ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ
ಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ತನ್ನ ನೋಂದಾಯಿತ ಎಲ್ ಐಸಿ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್ ಆ್ಯಪ್ ಮೂಲಕ ನೀಡಲು ಮುಂದಾಗಿದೆ.
ಎಲ್ ಐಸಿ ಆಫ್ ಇಂಡಿಯಾದ ಅಧ್ಯಕ್ಷ ಎಂ ಆರ್. ಕುಮಾರ್ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲಿ ಪಾಲಿಸಿದಾರರು ತಮ್ಮ ಪಾಲಿಸಿ ಮತ್ತು ಇತರ ಮಾಹಿತಿಯನ್ನು ಸಂವಹನದ ಮೂಲಕ ಪಡೆಯಬಹುದಾಗಿದೆ ಎಂದು ಟ್ಚಿಟರ್ ನಲ್ಲಿ ಎಲ್ ಐಸಿ ಹೇಳಿದೆ.
ಹೊಸ ಸೇವೆಗೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಗ್ರಾಹಕರು ಕೂತಲ್ಲಿಯೇ ಅಗತ್ಯ ಮಾಹಿತಿ ಯನ್ನು ಪಡೆಯಬಹುದಾಗಿದೆ.
ವೆಬ್ ಜತೆಗೆ ಹೊಸ ಆಯ್ಕೆ : ಪ್ರಸುತ್ತ ಎಲ್ ಐಸಿ ವೆಬ್ ಸೈಟ್ ನಲ್ಲಿ ನೋಂದಾಣಿ ಮಾಡಿಕೊಂಡು ಪಾಲಿಸಿದಾರರು, ತಮ್ಮ ಪಾಲಿಸಿಗಳ ಮಾಹಿತಿಯನ್ನು ಪಡೆಯುವ ಅವಕಾಶವಿದೆ. ಈಗ ವಾಟ್ಸ್ ಆ್ಯಪ್ ಮೂಲಕವೂ ಕೆಲವು ಸೇವೆಗಳನ್ನು ಪಡೆಯುವ ಅವಕಾಶವನ್ನು ಎಲ್ ಐಸಿ ಕಲ್ಪಿಸಿದೆ. ಸೇವೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಕೆಲವು ಸೇವೆಗಳಿಗೆ ಪೂರಕ ಮಾಹಿತಿ ಲಭ್ಯವಾಗುತ್ತಿಲ್ಲ.
ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ

ಹೊಸ ಸೆವೆ ಪಡೆಯುವುದು ಹೇಗೆ
ಎಲ್ ಐಸಿ ಪಾಲಿಸಿದಾರರು ಮೊದಲಿಗೆ ಎಲ್ ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ಪಾಲಿಸಿದಾರರಿಗಷ್ಟೇ ಹೊಸ ಸೇವೆಗಳು ಲಭ್ಯ.
ನೋಂದಾಯಿಸಿದ ಪಾಲಿಸಿದಾರರು ಮೊಬೈಲ್ ಸಂಖ್ಯೆ 8976862090 ಕ್ಕೆ ಏಐ ಎಂದು ಸಂದೇಶ ಕಳಿಸಬೇಕು ಆಗ ಸ್ಕಿçÃನ್ ನಲ್ಲಿ ಎಲ್ ಐಸಿ ಪಟ್ಟಿ ಮಾಡಲಾದ ಸೇವೆಗಳ ವಿವರ ಕಾಣಿಸಿಕೊಳ್ಳುತ್ತದೆ. ಸೇವೆಗಳಿಗೆ ಆಯ್ಕೆ ಸಂಖ್ಯೆಯನ್ನು ನಮೂದಿಸಿದರೆ ಅಗತ್ಯವಾದ ಮಾಹಿತಿ ಸಿಗುತ್ತದೆ.
ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ
ಯಾವ ಸೇಗೆಗಳೆಲ್ಲ ಲಭ್ಯ
ಪ್ರಿಮಿಯಂ ಬಾಕಿ ವಿವರ
ಬೋನಸ್ ಮಾಹಿತಿ
ಪಾಲಿಸಿಯ ಸ್ಥಿತಿಗತಿ
ಸಾಲದ ಅರ್ಹತೆಯ ಉಲ್ಲೇಖ
ಸಾಲ ಮರುಪಾವತಿಯ ವಿವರ
ಸಾಲದ ಬಡ್ಡಿ ಬಾಕಿಯ ವಿವರ
ಪ್ರಿಮಿಯಂ ಪಾವತಿಸಿದ ಪ್ರಮಾಣ ಪತ್ರ
ಯುಲಿಪ್ – ಸ್ಟೇಟ್ ಮೆಂಟ್ ಆಫ್ ಯೂನಿಟ್ಸ್
ಎಲ್ ಐಸಿ ಸೇವೆಗಳ ಲಿಂಕ್ ಗಳು
ಎಲ್ ಐಸಿ ಪೋರ್ಟ್ಲ್ ನಲ್ಲಿ ಪಾಲಿಸಿಯನ್ನು ನೋಂದಾಯಿಸುವುದು ಹೇಗೆ
ಹಂತ 1 : https://www.licindia.in/ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿ ಕಸ್ಟಮರ್ ಪೋರ್ಟಲ್ ಹೆ ಕ್ಲಿಕ್ ಮಾಡಿ
ಗಂತ 2 : ನೀವು ಗ್ರಾಹಕ ಪೋರ್ಟಲ್ ಗಾಗಿ ಈ ಹಿಂದೆ ನೋಂದಾಯಿಸದಿದ್ದರೆ, ನ್ಯೂ ಯೂಸರ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3 : ಅಗತ್ಯವಾದ ವಿವರಗಳನ್ನು ನೀಡಿ ನಿಮ್ಮ ಸ್ವಂತಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ಅನ್ನು ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ ಆಗ ನೀವು ನೋಂದಾಯಿತ ಪೋರ್ಟಲ್ ಬಳಕೆದಾರರಾಗುವಿರಿ.
ಹಂತ 4 : ಇ- ಸೇವೆಗಳು ಟ್ಯಾಬ್ ಅನ್ನು ಕ್ಲಿಕ ಮಾಡಿ ನೀವು ರಚಿಸಿದ ಬಳಕೆದಾರ ಐಡಿಯನ್ನು ಬಳಸಿಕೊಂಡು ಲಾಗ್ ಇನ್ ಆಗಿ ಅಲ್ಲಿನ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಇ – ಸೇವೆಗಳನ್ನು ಬಳಸಲು ಅಗತ್ಯ ಮಾಹಿತಿಯನ್ನು ನೀಡಿ. ಎಲ್ಲ ಪಾಲಿಸಿಗಳನ್ನೂ ಅಲ್ಲಿ ದಾಖಲಿಸಿ.
Leave a Comment