ಸಿದ್ದಾಪುರ : ರೈತರು ಜೇನುಕೃಷಿ ಕೈಗೊಳ್ಳುವುದರಿಂದ ಹೆಚ್ಚುವರಿ ಆಧಾಯವಲ್ಲದೇ, ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಮತ್ತು ಗುಣಪಟ್ಟ ಹೆಚ್ಚಿಸಬಹುದಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು 2022-23ನೇ ಸಾಲಿನ ಮಧವನ ಮತ್ತು ಜೇನುಗಾರಿಕೆ ಅಭಿವೃದ್ದಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ 42 ರೈತ ಫಲಾನುಭವಿಗಳಿಗೆ ಜೇನುತುಪ್ಪ ತೆಗೆಯುವ ಯಂತ್ರವನ್ನು ಶೇ 75 ರ ಸಹಾಯಧನದಲ್ಲಿ ವಿತರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಆಸಕ್ತ ಜೇನು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶುದ್ಧ ಜೇನು ತುಪ್ಪಕ್ಕೆ ವಿಶೇಷ ಬೆಲೆಯಿದೆ. ಮಲೆನಾಡು ಪಶ್ಚಿಮ ಘಟ್ಟದ ಜೇನು ಉತ್ಪನ್ನಗಳು ಪ್ರತ್ಯೇಕ ಶೇಣಿಯಲ್ಲಿ ಮಾರಾಟವಾಗುವ ಇಲ್ಲಿನ ಸಂಘಟಣೆಗಳು ಉತ್ತಮ ಕಾರ್ಯ ಕೈಗೊಳ್ಳುತ್ತಿದೆ. ಇಲಾಖೆಯಿಂದ ಶೇ. 75ರಂತೆ ಜೇನು ಪೆಟ್ಟಿಗೆ ಹಾಗೂ ಕುಟುಂಬಗಳಿಗೆ, ಖಾಸಗಿ ಮಧುವನಗಳಿಗೆ, ತುಪ್ಪ ತೆಗೆಯುವ ಯಂತ್ರಗಳಿಗೆ ಸಹಾಯಧನ ಲಭ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಸತೀಶ ಬಿ ಪಿ ತೋಟಗಾರಿಕೆ ಉಪನಿರ್ದೇಶಕರು ಶಿರಸಿ, ಪಟ್ಟಣ ಪಂಚಾಯತ ಸದಸ್ಯರಾದ ಮಾರುತಿ ಟಿ. ನಾಯ್ಕ, ಗುರುರಾಜ್ ಶಾನಭಾಗ್ ನಂದನ ಬೀರ್ಕರ್, ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರಾದ ಅರುಣ ಹೆಚ್.ಜಿ. ಭಾಗ್ಯವಿಧಾತ ರೈತ ಉತ್ಪಾದಕ ಕಂಪನಿ (ನಿ) ಬಿಳಗಿ ಎಂ.ಡಿ ಪ್ರಸನ್ನ ಶ್ರೀರಾಮ ಹೆಗಡೆ ಪಾಲ್ಗೊಂಡಿದ್ದರು.
ಮಹಾಬಲೇಶ್ವರ ಬಿ.ಎಸ್ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಯಕ್ರಮವನ್ನು ನಿರ್ವಹಿಸಿದರು. ಇಲಾಖೆಯ ಎಲ್ಲಾ ಸಿಬ್ಬಂದಿಗಳು ಜೇನು ತುಪ್ಪ ತೆಗೆಯುವ ಯಂತ್ರವಿತರಣೆಯಲ್ಲಿ ಸಹಕರಿಸಿದರು.
Leave a Comment