ಅಂಕೋಲಾ: ಬಾಲಕಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ವೆಸಗಿದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೊಬ್ರುವಾಡ ಗ್ರಾಮದ ಪ್ರಶಾಂತ ಕೀಶೋರ ನಾಯ್ಕ (24) ಬಂಧಿತ ಯುವಕ. ಈತನು ಕೆಲ ತಿಂಗಳ ಹಿಂದಷ್ಟೇ ಮನೆ ಕಳ್ಳತನ ಪ್ರಕರಣದಲ್ಲಿ ಜೈಲು ಅನುಭವಿಸಿ, ಬಿಡುಗಡೆಯಾಗಿ ಬಂದಿದ್ದ.
ಇದೀಗ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಆಕೆಯ ತಾಯಿ ಪೊಲೀಸ ದೂರು ನೀಡಿದ್ದಳು. ಪಿಎಸ್ಐ ಪ್ರವೀಣಕುಮಾರ ಪ್ರಕರಣ ದಾಖಲಿಸಿಕೊಂಡು ಪ್ರಶಾಂತ ನಾಯ್ಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Leave a Comment