ಭಟ್ಕಳ: ಕಳೆದ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡ ಮರಗಳನ್ನು ಅರಣ್ಯ ಇಲಾಖೆ ಕಡಿತ ಮಾಡಿದೆ. ಈಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ಹೇಳಿದರು.
ಅವರು ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ ಕಾನಮೋಸ್ತು ಗ್ರಾಮದಲ್ಲಿ ಭಟ್ಕಳ ತಾಲೂಕಿನ ಅರಣ್ಯವಾಸಿಗಳನ್ನ ಉಳಿಸಿ-ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರಣ್ಯವಾಸಿಗಳು ಅರಣ್ಯಕರಣಕ್ಕೆ ಪೂರಕವಾದ ಕಾರ್ಯ ಮಾಡುತ್ತಿದ್ದಾರೆ. ಆದರೆ ಅರಣ್ಯವನ್ನೇ ರಕ್ಷಿಸುವ ಅಧಿಕಾರಿಗಳು ಕಾಮಗಾರಿ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಿದ್ದಾರೆ. ಇದರ ವಿರುದ್ಧ ವ್ಯಾಪಕವಾಗಿ ಜನಜಾಗೃತಿ ಕಾರ್ಯ ಕೊಳ್ಳಲಾಗುತ್ತದೆ ಎಂದರು.
ಅರಣ್ಯವಾಸಿಗಳನ್ನು ಉಳಿಸಿ ಜಾಥಾ ಅರಣ್ಯವಾಸಿಗಳಲ್ಲಿ ನೈತಿಕ ಸೈರ್ಯ, ಕಾನೂನು ತಿಳಿವಳಿಕೆ ಹಾಗೂ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ. ಸಂಘಟನೆಯಿಂದ ಅರಣ್ಯ ಹಕ್ಕು ಪಡೆದುಕೊಳ್ಳಲು ಸಾಧ್ಯ. ಸಂಘಟನೆಗೆ ಬಲ ತುಂಬಬೇಕು. ಅರಣ್ಯ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆ ಇರುತ್ತದೆ ಎಂದು ಹೋರಾಟಗಾರ ಇನಾಯುತ ಸಾಬಂದ್ರಿ ಹೇಳಿದರು.
ವೇದಿಕೆಯ ಸಂಚಾಲಕ ಪಾಂಡುರಂಗ ನಾಯ್ಕ ಬೆಳಕೆ. ಜಿಲ್ಲಾ ಸಂಚಾಲಕ ದೇವರಾಗ ಗೊಂಡ, ಕಯುಂ ಸಾಬ, ಸವಿತಾ ಗೊಂಡ ಮಾತನಾಡಿದರು. ಶಬೀರ್, ರಿಜವಾನ್ ಸಾಬ, ರಮೇಶ ನಾಯ್ಕ, ವೆಂಕಟೇಶ ವೈದ್ಯ, ಅನಂತ ಮೋಗೆರ್, ಕಾವೇರಿ ನಾಯ್ಕ, ಭಾಸ್ಕರ ಗೊಂಡ, ಗಣೇಶ ಗೊಂಡ, ಗಣಪತಿ ಗೊಂಡ ಮುಂತಾದವರು ಉಪಸ್ಥಿತರಿದ್ದರು.
Leave a Comment