ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯ
ಯಲ್ಲಾಪುರ : ಟ್ಯಾಂಕರ್ ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದು 13 ಶಿಕ್ಷಕರು ಹಾಗೂ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಹುಬ್ಬಳ್ಳಿಯ ಸೆಂಟ್ ಆಂತೋನಿ ಪಬ್ಲಿಕ್ ಶಾಲೆಯ ಶಿಕ್ಷಕರು ಸ್ಕೂಲ್ ಬಸ್ ನಲ್ಲಿ ಸುಂಕಸಾಖಲ್ಲೆ ಪ್ರವಾಸಕ್ಕೆ ತೆರಳುತ್ತಿದ್ದರು. ಅರೆಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಹಿಂದೆ ಇನ್ನೊಂದು ಟ್ಯಾಂಕರ್ ನಿಂತಿದ್ದು, ಅದಕ್ಕೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ.

ಬಸ್ ಚಾಲಕನಿಗೆ ಹೆಚ್ಚಿನ ಗಾಯಗಳಾಗಿದ್ದು 13 ಕ್ಕೂ ಹೆಚ್ಚು ಶಿಕ್ಷಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಯಲ್ಲಾಪುರದ ತಾಲೂಕಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
Leave a Comment