ಭಟ್ಕಳ- ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು , ಪತ್ರಕರ್ತ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕ ಅಧ್ಯಕ್ಷರಾಗಿ ಸಾಗರ ಸಾಮ್ರಾಟ ದಿನ ಪತ್ರಿಕೆ , ಕುಂದಾಪುರ ಮಿತ್ರ ಪಾಕ್ಷಿಕ ಪತ್ರಿಕೆ ಭಟ್ಕಳ್ ತಾಲೂಕ ವರದಿಗಾರ , ಲೋಕಲ್ ಖಬರ್ ವೆಬ್ ಪೋರ್ಟಲ್ ಸಂಪಾದಕ ಜೇವೋತ್ತಮ್ ಪೈ ಭಟ್ಕಳ್ ಅವರನ್ನು ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಅವರ ಸೂಚನೆಯ ಮೇರೆಗೆ ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಯಾನಂದ ಎಂ ಅವರು ಜೇವೋತ್ತಮ್ ಪೈ ಅವರನ್ನು ಭಟ್ಕಳ ತಾಲೂಕ ಅಧ್ಯಕ್ಷರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಭಟ್ಕಳ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಕರವೇ ನ್ಯೂಸ್ ನ ಉತ್ತರಕನ್ನಡ ಜಿಲ್ಲಾ ವರದಿಗಾರ ಶ್ರೀ ವೆಂಕಟೇಶ್ ನಾಯ್ಕ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಸದಸ್ಯರನ್ನಾಗಿ ಭಟ್ಕಳದ ಅಂಬಿಗ ನ್ಯೂಸ್ ತಾಲೂಕ ವರದಿಗಾರ ಅಂತೋನ ಜುಜೆ ಲೂಯಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಭಟ್ಕಳ ತಾಲೂಕ ನೂತನ ಪದಾಧಿಕಾರಿಗಳಿಗೆ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹುಬ್ಬಳ್ಳಿ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.

ನೂತನ ಪದಾಧಿಕಾರಿಗಳಿಗೆ ಪತ್ರಕರ್ತರಿಗೆ ಯಾವುದೇ ಸಮಸ್ಯೆ ಆದಾಗ ಸಹಾಯ ಸಹಕಾರ ನೀಡುವುದರ ಜೊತೆಗೆ ಬಡ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಸದಾ ಭ್ರಷ್ಟರ ವಿರುದ್ಧ ಹೋರಾಟ ಮಾಡಿ ಬಡವರಿಗೆ , ಜನಸಾಮಾನ್ಯರರಿಗೆ ನ್ಯಾಯ ಒದಗಿಸುವಂತೆ ತಿಳಿಸಿದ್ದಾರೆ.
Leave a Comment