ಯಶ್ ನಟನೆಯ ಸಿನಿಮಾ ತೆರೆಕಂಡು ಒರೋಬ್ಬರಿ ಮೂರು ವರ್ಷಗಳಾಗಿವೆ. ಕೆಜಿಎಫ್ – 1 ತೆರೆಕಂಡ ಬಳಿಕ ಅವರ ಯಾವೊಂದು ಸಿನಿಮಾ ಬಿಡುಗಡೆಯಾಗಿಲ್ಲ. ಇದೀಗ ಕೆಜಿಎಫ್ – 2 ತೆರೆಕಾಣುವ ಸನ್ನಾಹದಲ್ಲಿದೆ. ಇತ್ತೀಚೆಗಷ್ಟೇ ತೂಫಾನ್ ಹಾಡು ಹರಿನಿಟ್ಟಿದ್ದ ಚಿತ್ರತಂಡ, ಇದೀಗ ಟ್ರೇಲರ್ ರಿಲೀಸ್ ಮಾಡಿದೆ.
ಮೊದಲ ಭಾಗದಲ್ಲೇ ಸಖತ್ ಕಮಾಲ್ ಮಾಡಿದ್ದ ಕೆಜಿಎಫ್ ಟೀಂ ಅದರ ಮುಂದುವರೆದ ಭಾಗವನ್ನು ಮತ್ತಷ್ಟು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನಕ್ಕೆ ಮುಂದಾಗಿದೆ ಎಂಬುದು ಈಗ ಹರಿಬಿಟ್ಟಿರುವ ಝಲಕ್ ಸಾಕ್ಷಿಯಾಗಿದೆ.
ಸ್ಯಾಂಡಲ್ ವುಡ್ ನಿಂದ ಶಿವರಾಜ್ ಕುಮಾರ್, ಬಾಲಿವುಡ್ ನ ಕರಣ್ ಜೋಹಾರ್ ಕೆಜಿಎಫ್ ಟ್ರೇಲರ್ ರಿಲೀಸ್ ಮಾಡಿ ಚಿತ್ರ ತಂಡಕ್ಕಿ ಶುಭ ಹಾರೈಸಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಕೆಜಿಎಫ್ – 2 ಟ್ರೇಲರ್ ಕಂಡು ಯಶ್ ಅಭಿಮಾನಗಳು ಫಿದಾ ಆಗಿದ್ದಾರೆ.
ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್ ದಾಖಲಿಸಿ ಟ್ರೆಂಡಿAಗ್ ನಲ್ಲಿ ಸ್ಥಾನ ಪಡೆದುಕೊಂಡಿದ್ದು ಈ ಚಿತ್ರದ ಕ್ರೇಕ್‌ಗೆ ತಾಜಾ ಉದಾಹರಣೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಮಾಡಿದ್ದ ಕೆಜಿಎಫ್ ಈಗ ಅದನ್ನು ಮೀರಿಸಲು ಸಕಲ ಸಿದ್ದತೆ ಮಾಡಿಕೊಂಡAತಿದೆ. ಈಗಾಗಲೇ ಕೆಜಿಎಫ್ – 2 ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಟ್ರೇಲರ್ ನಿಂದ ಅದು ಮತ್ತಷ್ಟು ದಪ್ಪಟ್ಟಾಗು ವಂತೆ ಮಾಡುವಲ್ಲಿ ಚಿತ್ರ ತಂಡ ಸಫಲವಾಗಿದೆ.

ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಕಾಣುವಲಿರುವ ಈ ಸಿನಿಮಾ ಕನ್ನಡ, ತಮಿಳು, ತೆಲಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ. ಸಂಜಯ ದತ್, ರವೀನಾ ಟಂಡನ್, ಪ್ರಕಾಶ್ ರೈ ಮುಂತಾದವರು ಭಾಗ – 2 ರಲ್ಲಿ ಸೇರ್ಪಡೆಗೊಂಡಿದ್ದಾರೆ.
Leave a Comment