಲತ್, ಗಾಯಾಳುವಿಗೆ ಒಂದು ತಿಂಗಳ ಒಳಗಾಗಿ ಈ ಮೇಲಿನ ಪರಿಹಾರದ ಮೊತ್ತವನ್ನು ಬಡ್ಡಿ ಸಹಿತ ನೀಡುವಂತೆ ಆದೇಶಿಸಿದೆ. ಅರ್ಜಿದಾರನ ಪರವಾಗಿ ಶಿರಸಿಯ ವಕೀಲರಾದ ರಾಜೇಶ ಕೆ. ನಾಯ್ಕ ಹಾಗೂ ಎನ್ ಎನ್ ಹೆಗಡೆ ವಾದಿಸಿದ್ದರು.
Leave a Comment