ಶಿರಸಿ : 2021 ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರಿAದ ನಡೆಸುವ ಹಿಂದುಸ್ತಾನಿ ಸಂಗೀತ (ಗಾಯನ) ಪರೀಕ್ಷೆ ಕಿರಿಯರ ವಿಭಾಗದಲ್ಲಿ ವಸುಂಧರ ವಿ.ಹೆಗಡೆ ಸೋಮನಳ್ಳಿ ಇವಳು ಶಿರಸಿ ಕೇಂದ್ರಕ್ಕೆ ಶೇ 91.25 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.

ಇವಳು ವಿದುಷಿ ಸುಷ್ಮಾ ವಿ. ಹೆಗಡೆ ಇಸಳೂರು ಇವರಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತವನ್ನು ಅಭ್ಯಸಿಸುತ್ತಿದ್ದು, ಶ್ರೀ ನರಹರಿ ದೀಕ್ಷಿತ್ ಬೆಂಗಳೂರು ಇವರಲ್ಲಿ ಸುಗಮ ಸಂಗೀತವನ್ನು ಕಲಿಯುತ್ತದ್ದಾಳೆ. ಚಂದನ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಇವಳು ಡಾ. ವಿನಾಯಕ ವಿ.ಹೆಗಡೆ ಸೋಮನಳ್ಳಿ ಹಾಗೂ ವಾಣಿ ವಿ.ಹೆಗಡೆ ದಂಪತಿಯ ಪುತ್ರಿಯಾಗಿದ್ದಾಳೆ.
Leave a Comment