ಕುಡಿತಕ್ಕೆ ಹಣ ನೀಡಿಲ್ಲವೆಂದು ತಾಯಿಯನ್ನೇ ಕೊಂದ ಮಗ!
ಕುಮಟಾ :
ಕುಡಿತಕ್ಕೆ ಹಣ ನೀಡಿಲ್ಲ ಎಂಬ ಕ್ಷÄಲ್ಲಕ ಕಾರಣಕ್ಕೆ ಮಗನು ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿದ ಘಟನೆ ತಾಲೂಕಿನ ಕೊಜಳ್ಳಿಯ ಬಚ್ಖಂಡದಲ್ಲಿ ನಡೆದಿದೆ.
ಗೀತಾ ಭಟ್ (60) ಕೊಲೆಯಾದ ದುರ್ದೈವಿ. ಮಧುಕರ್ ಭಟ್, ತಾಯಿ ಹತ್ಯೆ ಮಾಡಿರುವ ಮಗ, ಅಪ್ಪ -ಮಗ ಇಬ್ಬರು ಕುಡಿತದ ಚಟ ಕ್ಕೆ ಬಲಿಯಾಗಿದ್ದು, ಪ್ರತಿನಿತ್ಯ ಹಣ ಕೊಡುವಂತೆ ಆಕೆಯನ್ನು ಪೀಡಿಸುತ್ತಿದ್ದರು. ಹಣ ನೀಡದಿದ್ದರೆ ದೊಡ್ಡ ರಂಪಾಟ ಮಾಡಿ, ಜಗಳ ಮಾಡುತ್ತಿದ್ದರು ಎನ್ನಲಾಗಿದೆ.

ಬುಧವಾರ ಕೂಡ ಕುಡಿತಕ್ಕೆ ಹಣ ನೀಡುವಂತೆ ತಾಯಿ ಬಳಿ ಜಗಳ ಮಾಡಿದ್ದಾನೆ. ಹಣ ನೀಡಿದ ಕಾರಣಕ್ಕೆ ಮನೆಯಲ್ಲಿರುವ ರೀಪ್ ನಿಂದ ತಾಯಿಯ ಶಿರಭಾಗಕ್ಕೆ ಹಲ್ಲೆ ಮಾಡಿದ್ದರಿಂದ ಅಧಿಕ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಕುಮಟಾ ಠಾಣೆ ಪೊಲೀಸರು ಅಪ್ಪ – ಮಗನನ್ನು ಬಂಧಿಸಿ, ಇವರಿಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಕುಡಿತ ಕ್ಕೆ ಹಣ ನೀಡಿದ ಕಾರಣ ಕಟ್ಟಿಗೆ ರೀಪ್ ಮತ್ತು ಸ್ಟೂಲ್ ನಿಂದ ತಾಯಿಯ ಮೇಲೆ ಹಲ್ಲೆ ಮಾಡಿರುವುದಾಗಿ ಮಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Leave a Comment