ಸಿದ್ದಾಪುರ: ತಾಲೂಕಿನ ಹೆಗ್ಗರಣೆಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಅಂದರ್ ಬಾಹರ ಇಸ್ಪೀಟ್ ಜುಗಾರಾಟ ಆಡಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಆಟಕ್ಕೆ ಬಳಸಿದ್ದ ನಗದು, ಸಾಮಗ್ರಿಗಳ ಸಮೇತ 17 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಐ ಕುಮಾರ ಕೆ. ಸಿಬ್ಬಂದಿ ಮತ್ತು ಪಂಚರೊAದಿಗೆ ದಾಳಿ ಮಾಡಿದಾಗ 17 ಮಂದಿ ವಶಕ್ಕೆ ಸಿಕ್ಕಿದ್ದಾರೆ. ಇನ್ನೂ ಈರ್ವರು ಓಡಿ ಹೋಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿತರಿಂದ ನಗದು 31,760, 11 ಮೊಬೈಲ್, 9 ಬೈಕ್ ಹಾಗೂ ಒಂದು ಕಾರನ್ನೂ ಜಪ್ತುಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ದಾಳಿಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ, ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪಿಐ ಕುಮಾರ ಕೆ. ನೇತೃತ್ವದಲ್ಲಿ, ಪಿ.ಎಸ್.ಐ ಮಹಾಂತಪ್ಪ ಕುಂಬಾರ, ಮಂಜೇಶ್ವರ ಚಂದಾವರ ಮತ್ತು ಪೊಲೀಸ್ ಸಿಬ್ಬಂದಿ ದೇವರಾಜ ನಾಯ್ಕ, ರಂಗಪ್ಪ ಕೊಕಟನೂರ, ಮೋಹನ ಗಾವಡಿ, ಒಟ್ಟಪ್ಪ ಕೆಲೂರ, ಮಂಜುನಾಥ ಮಡಿವಾಳ, ಯಶವಂತ ಬಿಳಗಿ, ರವಿಕುಮಾರ, ಮಹಮ್ಮದ್ ಮೋಹನ ಲಮಾಣಿ, ಪ್ರಸನ್ನ ನಾಯ್ಕ, ಅನಿಲ ನಾಯ್ಕ, ದೇವರಾಯರವರು ಭಾಗವಹಿಸಿದ್ದರು. ನಡೆಸಿದ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Comment