ಹೊನ್ನಾವರ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕನಿಗೆ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ವತಿಯಿಂದ ಆರ್ಥಿಕ ನೆರವಾಗುವ ಮೂಲಕ ಮಾನವೀಯತೆ ಮೆರೆದರು. ತಾಲೂಕಿನ ಗೇರುಸೊಪ್ಪಾದ ವಿನಾಯಕ ಪುರಂದರ ನಾಯ್ಕ ಇವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಶಸ್ತ್ರ ಚಿಕಿತ್ಸೆಗೆ ಅಂದಾಜು 10ಲಕ್ಷ ರೂಪಾಯಿ ಅಗತ್ಯ ಎಂದು ಮಣಿಪಾಲದ ತಜ್ಞ ವೈದ್ಯರು ತಿಳಿಸಿರುತ್ತಾರೆ.
ಈಗಾಗಲೇ ತಂದೆಯನ್ನು ಕಳೆದುಕೊಂಡ ವಿನಾಯಕ್ ಮತ್ತು ಆತನ ಸಹೋದರನ ಹಾಗೂ ಮನೆಯ ನಿರ್ವಹಣೆ ಜವಾಬ್ದಾರಿಯು ತಾಯಿ ರೇಣುಕಾ ಮೇಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ತಮ್ಮ ಮಗನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗಾಗಿ ಧನ ಸಹಾಯ ಮಾಡಿ ಎಂದು ರೇಣುಕಾ ಪುರಂದರ ನಾಯ್ಕ ವಿನಂತಿಸಿದ್ದರು.
ಬಿಎಸ್ ಎನ್ ಡಿಪಿ ಸಂಘ ಟನೆಯ ಪ್ರಮುಖರು ರೇಣುಕಾ ಅವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ಚಿಕಿತ್ಸೆಗೆ 27,500 ರೂಪಾಯಿ ಮೊತ್ತದ ಧನಸಹಾಯ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಧನಂಜಯ ನಾಯ್ಕ ರಾಯಲಕೇರಿ, ಸಂಕಷ್ಟದಲ್ಲಿರುವ ಈ ಬಡ ಕುಟುಂಬಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ಮಾಡಿ ಎಂದು ದಾನಿಗಳಲ್ಲಿ ವಿನಂತಿಸಿದರು.
ಸಂಘಟನೆಯ ಕರೆಗೆ ಓಗೊಟ್ಟು ಸ್ಪಂದಿಸಿ ಬಡಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರಾಮನಾಥ ಹೊಸಾಕುಳಿ, ಶ್ರೀನಾಥ್ ನಾಯ್ಕ, ಶ್ರೀನಿವಾಸ್ .ಎಸ್.ಎನ್, ಮಂಜುನಾಥ್ ಶರಣ,ಸಂದೀಪ್ ಉಪಸ್ಥಿತರಿದ್ದರು.
Leave a Comment