ಹೊನ್ನಾವರ: ತಾಲ್ಲೂಕಿನ ಸರಳಗಿಯ ಬೈಣೆಕೆರೆಯಲ್ಲಿ ಶ್ರೀನಾಗದೇವ ಮಹಾಸತಿ ಜಟಿಕೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಮೂರನೇ ದಿನ ಮಾಜಿ ಶಾಸಕ ಮಂಕಾಳ ವೈದ್ಯ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಭಾಕಾರ್ಯಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರು ಹುಟ್ಟುವಾಗ ಸಾಯುವಾಗ ಈ ಜಗತ್ತಿನಿಂದ ಏನನ್ನು ಕರೆದೊಯ್ಯಲು ಆಗುವುದಿಲ್ಲ. ಶಾಲೆ, ಧಾರ್ಮಿಕ ಕ್ಷೇತ್ರಗಳು, ದೇವಸ್ಥಾನ ಮಠ ಗಳ ನಿರ್ಮಾಣ ಮಾಡಿದರೆ ಅದು ಶಾಶ್ವತ ವಾಗಿ ಇರುವುದರಿಂದ ಶಿಕ್ಷಣ ಹಾಗೂ ಧಾರ್ಮಿಕ ಸ್ಥಳಗಳ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದೇನೆ. ಗ್ರಾಮಗಳ ಅಭಿವೃದ್ಧಿಯಾಗಲು ಇಂತಹ ಸ್ಥಳಗಳು ಅಭಿವೃದ್ಧಿಯಿಂದ ಮಾತ್ರ ಸಾಧ್ಯವಿದೆ ಎಂದರು.

ಗೋವಿAದ ನಾಯ್ಕ ಮಾತನಾಡಿ, ಮಾಜಿ ಶಾಸಕರು ಭಟ್ಕಳದ ಕರಿಕಲ್‌ನಲ್ಲಿ 2 ಕೋಟಿಗೂ ಅಧಿಕ ವೆಚ್ಚದಲ್ಲಿ ರಾಮಧ್ಯಾನ ಮಂದಿರವನ್ನ ನಿರ್ಮಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಮಂಕಾಳ ವೈದ್ಯರು ಸಹಾಯ ಸಹಕಾರ ನೀಡದ ಕ್ಷೇತ್ರವಿಲ್ಲ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಗಣೇಶ ನಾಯ್ಕ ವಹಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸದಸ್ಯರು ಪದಾದಿಕಾರಿಗಳು. ಉಪ್ಪೋಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾದೇವಿ ಉಪ್ಪಾರ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ರಾಘವೇಂದ್ರ ಆರ್. ನಾಯ್ಕ, ಗುತ್ತಿಗೆದಾರ ಪ್ರಶಾಂತ್ ನಾಯ್ಕ, ಮಂಕಾಳ ವೈದ್ಯರ ಅಭಿಮಾನಿಗಳಾದ ನಾಗೇಶ ನಾಯ್ಕ, ಮಾದೇವ ನಾಯ್ಕ ಇದ್ದರು.
Leave a Comment