ಶಿರಸಿ : ಮಧ್ಯವಯಸ್ಕ (25ವರ್ಷದೊಳಗಿನ) ಅಡಿಕೆ ಮರಗಳು ಹಠಾತ್ತೆನೆ ಒಣಗಿ ಹೋಗುತ್ತಿರುವ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಉತ್ತರ ಕನ್ನಡ ಜಿಲ್ಲಾ ತೋಟಗಾರಿಕೆ ಇಲಾಖೆ, ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸ್ಥಳ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿಕೊಂಡ ಪ್ರಯುಕ್ತ ಸಂಸ್ಥೆಯ ವಿಜ್ಞಾನಿಗಳಾದ ಡಾ ವಿನಾಯಕ ಹೆಗಡೆ ಹಾಗೂ ಸಂತೋಷ ಅವರು ಏ. 19 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಲ್ಲಾಪುರ ತಾಲೂಕಿನ ಜಕ್ಕೊಳ್ಳಿ ಗ್ರಾಮದ ವಿಶ್ವೇಶ್ವರ ಹೆಗಡೆ ಹಾಗೂ ಉಚಗೇರಿ ಗ್ರಾಮದ ಅನಂತ ನಾಗಪ್ಪ ಹೆಗಡೆ ಅವರ ತೋಟದಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ಪಡೆದಿದ್ದು ಇಲ್ಲಿನ ತೋಟಗಳನ್ನು ಪರಿಶೀಲಿಸಿದ ವಿಜ್ಞಾನಿಗಳು ಸಮಸ್ಯೆಗೆ ತುತ್ತಾದ ಮರಗಳ ವಿವಿಧ ಭಾಗಗಳನ್ನು ಹೆಚ್ಚಿನ ಸಂಶೋಧನೆಗಾಗಿ ಪಡೆದುಕೊಂಡರು.
ಮರದ ಮಧ್ಯಭಾಗದಲ್ಲಿ ಸಮಸ್ಯೆ ಕಂಡುಬAದಿದ್ದು ಮರದ ತಿರುಳು ಹಾನಿಗೊಳಗಾಗಿ ಆ ಭಾಗದಿಂದ ಮೇಲೆ ಮತ್ತು ಕೆಳಗಡೆ ಹರಡುತ್ತಿರುವುದು ಕಂಡುಬAದಿದೆ. ಪ್ರಾಥಮಿಕವಾಗಿ ಕಾಂಡ ಕೊರೆಯುವ ಕೀಟದ ಭಾದೆಯ ಜೊತೆಗೆ ಶಿಲೀದ್ರಗಳಿಂದ ಹಾನಿಯಾದ ಲಕ್ಷಣಗಳು ಕಂಡುಬAದಿದೆ. ಹೆಚ್ಚಿನ ಸಂಶೋಧನೆ ನಡೆಸಿ ವರದಿ ನೀಡುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ತಂಡದೊAದಿಗೆ ತೋಡಗಾರಿಕೆ ಉಪನಿರ್ದೇಶಕ ಡಾ.ಬಿ.ಪಿ. ಸತೀಶ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ, ಹಾಗೂ ಟಿಎಮ್ ಎಸ್ ವಿಷಯ ತಜ್ಞ ಕಿಶೋರ ಹೆಗಡೆ ಉಪಸ್ಥಿತರಿದ್ದರು.
Leave a Comment