ಹಳಿಯಾಳ : ಹಳಿಯಾಳದ ಇ.ಐ.ಡಿ ಪ್ಯಾರಿ ಶುಗರ ಸಕ್ಕರೆ ಕಾರ್ಖಾನೆಯ ವಿರುದ್ಧ ಕಬ್ಬು ಬೆಳೆಗಾರರು ಪ್ರತಿಭಟನೆಯನ್ನು ನಡೆಸುತ್ತಿದ್ದು ಅವರ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ಮಾತನಾಡಿದ್ದೇನೆ ಎಂದು ಶಾಸಕ ಆರ್. ವಿ. ದೇಶಪಾಂಡೆ ಯವರು ರುಡ್ಸೆಟ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಹೇಳಿದರು. ಹಳಿಯಾಳ ತಾಲೂಕಿನ ಕಬ್ಬಿಗೆ ಮೊದಲ ಆದ್ಯತೆಯನ್ನು ಕೊಡಬೇಕು.
ಪ್ರತಿದಿವಸ ಹಳಿಯಾಳ ತಾಲೂಕಿನ 7 ರಿಂದ 8 ಸಾವಿರ ಟನ್ ಕಬ್ಬನ್ನು ನುರಿಸಲು ಕಾರ್ಖಾನೆಯವರು ಒಪ್ಪಿಕೊಂಡಿದ್ದಾರೆ. ಎಫ್. ಆರ್. ಪಿ. ದರ ಕಳೆದ ವರ್ಷಕ್ಕಿಂತ ಈ ವರ್ಷ ಏಕೆ ಕಡಿಮೆ ಎಂದು ಕೇಳಿಕೊಂಡಾಗ ಕಬ್ಬಿನ ಇಳುವರಿ ಕಡಿಮೆ ಇದೆ ಎಂದು ಹೇಳಿದ್ದಾರೆ. ಇದರಿಂದಾಗಿ ಕಳೆದ ವರ್ಷ 2592 ದರ ಇದ್ದು ಈ ವರ್ಷ 2371 ಆಗಿದೆ ಇದರಿಂದ ರೈತರಿಗೆ 221 ರೂಪಾಯಿ ಕಡಿಮೆಯಾಗಿದೆ.
ಈ ರೀತಿಯ ದರದಿಂದ ರೈತರಿಗೆ ಆರ್ಥಿಕ ಹಾನಿ ಉಂಟಾಗುತ್ತದೆ ಆದ್ದರಿಂದ ಏನಾದರೂ ಮಾಡಿ ಕಳೆದ ವರ್ಷಕ್ಕಿಂತ ಹೆಚ್ಚಿನ ದರವನ್ನು ನೀಡಲು ಕಾರ್ಖಾನೆಯವರಿಗೆ ಮತ್ತು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಎಚ್ & ಟಿ ದರವನ್ನು ಕಿಲೋಮೀಟರ್ ಗಳ ಆಧಾರದಲ್ಲಿ ಮಾಡಿದರೆ ರೈತರಿಗೆ ಲಾಭ ಆಗುತ್ತದೆ. ಈಗಾಗಲೇ ಗೊಬ್ಬರದ ದರವು ಹೆಚ್ಚಾಗಿದ್ದು ಮತ್ತು ಕೂಲಿಗಳ ದರವು ಹೆಚ್ಚಾಗಿದೆ ಇದರಿಂದಾಗಿ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆ ಆಗಿದ್ದು, ಕಬ್ಬಿಗೆ ಹೆಚ್ಚಿನ ಬೆಲೆಯನ್ನು ಕೊಡಲೇಬೇಕು ಇದು ಅನಿವಾರ್ಯ ಕೂಡ.
ರೈತರ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ನಾನು ಸಕ್ಕರೆ ಕಾರ್ಖಾನೆ, ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಇವರೊಂದಿಗೆ ಮಾತನಾಡಿದ್ದು ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
08-10-2022
Leave a Comment