ಭಟ್ಕಳ : ಭಟ್ಕಳದ ಗ್ರಾಮ ದೇವತ ಶ್ರೀ ಚೆನ್ನಪಟ್ಟಣ ಹನೂಮಂತ ದೇವರ ಜಾತ್ರೆಯು ಎಪ್ರಿಲ್ 3 ರಂದು ಗರುಡನ ಪಟ ಕಟ್ಟುವ ಕಾರ್ಯದೊಂದಿಗೆ ಚಾಲನೆಗೊಂಡು ದೇವಸ್ಥಾನದಲ್ಲಿ ರಥೋತ್ಸವಕ್ಕೆ ಸಂಬAಧ ಪಟ್ಟಂತೆ ಧಾರ್ಮಿಕ ವಿಧಿ ವಿದಾನಗಳು ಆರಂಭವಾಗಿದ್ದು, ರಾಮನವಮಿ (ಎ. 10) ರಂದು ರಥೋತ್ಸವ ಬಹಳ ವಿಜೃಂಭಣೆಯಿAದ ನಡೆಯಲಿದೆ.
ಇಲ್ಲಿನ ಹನುಮಂತ ದೇವಸ್ಥಾನಕ್ಕೆ ಸುಮಾರು 1500 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಈ ದೇವಸ್ಥಾನದ ಅಷ್ಟ ದಿಕ್ಕುಗಳಲ್ಲಿಯೂ ಕೂಡಾ ಒಂದೊAದು ಹನುಮಂತನ ದೇವಸ್ಥಾನವಿರುವುದು ವಿಶೇಷವಾಗಿದೆ.
ಸಾಧಾರಣವಾಗಿ ಹನುಮಂತ ದೇವರಿಗೆ ಆಗಮೋಕ್ತ ಪದ್ಧತಿಯಲ್ಲಿ ಪೂಜೆ ಮಾಡುವುದು ವಿರಳ. ರಾಜ್ಯದಲ್ಲಿ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಆಗಮೋಕ್ತ ಪದ್ದತಿಯಂತೆ ದೇವಾಲಯದ ಪ್ರಧಾನ ದೇವರಾಗಿ ಹನುಮಂತನ್ನು ಪೂಜಿಸುವುದು ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ವಶೇಷತೆಗಳಲ್ಲಿ ಒಂದು ಇಲ್ಲಿ ಪ್ರಧಾನ ದೇವರಿಗೆ ಎಲ್ಲ ವಿಧದ ಅಭೀಷೇಕ, ಪೂಜೆ ನೈವೇದ್ಯ, ಬಲಿ ಇತ್ಯಾದಿಗಳು ಸಲ್ಲುತ್ತವೆ.
Leave a Comment