ಹೊನ್ನಾವರ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳಿಗೆ ತಾಲೂಕಿನ ವಿವಿಧ ಕಡೆ ಮನೆ, ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.
ತಾಲೂಕಿನ ಕರ್ಕಿಯ ನಿವಾಸಿ ರಾಮಚಂದ್ರ ಕೆಂಚ ನಾಯ್ಕ ಹಾಗೂ ಭಾಸ್ಟೇರಿಯ ಕನ್ನೆ ಕಣಿಯಾ ಮುಕ್ರಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಾಸರಕೋಡದ ನಿವಾಸಿ ಫಾತಿಮಾ ಸಾಲ್ವದೋರ ಡಯಾಸ್ ಅವರ ಮನೆಗೆ ಹಾನಿಯಾಗಿದೆ.

ಗುಂಡಿಬೈಲ್ ನಿವಾಸಿ ಈಶ್ವರ ಗಣಪ ಹಳ್ಳೇರ್ ಅವರ ಮನೆ ಮೇಲೆ ಒಣಗಿದ ಅಡಕೆ ಮರ ಬಿದ್ದು ಹಾನಿಯಾಗಿದೆ. ಕಣ್ಣೀರಿನ ಅಶೋಕ ಗಣಪತಿ ನಾಯ್ಕ ಅವರ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಚಿತ್ತಾರ ಪಂಚಾಯಿತಿ, ನೇಸರ್ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವುಗೊಳಿಸಲಾಗಿದೆ.
ಪಟ್ಟಣದ ಸರ್ಫಿ ಸೆಂಟರ್ ಮಾರ್ಗದ ರಸ್ತೆಯಲ್ಲಿ ನೀರು ನುಗ್ಗಿತು. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ, ಖರ್ವಾ ಕ್ರಾಸ್ ಹತ್ತಿರ ಗುಡ್ಡ ಕುಸಿತವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೆಸಿಬಿ ಹಾಗೂ ಟಿಪ್ಪರ್ ಲಾರಿಗಳಿಂದ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ. ಹಾನಿಯಾದ ಸ್ಥಳಕ್ಕೆ ಕಂದಾಯ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment