ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು
ನವದೆಹಲಿ (ಪಿಟಿಐ) : ರೈಲ್ವೆಯಲ್ಲಿ ಉದ್ಯೋಗ ನೀಡುವ ಆಮಿಷ ಒಡ್ಡಿ, ತಮಿಳನಾಡಿನ ಕನಿಷ್ಠ 28 ಮಂದಿಯನ್ನು ದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ಒಂದು ತಿಂಗಳ ಕಾಲ ನಿತ್ಯವೂ 8 ಗಂಟೆಗಳವರೆಗೆ ರೈಲುಗಳ ಆಗಮನ ನಿರ್ಗಮನ ಮತ್ತು ಬೋಗಿಗಳನ್ನು ಎಣಿಸಲು ನಿಯೋಜಿಸಿದ್ದ ಘಟನೆ ವರದಿಯಾಗಿದೆ.
ಹೀಗೆ ನಿತ್ಯವೂ ರೈಲುಗಳನ್ನು ಎಣಿಸುತ್ತಿದ್ದ 28 ಮಂದಿಗೆ ತಾವು ವಂಚನೆಗೊಳಗಾಗಿದ್ದೇವೆ ಎಂಬ ಅರವೂ ಇರಲಿಲ್ಲ. ರೈಲ್ವೆಯಲ್ಲಿ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಟ್ರಾಫಿಕ್ ಅಸಿಸ್ಟಂಟ್ ಮತ್ತು ಕ್ಲಕ್ ಗಳ ಉದ್ಯೋಗ ನೀಡುವುದಾಗಿ ವಂಚಕರ ಗುಂಪೊAದು 28 ಅಭ್ಯರ್ಥಿಗಳಿಂದ ಸುಮಾರು 2.67 ಕೋಟಿ ವಸೂಲಿ ಮಾಡಿದೆ. ಉದ್ಯೋಗ ತರಬೇತಿಯ ಭಾಗವಾಗಿ ರೈಲುಗಳ ಎಣೆಕೆಗೆ ಅಭ್ಯರ್ಥಿಗಳನ್ನು ವಂಚಕರ ಗುಂಪು ನಿಯೋಜಿಸಿತ್ತು ಎಂದು ಮೂಲಗಳು ತಿಳಿಸಿದೆ.
ತರಬೇತಿಯ ಆದೇಶಗಳು, ಗುರುತಿನ ಚೀಟಿಗಳು ತರಬೇತಿ ಪೂರ್ಣಗೊಂಡ ಪ್ರಮಾಣ ಪತ್ರಗಳು ಮತ್ತು ನೇಮಕಾತಿ ಪತ್ರ ಗಳಂತಹ ಎಲ್ಲಾ ದಾಖಲೆಗಳನ್ನು ಅಭ್ಯರ್ಥಿಗಳು ರೈಲ್ವೆಯ ಅಧಿಕಾರಿಗಳಿಗೆ ತೋರಿಸಿದಾಗ ಅವು ನಕಲಿ ಎಂದು ತಿಳಿದು ಬಂದಿದೆ.
ಈ ರೀತಿ ವಂಚನೆಗೊಳಗಾದವರಲ್ಲಿ ಬಹುತೇಕರು ಎಂಜಿನಿಯರಿAಗ್, ತಾಂತ್ರಿಕ ಶಿಕ್ಷಣ ಪದವೀಧರರಾಗಿದ್ದಾರೆ. ಪ್ರತಿ ಉದ್ಯೋಗಾಂಕ್ಷಿಯಿAದ ತಲಾ 2 ಲಕ್ಷರಿಂದ 24 ಲಕ್ಷದವರೆಗೆ ಹಣವನ್ನು ವಂಚಕರ ಗುಂಪು ಪಡೆದಿದೆ.

ಮಾಜಿ ಸೈನಿಕ ಸುಬ್ಬುಸ್ವಾಮಿ ಎಂಬುವರು ಅಭ್ಯರ್ಥಿಗಳು ಮತ್ತು ವಂಚಕರ ನಡುವೆ ಸಂಪರ್ಕ ಸೇತುವಾಗಿದ್ದರು. ಇದೊಂದು ವಂಚನೆಯ ಜಾಲವೆಂದು ನನಗೆ ಂತಿಳಿದಿರಲಿಲ್ಲ. ಅನುಮಾನಗೊಂಡು ಪರಿಶೀಲಿಸಿದಾಗ ನಾನು ಅವರ ಬಲೆಗೆ ಬಿದ್ದಿದ್ದೇನೆ ಎಂದು ತಿಳಿಯಿತು ಎಂದು ಸುಬ್ಬಸ್ವಾಮಿ ಅವರು ತಿಳಿಸಿದ್ದಾರೆ.
ಪ್ರತಿ ಅಭ್ಯರ್ಥಿಯು ಸುಬ್ಬಸ್ವಾಮಿ ಅವರಿಗೆ ಹಣವನ್ನು ಪಾವತಿಸಿದ್ದು, ಹಣವನ್ನು ಪಾವತಿಸಿದ್ದು, ಬಳಿಕ ಈ ಹಣವನ್ನು ಸುಬ್ಬುಸ್ವಾಮಿ ಅವರು ವಿಕಾಸ್ ರಾಣಾ ಎಂಬ ವ್ಯಕ್ತಿಗೆ ಪಾವತಿಸಿದ್ದಾರೆ.
ರಾಣಾ ತಾನು ದೆಹಲಿಯ ಉತ್ತರ ರೈಲ್ವೆ ಕಚೇರಿಯಲ್ಲಿ ಉಪನಿರ್ದೇಶಕನಾಗಿದ್ದೇನೆ ಎಂದು ಸುಳ್ಳುಹೇಳಿ ಅಭ್ಯರ್ಥಿಗಳಿಗೆ ವಂಚಿಸಿರುವ ಕುರಿತು ಸುಬ್ಬುಸ್ವಾಮಿ ದೆಹಲಿ ಪೊಲೀಸ್ ನ ಅರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲುö್ಯ) ದೂರು ನೀಡಿದ್ದಾರೆ.
ರೈಲ್ವೆ ಸಚಿವಾಲಯದ ಮಾಧ್ಯಮ ಮತ್ತು ಸಂವಹನ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಯೋಗೇಶ್ ಬವೇಜಾ ಇಂತಹ ನಕಲಿ ಉದ್ಯೋಗಜಾಲಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
Leave a Comment