ಕುಮಟಾ : ತಾಲೂಕಿನ ಬಂಗಣೆಯ ರಾಮಾ ಮರಾಠಿ ತನ್ನ ಪತ್ನಿ ತಾಕಿ ರಾಮ ಮರಾಠಿ (35) ಹಾಗೂ ಪುತ್ರ ಲಕ್ಷö್ಮಣ ರಾಮಾ ಮರಾಠಿ (12) ಇವರನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಡಿತ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಓರ್ವ ಪುತ್ರನನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾ ತಾಲೂಕಿನ ಬಂಗಣೆಯಲ್ಲಿ ನಡೆದಿದೆ.

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ, ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಪ್ರತಿನಿತ್ಯ ಸಾರಾಯಿ ಸೇವಿಸಿ, ಹೆಂಡತಿ ಮತ್ತು ಮಕ್ಕಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಿದ್ದನು. ಜು. 7 ರಂದು ರಾತ್ರಿ ಪತ್ನಿ ತಾಕಿ ಮರಾಠಿ, ಪುತ್ರರಾದ ಲಕ್ಷö್ಮಣ ಮರಾಠಿ ಮತ್ತು ಬಾಸ್ಕರ ಮಲಗಿದ್ದಾಗ ಏಕಾಏಕಿ ಆಗಮಿಸಿ, ಕತ್ತಿಯಿಂದ ಪತ್ನಿ ತಾಕಿ ಮರಾಠಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಇದನ್ನು ಗಮನಿಸಿದ ಇಬ್ಬರು ಪುತ್ರರು ಅಲ್ಲಿಂದ ಓಡಿ ಹೋಗುತ್ತಿರುವಾಗ ಲಕ್ಷö್ಮಣ ಮರಾಠಿಯನ್ನು ಬೆನ್ನಟ್ಟಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇನ್ನೊಬ್ಬ ಪುತ್ರ ಭಾಸ್ಕರ ಮರಾಠಿ ಪಾರಾಗಿದ್ದಾನೆ. ನಂತರ ರಾಮಾ ಮರಾಠಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಭಾಸ್ಕರ ಮರಾಠಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಘಟನಾ ಸ್ಥಳಕ್ಕೆ ಪಿ.ಐ ತಿಮ್ಮಪ್ಪ ನಾಯ್ಕ, ಪಿ.ಎಸ್.ಐ ನವೀನ ನಾಯ್ಕ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment