Labour Card Scholarship apply Online 2022-23/ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ ;
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ (ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ/ಇಂಜಿನಿಯರಿಂಗ್ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ) 2022-23ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಪ್ಲಿಕೇಶನ್ ಮೋಡ್ ಆನ್ ಲೈನ್
ವಿದ್ಯಾರ್ಥಿವೇತನ ಮೊತ್ತ;- 6000-20,000
ಈ ಯೋಜನೆಗಳಿಗೆ ಕಾರ್ಮಿಕರ ಮಾಸಿಕ ವೇತನ ರೂ. 35,000/- ಗಿಂತ ಮೀರಿರಬಾರದು.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50 ಪ.ಜಾ/ಪ.ಪಂ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು.
ವಯೋಮಿತಿ ವರ್ಷ 18- 60
ವಿದ್ಯಾರ್ಥಿವೇತನ ಮೊತ್ತ :
ಪ್ರೌಢಶಾಲೆ, (8 ರಿಂದ 10ನೇ ತರಗತಿವರೆಗೆ) ರೂ.6,000/
ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಹೆಚ್ ಇತ್ಯಾದಿ ರೂ.8,000/
ಪದವಿ ತರಗತಿಗೆ ರೂ.10,000/ ಸ್ನಾತಕೋತ್ತರ ಪದವಿ ತರಗತಿಗಳಿಗೆ ರೂ.12,000/-
ಇಂಜಿನೀಯರಿಂಗ್/ವೈದ್ಯಕೀಯ ರೂ.20,000/-ಗಳ ಪ್ರೋತ್ಸಾಹ ಧನ ನೀಡಲಾಗುವುದು.
(ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ ಶೇ.50 ಪ.ಜಾ / ಪ.ಪಂ ಶೇ. 45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು)
Labour Card Scholarship apply Online 2022-23

ಸೂಚನೆ ;
1) ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗುವುದು,
2) ಪಾಸ್ಬುಕ್ ಜೆರಾಕ್ಸ್ ಪ್ರತಿ ಲಗತ್ತಿಸುವಾಗ Account Number ಮತ್ತು IFSC Code ಸ್ಪಷ್ಟವಾಗಿ
ಕಾಣುವಂತಿರಬೇಕು. ತಪ್ಪಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
3) ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಅಂಕಪಟ್ಟಿಯಲ್ಲಿನ ವಿವರಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ತಪ್ಪಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
4) ಪದವಿ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ & ಮೆಡಿಕಲ್ ವಿದ್ಯಾರ್ಥಿಗಳ ಅಂಕಪಟ್ಟಿಗಳ
ವಿವರಗಳು ಸ್ಪಷ್ಟವಾಗಿ ಕಾಣುವಂತಿರಬೇಕು ಮತ್ತು ಹಿಂದಿನ 2 ಸೆಮಿಸ್ಟರ್ಗಳ ಅಂಕಪಟ್ಟಿಯನ್ನು
ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ತಪ್ಪಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
5) ವಿದ್ಯಾರ್ಥಿ, ತಂದೆ, ತಾಯಿ ಈ 3 ಜನರ ಆಧಾರ್ ಕಾರ್ಡ್ ಕಡ್ಡಾಯವಾಗಿ ಆಪ್ಲೋಡ್
ಮಾಡಬೇಕು. ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದಲ್ಲಿ ಅಥವಾ ತಪ್ಪಾಗಿ ಪಿ.ಡಿ.ಎಫ್.
ಅಪ್ಲೋಡ್ ಮಾಡಿದಲ್ಲಿ ತಪ್ಪಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
6) ತಂದೆ ಅಥವಾ ತಾಯಿ ಮರಣ ಹೊಂದಿದ್ದಲ್ಲಿ, ಅವರ ಮರಣ ಪ್ರಮಾಣ ಪತ್ರ ಅಪ್ಲೋಡ್ ಮಾಡಬೇಕು. ತಪ್ಪಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 31-12-2022
Labour Card Scholarship apply Online 2022-23
ಹೆಚ್ಚಿನ ವಿದ್ಯಾರ್ಥಿ ವೇತನಕ್ಕಾಗಿ ಲಿಂಕ್ ಕ್ಲಿಕ್ ಮಾಡಿ ; ವಿದ್ಯಾರ್ಥಿವೇತನ-scholarship/
apply link /ಅರ್ಜಿ ಸಲ್ಲಿಸಲು;
ವಾಟ್ಸಾಪ್ ಗ್ರೂಪ್ (Job Alert) | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು / apply link; | Click Here |
ಅಧಿಸೂಚನೆ /notification ; | ಇಲ್ಲಿ ಕ್ಲಿಕ್ ಮಾಡಿ |
web site | Click Here |
Leave a Comment