• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜ್ಯದಲ್ಲಿ ಗೋಮಾಳ ಭೂಮಿಯನ್ನು ಏಕೆ ಉಳಸಿಕೊಳ್ಳಬೇಕು : ವೈಜ್ಞಾನಿಕ ವಿಶ್ಲೇಷಣೆ

April 29, 2022 by Deepika Leave a Comment

ರಾಜ್ಯದಲ್ಲಿರುವ ಸಾಮೂಹಿಕ ಭೂಮಿ :

ರಾಜ್ಯದಲ್ಲಿ ಹಳ್ಳಿಗರ ಮೇವು ಮತ್ತು ಕೃಷಿಗೆ ಪೂರಕವಾದ ಬೇಡಿಕೆಗಳನ್ನು ಪೂರೈಸಲೆಂದು ಮೀಸಲಿರಿಸಿದ ಸುಮಾರು 17.5 ಲಕ್ಷ ಹೆ. ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ ಗಾಯರಾಣ, ಹಲ್ಲುಬನ್ನಿ, ಗೋಚರ, ಜಾನುವಾರು ಮುಪ್ಫತ್ತು, ಜಾಡಿ, ಕಾವಲ್, ಅಮೃತಮಹಲ್ ಕಾವಲ್, ಕುಮ್ಕಿ, ಬೆಟ್ಟ, ಸೊಪ್ಪಿನಬೆಟ್ಟ ಇತ್ಯಾದಿ ಹೆರರುಗಳಿಂದ ಸರ್ಕಾರಿ ದಾಖಲೆಗಳಲ್ಲಿ ಗುರುತಿಸಲಾಗುತ್ತದೆ. ಇದೂ ಸೇರಿದಂತೆ, ರಾಜ್ಯದಲ್ಲಿ ಒಟ್ಟೂ 25 ಲಕ್ಷ ಹೆ. ಸರ್ಕಾರಿ ಕಂದಾಯ ಜಮೀನಿದೆ. ಇದು ಅತ್ಯಂತ ಮಹತ್ವದ ಸಾಮೂಹಿಕ ಭೂಮಿಯಾಗಿದೆ.

ಸಾಮೂಹಿಕ ಭೂಮಿಕ ಮತ್ವದ :

ಹಳ್ಳಿಗರಿಗೆಲ್ಲರೂ ಸಮಾನವಾಗಿ ಬಳಸುವ ಪ್ರದೇಶವಿದು, ಇಲ್ಲಿ ಕೆರೆ – ಹಳ್ಳಿಗಳಂಥ ಜಲಮೂಲಗಳು, ಹಲ್ಲು ನೀಡುವ ಗೋಮಾಳ, ಕರುಚಲು ಕಾಡು ಎಲ್ಲವೂ ಇವೆ. ದಿನಂಪ್ರತಿ ಬೇಕಾಗುವ ಮೇವಿನ ಹಲ್ಲು ಬೇಸಾಯಕ್ಕಾಗಿ ಸೊಪ್ಪು – ತರಗಲೆ, ಉರುವಲು, ಜೇನು, ಹಣ್ಣು – ಹಂಪಲುಗಳಲ್ಲಿ ಹಳ್ಳಿಗರಿಗೆ ದೊರಕುವದು ಈ ಪ್ರದೇಶದಿಂದ ಕಾಡಿನ ಮೇಲೆ ಹಳ್ಳಿ – ಪಟ್ಟಣಗಳ ಜನಜೀವನದ ಒತ್ತಡವನ್ನು ಕಡಿಮೆಮಾಡುವದರ ಜೊತೆಗೆ, ಕಾಡುಪ್ರಾಣಿಗಳು ಊರಿಗೆ ಬರದಂತೆ ತಡೆಯುವ ರಕ್ಷಣಾಪೊರೆಯಾಗಿಯೂ ಈ ಪ್ರದೇಶದಿಂದ ಕಾಡಿನ ಮೇಲೆ ಹಳ್ಳಿ – ಪಟ್ಟಣಗಳ ಜನಜೀವನದ ಒತ್ತಡವನ್ನು ಕಡಿಮೆಮಾಡುವದರ ಜೊತೆಗೆ, ಕಾಡುಪ್ರಾಣಿಗಳು ಊರಿಗೆ ಬರದಂತೆ ತಡೆಯುವ ರಕ್ಷಣಾಪೊರೆಯಾಗಿಯೂ ಈ ಪ್ರದೇಶಗಳು ಕಾರ್ಯನಿರ್ವಹಿಸುತ್ತವೆ. ನೆರೆ – ಬರಗಳು ಬಂದಾಗ ಆಗುವ ಅಘಾತದ ತೀವೃವೆ ತಗ್ಗಿಸುತ್ತವೆ. ಹೀಗಾಗಿ ಇದೊಂದು ಅಮೂಲ್ಯವಾದ ಸಮುದಾಯ ಸಂಪತ್ತು (Common Pool Resources – CPR) ಎಂದು ಪರಿಸರ – ಅರ್ಥಶಾಸ್ತçಜ್ಞರು ಗುರುತಿಸುತ್ತಾರೆ.

ರಾಜ್ಯದಲ್ಲಿ ಗೋಮಾಳ ಭೂಮಿ

ಈ ಸರ್ಕಾರಿ ಕಂದಾಯಭೂಮಿ ಪ್ರದೇಶಗಳನ್ನು ನಿರ್ವಹಿಸಬೇಕಾದ ಬಗೆ :

ಈ ಸರ್ಕಾರಿ ಭೂಮಿ ಇರುವದು ಮುಖ್ಯವಾಗಿ, ಹಳ್ಳಿಗಳ ಕೃಷಿ, ಹೈನುಗಾರಿಕೆ ಮತ್ತು ಜನಜೀವನವನ್ನು ಘೋಷಿಸಲು. ಅಗತ್ಯವಿದ್ದಾಗ ಸಾಮೂಹಿಕತದ ರಸ್ತೆ, ಶಾಲೆ, ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಉಪಯೋಸಗಗಳಿಗೆ ಈ ಸರ್ಕಾರಿ ಕಂದಾಯಭೂಮಿಯ ಕೃಷಿಗೆ ಯೋಗ್ಯವಲ್ಲದ ಭಾಗಗಳಾದ ಸಿ ಮತ್ತಿ ಡಿ ಪ್ರದೇಶಗಳನ್ನು ಬಳಸಬೇಕಾದ್ದು ನ್ಯಾಯಯುತವೇ ಆಗಿದೆ.

ನೈಜ ವಸತಿಹೀನರಿಗೆ ಮನೆಕಟ್ಟಲು ಅಥವಾ ಭೂರಹಿತರಿಗೆ ಉಳಿಮೆಮಾಡಿ ಬದುಕು ಕಟ್ಟಿಕೊಳ್ಳಲು ಸಹ ಈ ಸಾಮೂಹಿಕ ಭೂಮಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ಕರೆ ಅಚ್ಚುಕಟ್ಟು ಅಭಿವೃದ್ಧಿ ನೀರಾವರಿ ಇತ್ಯಾದಿ ಸಾರ್ವಜನಿಕ ಉದ್ದೇಶಗಳಿಗೂ ಬಳಸಬೇಕಾಗುತ್ತದೆ. ಈ ಬಗೆಯ ಸ್ಥಳೀಯ ಅಗತ್ಯಗಳನ್ನೆಲ್ಲ ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸಿ, ನ್ಯಾಯಯುತವಾಗಿ ಭೂಮಂಜೂರಿ ಮಾಡುವ ವಿವೇಚನಾ ಅಧಿಕಾರವನ್ನು ಭೂಕಂದಾಯ ಕಾಯ್ದೆ ಅನ್ವಯ ಸರ್ಕಾರ ಮಾಡಬೇಕಿದೆ.

ಇತ್ತೀಚಿನ ದಶಕಗಳಲ್ಲಾದ ಗೋಮಾಳ ಭೂಮೀಯ ಅಪಾರ ನಾಶ :

ಆದರೆ, ಈ ಸಮೃದ್ದಿ ಸಾಮೂಹಿಕ ಭೂಮಿಯ ಇತ್ತೀಚಿನ ದಶಕಗಳಲ್ಲಿ ವೇಗವಾಗಿ ಮತ್ತು ಗಂಭೀರ ಪ್ರಮಾಣದಲ್ಲಿ ನಾಶವಾಗುತ್ತಿದೆ. ಇದರಲ್ಲಿ, ಸರ್ಕಾರದ ಅಂಕಿ – ಅಂಶದ ಪ್ರಕಾರ ಸುಮಾರು ಒಂದೊಮುಕ್ಕಾಲು ಲಕ್ಷ ಹೆ. ಕಂದಾಯ ಭೂಮಿ ಒತ್ತುವರಿಯಾಗಿದೆ. ಹದಿನಾರು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿಯಿವೆ.

ವೇಗದ ನಗರೀಕರಣ ವೇಗದ ನಗರೀಕರಣ, ವೇಗದ ಭೂಒತ್ತುವರಿ, ಉದ್ಯಮಗಳಿಗೆ ಗುತ್ತಿಗೆ ಆಧಾರದಲ್ಲಿ ಈ ಪ್ರದೇಶವನ್ನು ನೀಡಿರುವುದು, ಏಕಪ್ರಭೇಧ ನೆಡುತೋಪುಗಳ ನಿರ್ಮಾಣ, ಗಣಿಗಾರಿಕೆ ಇತ್ಯಾದಿ ಅಂಶಗಳೆಲ್ಲ ಇದಕ್ಕೆ ಕಾರಣವಾಗಿವೆ.

ಇದರ ದುಷ್ಟಪರಿಣಾಮಗಳನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ನಿರೂಪಿಸಿವೆ. ಸರ್ಕಾರವೆ ರಚಿಸಿದ್ದ ಏ.ಟಿ.ರಾಮಸ್ವಾಮಿ ಸದನ ಸಮಿತಿ ಮತ್ತು ಬಾಲಸುಬ್ರಮಣ್ಯ ತಜ್ಞಸಮಿತಿಗಳು ಇದರ ಅಪಾಯವನ್ನು ಗುರುತಿಸಿವೆ. ಗೋಮಾಳಗಳನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಹೈಕೋರ್ಟ್ ಸಹ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ.

ಪರಿಣಾಮಗಳೇನು :

ರಾಜ್ಯಾದ್ಯಾಂತ ಗೋಮಾಳ ಸಾಮೂಹಿಕ ಭೂಮಿ ಕುಗ್ಗತೊಡಗಿರುವದರಿಂದ ಹೊಳೆ – ಕರೆ, ನದಿ ಪ್ರದೇಶಗಳ ಕಣಿವೆಗಳಲ್ಲಿ ಹಸಿರುಕವಚ ಮಾಯವಾಗಿ ಅಂತರ್ಜಲ ಕುಸಿಯುತ್ತಿದೆ. ಮೇವು ಕೊರಯಿಂದಾಗಿ ಜನರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಮೇಯಲು ಗೋಮಾಳವಿಲ್ಲದೆ ಮಲೆನಾಡು – ಗಿಡ್ಡದಂತ ಅಪ್ಪಟ ದೇಸಿ ಆಕಳು ತಳಿಯ ಸಂತತಿಯು ವಿನಾಶದಂಚಿಗೆ ತಲುಪಿದೆ.

ಸಾವಯವ ಕೃಷಿಗೆ ಬೇಕಾದ ಹಸಿರುಸೊಪ್ಪು, ತರಗಲೆ ಇತ್ಯಾದಿ ಬಳಸುರಿಗಳು ದೊರಕದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜೇನುಸಂತತಿ ಕುಸಿಯುತ್ತಿದ್ದು, ಕಾಡಿನ ಜೇನಿನ ಇಳುವರಿ ಕಡಿಮೆಯಾಗುತ್ತಿರುವದಲ್ಲದೆ, ಕೃಷಿ ಇಳುವರಿಯೂ ಕುಸಿಯುತ್ತಿದೆ. ಬೇಸಿಗೆಯಲ್ಲಿ ಹಳ್ಳಿಗಳ ಸುತ್ತಲು ಬೆಂಕಿ ಪ್ರಕರಣಗಳು ಹೆಚ್ಚಾಗುತ್ತಿವೆ. ಒಟ್ಟಿನಲ್ಲಿ ಗ್ರಾಮೀಣ ಬದುಕಿನ ರಕ್ಷಣಾಪೊರೆಯಂತಿದ್ದ ಈ ಸಮುದಾಯಬೂಮಿ ನಾಶದಿಂದ, ಗ್ರಾಮೀಣ ಬದುಕು ಕುಸಿಯುತ್ತಿದೆ.

ಸರ್ಕಾರ ಏನು ಮಾಡಬೇಕಿದೆ :

ಗ್ರಾಮೀಣರ ಬದುಕು ಕಾಯುವ ಮೂಲಸೆಲೆಗಳಲ್ಲೊಂದಾದ ಹಸಿರು ಪುಪ್ಪಸ ದಂತಿರುವ ಈ ಗೋಮಾಳ ಬೆಟ್ಟ ಭೂಮಿಯನ್ನು ಸರ್ಕಾರವು ರಕ್ಷಿಸಲೇಬೇಕಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಸರ್ಕಾರವು ತನ್ನ ನೀತಿಯನ್ನು ಅಳವಡಿಸಿಕೊಳ್ಳಬೇಕಿದೆ.

  1. ಈ ಸಮೂದಾಯ ಪ್ರದೇಶಗಳನ್ನು ಸಾರ್ವಜನಿಕ ವಲಯದಲ್ಲೇ ಇರಿಸಿಕೊಳ್ಳಬೇಕು. ಇದನ್ನು ಉದ್ಯಮಗಳಿಗೆ, ಖಾಸಗಿ ಸಂಘ ಸಂಸ್ಥೆಗಳಿಗೆ ಪರಭಾರೆ ಮಾಡಬಾರದು.
  2. ಈಗಾಗಲೇ ಅತಿಕ್ರಮಣವಾಗಿರುವ ಅಥವಾ ಪರಬಾರೆಯಾಗಿರುವ ಗೋಮಾಳ ಭೂಮಿಯನ್ನು ಪುನಃ ಹಸಿರೀಕರಣ ಮಾಡಲು ಸೂಕ್ತ ಕಾರ್ಯಕ್ರಮ ರೂಪಿಸಬೇಕು.
  3. ಸರ್ಕಾರವು ಎಲ್ಲೆಡೆ ಗೋಶಾಲೆಗಳನ್ನು ಸ್ಥಾಪಿಸಿರುವದು ಸ್ವಾಗತಾರ್ಹ. ಇದಕ್ಕೆ ಪೂರಕವಾಗಿ ಆ ಪ್ರದೇಶಗಳಲ್ಲಿ ಗೋಮಾಳವನ್ನು ಗುರುತಿಸಿ ರಕ್ಷಿಸುವ ಯೋಜನೆಯನ್ನುಪಶುಸಂಗೊಪನೆ ಇಲಾಖೆ ಮಾಡಬೇಕು.
  4. ಪ್ರತಿ ಊರಿನಲ್ಲೂ ಇರುವ ಗೋಮಾಳ ಸೊಪ್ಪಿನ ಬೆಟ್ಟ ಪ್ರದೇಶಗಳನ್ನು ಗುರುತಿಸಿ, ಅದನ್ನು ರಕ್ಷಿಸುವ ಯೋಜನೆಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕು.
  5. ರಾಜ್ಯದ ಎಲ್ಲೆಡೆ ಗ್ರಾಮ ಪಂಚಾಯತಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಸಾಮೂಹಿಕ ಭೂಮಿಯನ್ನು ಗುರುತಿಸಿ, ಸಂರಕ್ಷಿಸುವ ಸೂಕ್ತ ನೀತಿ ಹಾಗೂ ಕಾರ್ಯಕ್ರಮಗಳನ್ನು ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ಜನಸಹಾಭಾಗಿತ್ವದಲ್ಲಿ ರೊಪಿಸಬೇಕು.

ಕೃಪೆ: ವೃಕ್ಷಲಕ್ಷ

….ನಾಗರಿಕ

Share this:

  • WhatsApp
  • Twitter
  • Facebook
  • Telegram
  • Email
  • Print

Filed Under: Canara News, ಕೃಷಿ

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...