ಅಂಕೋಲಾ : ತಾಲೂಕಿನ ಡೋಗ್ರಿ ಗ್ರಾಪಂ ವ್ಯಾಪ್ರಿಯ ಕಲ್ಲೇಶ್ವರ ವಂಡರಮನೆಯ ಸೂರಜ್ ಶ್ರೀಧರ ಭಂಡಾರಿ (32), ಸಂದೀಪ ದಯಾನಂದ ಭಂಡಾರಿ (25), ಕನಕಹಳ್ಳಿಯ ಪ್ರಸಾದ ರಾಮಾ ದೇಸಾಯಿ (23) ಮತ್ತು ಹಳಿಯಾಳ ತಾಲೂಕ ಜನಗಾದ ನಿವಾಸಿ ಶೌಕತ್ ಸಾಬ್ ಹುಸೇನ್ ಸಾಬ್ ಮುಜಾವರ್ (27) ಬಂಧಿತ ಆರೋಪಿಗಳಾಗಿದ್ದಾರೆ.

ತಾಲೂಕಿನ ರಾ.ಹೆ 63ರ ಮಾಸ್ತಿಕಟ್ಟಾ ಸಮೀಪ ಶನಿವಾರ ಸಂಜೆ ಜಿಂಕೆಯ ಕೋಡುಗಳನ್ನು ಮಾರುತಿ ಎರ್ಟಿಗಾ ಕಾರ್ ನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ನಾಲ್ವರ ಮೇಲೆ ಜಿಲ್ಲಾ ವಿಶೇಷ ಪೊಲೀಸ್ ದಳ ಮತ್ತು ಅಂಕೋಲಾ ಪೊಲೀಸರು ಜಂಟಿ ದಾಳಿ ನಡೆಸಿ, ಅವರನ್ನು ಬಂಧಿಸಿ, ಕಾರು ಮತ್ತು ಎರಡು ಜಿಂಕೆಯ ಕೋಡುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಇವರು ಕಳೆದ ಮೂರು ವರ್ಷಗಳ ಹಿಂದೆ ರಾಮನಗುಳಿಯ ಅರಣ್ಯ ಪ್ರದೇಶದಲ್ಲಿ ಸಿಕ್ಕಿದ ಜಿಂಕೆಯ ತಲೆಬರುಡೆ 2 ಜಿಂಕೆಯ ಕೊಂಬುಗಳನ್ನು ಗೋಣಿ ಚೀಲದಲ್ಲಿ ತುಂಬಿಕೊAಡು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕೃತ್ಯಕ್ಕೆ ಬಳಸಿದ 5 ಲಕ್ಷ ರೂ. ಮೌಲ್ಯದ ಮಾರುತಿ ಎರ್ಟಿಗಾ ಕಾರ್ ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿ, ಭಾನುವಾರ ನ್ಯಾಯಾಧೀಶರ ಎದುರಿಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್, ಎಎಸ್ಪಿ ಎಸ್, ಬದ್ರಿನಾಥ ಮತ್ತು ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ವಿಭಾಗದ ಪಿಎಸ್ ಐ ಪೇಮನ್ ಗೌಡರ್, ಪಿಐ ಸಂತೋಷ ಶೆಟ್ಟಿ ಮುಂದಾಳತ್ವದಲ್ಲಿ ದಾಳಿ ನಡೆಸಿದರು.
ಸಿಬ್ಬಂದಿ ಮಹಮ್ಮದ ಶಫೀ ಅಬ್ದಲ್ ಅಜೀಜ್ ಶೇಖ್, ರಾಘವೇಂದ್ರ ಜಿ.ನಾಯ್ಕ, ಭಗವಾನ್ ಗಾಂವಕರ, ವೀರೇಶ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು.
Leave a Comment