ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಾಗಿ (ಬೆಳೆ ವಿಮೆ) Pradhan Mantri Fasal Bima Yojana ಕೃಷಿಕರ ಸಹಾಯಾರ್ಥವಾಗಿ ಪ್ರಶೋತ್ತರ:
ಪ್ರಶ್ನೆ: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ (ಬೆಳೆ ವಿಮೆ /Crop Insurance)ಎಂದರೇನು?
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯು ಕೃಷಿಕರ ಬೆಳೆಗೆ ಸಂಬಂದಿಸಿದ ಅಪಾಯಗಳ ಕಾರಣದಿಂದ ಉಂಟಾಗುವ ನಷ್ಟಕ್ಕೆ ವಿಮಾ ರಕ್ಷಣೆಯನ್ನು ನೀಡುವ (ಕವರ್ ಮಾಡುವ) ಒಂದು ಮಾಧ್ಯಮವಾಗಿರುತ್ತದೆ. ಇವರಲ್ಲಿ ಕೃಷಿಕರಿಗೆ ಅನಿರೀಕ್ಷಿತ ಅಥವಾ ಪ್ರತಿಕೂಲ ಹವಾಮಾನದ ಕಾರಣದಿಂದ ಬೆಳಿಗೆ ಉಂಟಾಗಿರುವ ಹಾನಿಗೆ ಪರಿಹಾರ ನೀಡಲಾಗುತ್ತದೆ.
ಬೆಳೆ ವಿಮೆ (Crop Insurance)ಯನ್ನು ಯಾರು ಮಾಡಿಸಬಹುದು ?
ಸಾಲಗಾರ ಅಥವಾ ಸಾಲಗಾರನಲ್ಲದ (ಪಾಲುದಾದ ಗೇಣಿದಾರ, ಕೃಷಿಕರು ಅಧಿಸೂಚಿತ ಕ್ಷೇತ್ರದಲ್ಲಿ ಅಧಿಸೂಚಿತಪಡಿಸಿರುವ ಬೆಳೆಗಳಿಗೆ ವಿಮೆಯ ಪ್ರಯೋಜನವನ್ನು ಪಡೆಯಬಹುದು ಸಾಲಗಾರ ಅಥವಾ ಸಾಲಗಾರನಲ್ಲದ ಕೃಷಿಕರಿಗಾಗಿ ಈ ಯೋಜನೆ ಐಚ್ಛಿಕವಾಗಿರುತ್ತದೆ. ನೋಂದಣಿಗಾಗಿ ಕೊನೆಯ ದಿನಾಂಕವು ಸಾಮಾನ್ಯವಾಗಿ : 31-ಜುಲೈ ಆಗಿರುತ್ತದೆ. ತಮ್ಮ ಕ್ಷೇತ್ರಗಳಲ್ಲಿ ಅಧಿಸೂಚಿಕ ಬೆಳೆಗಳು ಹಾಗೂ ಅದರ ಕೊನೆಯ ದಿನಾಂಕಕ್ಕಾಗಿ ಸಿಎಸ್‌ಸಿ ಕೇಂದ್ರ, ಪಿಎಮ್‌ಎಫ್‌ಬಿವಾಯ್ ಫೋರ್ಟ್‌ಲ್ ಇನ್ಶೂರೆನ್ಸ್ ಕಂಪನಿ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ:
ಸಾಲಗಾರ ಕೃಷಿಕರು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಿಂದ 7 ದಿನದ ಮೊದಲು ಸಂಬಂಧಿಸಿದ ಶಾಲೆಯಲ್ಲಿ ಆಪ್ಟ್ -ಔಟ್ ಫಾರ್ಮ್ ಅಥವಾ ಸ್ವ- ಘೋಷಣಾ ಪತ್ರವನ್ನು ಪ್ರಸ್ತುತ ಪಡಿಸಿ’ ಯೋಜನೆಯಿಂದ ಹೊರಗುಳಿಯಬಹುದು.
ಪ್ರಧಾನ ಮಂತ್ರಿ ಫಸಲ್ ಭೀಮಾ (Pradhan Mantri Fasal Bima Yojana )ಯೋಜನೆಯ ಅಡಿಯಲ್ಲಿ ಕೃಷಿಕರರಿಗಾಗಿ ವಿಮಾ ಮೊತ್ತ ಎಷ್ಟಿರುತ್ತದೆ ?
ಉತ್ತರ: ವಿಮಾ ಮೊತ್ತದ ನಿರ್ಧಾರವನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಮೂಲಕ ಬೆಳೆಯ
ಹಣಕಾಸು ಪ್ರಮುಕ (Scale al Finance) ಆಧಾರದ ಮೇಲೆ ಅಥವಾ ಹಿಂದಿನ ವರ್ಷದಲ್ಲಿ
ಬಂದಿರುವ ಬೆಳೆಯ ಸರಾಯಿ ಇಳುವರಿ ಹಾಗೂ ಬೆಳೆಯ ಕನಿಷ್ಠ ಸಮರ್ಥನ ಬೆಲೆಯ ಆಧಾರದ ಮೇಲೆ ಮಾಡಲಾಗುತ್ತದೆ.
ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojana

ಬೆಳೆ ವಿಮೆಗಾಗಿ (Crop Insurance) ಕೃಷಿಕರಿಂದ ಪಾವತಿಸಬೇಕಾದ ಪ್ರೀಮಿಯಂ ದರವು ಎಷ್ಟಿರುತ್ತದೆ ?
ಉತ್ತರ: ಮುಂಗಾರು (ಖರೀಪ್) ಹವಾಮಾನಕ್ಕಾಗಿ 2 ಪ್ರತಿಶತ ಹಿಂಗಾರು (ರಬೀ) ಹವಾಮಾನಕ್ಕಾಗಿ1.5 ಪ್ರತಿಶತ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳಿಗಾಗಿ ವಿಮಾ ರಾಶಿಯ ಗರಿಷ್ಠ5 ಪ್ರತಿಶತ
ಪ್ರದನಾ ಮಂತ್ರಿ ಫಸಲ್ ಬೀಮಾ (Pradhan Mantri Fasal Bima Yojana ) ಯೋಜನೆಯ ಅಡಿಯಲ್ಲಿ ಯಾವ ಯಾವ ಅಪಾಯಗಳನ್ನು ಒಳಗೊಂಡಿವೆ?
ಉತ್ತರ: 1. ಬೆಳೆಗಳ ಬಿತ್ತನೆ ಬಿತ್ತನೆ ಮಾಡಲು ಆಗದಿರುವಿಕೆ: ಮೊಳಕೆಯೊಡೆಯದಿರುವಿಕೆಯ ಅಪಾಯ: ವಿಮೆ ಮಾಡಲಾದ ಕ್ಷತ್ರದಲ್ಲಿ ಕಡಿಮೆ ಮಳೆ ಅಥವಾ ಪ್ರತಿಕೂಲ ವಾತಾವರಣ/ ಹವಾಮಾನ ಪರಿಸ್ಥಿತಿಯಿಂದಾಗಿ ಬಿತ್ತನೆ /ನಾಟಿ /ಮೊಳಕೆಯೊಡೆಯದಿರುವಿಕೆಯಿಂದ ಉಂಟಾದ ಹಾನಿಗೆ ವಮಾರಕ್ಷಣೆಯನ್ನು ಒದಗಿಸುವುದು.
2. ನಿಂತಿರುವ ಬೆಳೆ (ಬಿತ್ತನೆಯಿಂದ ಕೊಯ್ಲಿನವರೆಗೆ): ಒಣ, ಶುಷ್ಕ ಸ್ಥಿತಿ, ಪ್ರವಾಹ, ಜಲಪ್ರಳಯ,
ವ್ಯಾಪಕ ರೂಪದಲ್ಲಿ ಕೀಟಗಳ ಅಥವಾ ರೋಗಗಳ ಪ್ರಭಾವ, ಭೂಕುಸಿತ, ಪ್ರಾಕೃತಿಕ ಕಾರಣದಿಂದ
ಬೆಂಕಿ, ಸಿಡಿಲು, ಬಿರುಗಾಳಿ, ಆಲಿಕಲ್ಲುಮಳೆ ಹಾಗೂ ಚಂಡಮಾರುತದಂತಹ ನಿಯಂತ್ರಿಸಲಾಗದ ಹಾನಿಗಳ ಕಾರಣದಿಂದ ಇಳುವರಿಯ ನಷ್ಟವನ್ನು ಕವರ್ ಮಾಡಲುವ್ಯಾಪಕ ಅಪಾಯವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.
3. ಕೊಯ್ಲಿನ ನಂತರದ ನಷ್ಟಗಳು: ಈ ಒದಗಣೆಯನ್ನು ಆಲಿಕಲ್ಲು ಮಳೆ, ಚಂಡಮಾರುತ, ಚಂಡಮಾರುತ ಮಳೆ ಹಾಗೂ ಅಕಾಲಿಕ ಮಳೆಯಾದ ಪರಿಸ್ಥಿತಿಯಲ್ಲಿ ವ್ಯಕ್ತಿಗತ ಆಧಾರದ ಮೇಲೆ ಹೊಲದಲ್ಲಿ ಕಟಾವು ಮಾಡಿ ಅಥವಾ ಹರಡಿ /ಸಣ್ಣ ಪಿಂಡಿಗಳನ್ನು ಕಟ್ಟಿ ಒಣಗಿಸುವುದಕ್ಕಾಗಿ ಇಟ್ಟಿರುವ ಬೆಳೆಗಳನ್ನು ಬೆಳೆ ಕಟಾವಿನ ನಂತರ ಕೇವಲ 14 ದಿನಗಳ ಗರಿಷ್ಟ ಅವಧಿಯಲ್ಲಿ ಹಾನಿಯಾಗಿರುವ ಪರಿಸ್ಥಿತಿಯಲ್ಲಿ ವಿಮಾರಕ್ಷಣೆಯನ್ನು ಒದಗಿಸಲಾಗುತ್ತದೆ.
4 ಸ್ಥಳೀಯ ವಿಪತ್ತು: ಯೋಜನೆಯ ಅಡಿಯಲ್ಲಿ ಸ್ಥಳೀಯವಾದ ಅಪಾಯಗಳು/ವಿಪತ್ತುಗಳು ಅಂದರೆ ಆಲಿಕಲ್ಲು ಮಳೆ, ಭೂಕುಸಿತ, ನೀರು ತುಂಬುವುದು, ಮೋಡ ಒಡೆಯುವುದು ಹಾಗೂ ಅಧಿಸೂಚಿತ ಘಟಕ ಅಥವಾ ಯಾವುದೇ ಹೊಲದ ಭಾಗದಲ್ಲಿ ಸಿಡಿಲು ಬಿದ್ದ ಕಾರಣದಿಂದ ಪ್ರಾಕೃತಿಕ ಬೆಂಕಿ ಹೊತ್ತಿಕೊಳ್ಳುವಿಕೆಯಿಂದ ಬೆಳೆಗೆ ಉಂಟಾಗುವ ನಷ್ಟಕ್ಕೆ ವ್ಯಕ್ತಿಗತ ಕೃಷಿಕರ ಹೊಲದ ಮಟ್ಟದಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.
5. 2023-24ನೇ ಸಾಲಿನಿಂದ ಅನ್ವಯವಾಗುವಂತೆ ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲಗೊಂಡಲ್ಲಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಿದ ನಂತರ ಪಾವತಿಯಾದ ವಿಮಾ ಪರಿಹಾರ ಮೊತ್ತವನ್ನು ಒಟ್ಟು ವಿಮಾ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಇದೇ ರೀತಿ ವಿವಿಧ ಸ್ಥಳೀಯ ವಿಪತ್ತುಗಳಿಗೆ ವಿವಿಧ ಹಂತಗಳಲ್ಲಿ ಪಾವತಿ ಮಾಡುವ ವಿಮಾ ಪರಿಹಾರ ಮೊತ್ತವನ್ನು ಒಟ್ಟು ವಿಮಾ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಅಂತಿಮ ಇಳುವರಿ ಆಧಾರಿತ ವಿಮಾ ಪರಿಹಾರ ಮೊತ್ತ ಲೆಕ್ಕಾಚಾರ ಮಾಡುವಾಗ ಇಳುವರಿ ಕೊರತೆಯನ್ನು ಲಭ್ಯವಿರುವ ವಿಮಾ ಮೊತ್ತದೊಂದಿಗೆ ಗುಣಿಸಿ ಲೆಕ್ಕಾಚಾರ ಮಾಡಲಾಗುವುದು,
ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojana

ಈ ಯೋಜನೆಯ ಅಡಿಯಲ್ಲಿ ಸಾಲಗಾರರಲ್ಲದ ಕೃಷಿಕರು ವಿಮೆಯನ್ನು ಹೇಗೆ ಪಡೆಯಬಹುದು?
ಉತ್ತರ: ಪ್ರದನಾಮಂತ್ರಿ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ ವಿಮೆಯನ್ನು ಪಡೆಯುವ ಇಚ್ಛೆಯನ್ನು ಹೊಂದಿರುವ ಸಾಲಗಾರರಲ್ಲದ ಕೃಷಿಕರು ಸಮೀಪದ ಬ್ಯಾಂಕ್ ಶಾಖೆ ಸಹಕಾರಿ ಸಂಘ/ಅಧಿಕೃತ ಚ್ಯಾನೆಲ್ ಪಾರ್ಟ್ನರ್/ಜನ ಸೇವಾ ಕೇಂದ್ರ (ಸಿಎಸ್‌ಸಿ) ವಿಮಾ ಕಂಪನಿ ಅಥವಾ ಅವರ ಅಧಿಕೃತ ಏಜಂಟರನ್ನು ಸಂಪರ್ಕಿಸಬಹುದು ಅಥವಾ ನಿಗದಿಪಡಿಸಿದ ದಿನಾಂಕದಲ್ಲಿ ಸ್ವತಃ ರಾಷ್ಟ್ರೀಯ ವಿಮಾ ಪೋರ್ಟಲ್ www.pmfby.gov.in ನಲ್ಲಿ ಆನ್‌ಲೈನ್ ಆರ್ಜಿ ಫಾರ್ಮ್ ಭರ್ತಿಮಾಡಬಹುದು.
ಸಾಲಗಾರ ಕೃಷಿಕರು ವಿಮೆ ಮಾಡಿಸಿದ ಬೆಳೆಯಲ್ಲಿ ಪರಿವರ್ತನೆಯನ್ನು ಮಾಡಿಸಬಹುದೇ ಹಾಗೂ ಯಾವಾಗಿನವರೆಗೆ ?
ಹೌದು, ಸಾಲಗಾರ ಕೃಷಿಕರು ವಿಮೆ ಮಾಡಿಸಿದ ಬೆಳೆಯಲ್ಲಿ ಪರಿವರ್ತನೆಯನ್ನು ಮಾಡಿಸಬಹು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ನಿಗದಿಪಡಿಸಿದ ನೋಂದಣಿಯ ಕೊನೆಯ ದಿನಾಂಕದ ಎರಡು ದಿನ (ಕೆಲಸದ ದಿನ) ಮುಂಚಿನವರೆಗೆ ಕೃಷಿಕರು ತಮ್ಮ ಬೆಳೆಯಲ್ಲಿ ಪರಿವರ್ತನೆಯ ಸೂಚನೆಯನ್ನು ಸಂಬಂಧಿಸಿದ ಬ್ಯಾಂಕ್ ಶಾಖೆಯಲ್ಲಿ ನೀಡಬಹುದು.
ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal bima Yojana
ಸಾಲಗಾರನಲ್ಲದ ಕೃಷಿಕರು ಬೆಳೆ ವಿಮೆಯನ್ನು ಪಡೆಯಲು ಯಾವ ಪ್ರಶ್ನೆ: ಯಾವ ಕಾಗದ ಪತ್ರಗಳನ್ನು ಸಲ್ಲಿಸಬೇಕಾದುದು ಕಡ್ಡಾಯವಾಗಿರುತ್ತದೆ?
ಸಾಲಗಾರನಲ್ಲದ ಕೃಷಿಕರಿಗೆ, ಭೂಮಿಯ ಮಾಲಿಕತ್ವದ ಕಾಗದಪತ್ರ- ಹಕ್ಕಿನ ರಿಕಾರ್ಡ್ (ಆರ್‌ಒಆರ್) ಹಾಗೂ ಭೂಮಿಯ ಸ್ವಾಧೀನದ ಪ್ರಮಾಣ ಪತ್ರ (ಎಲ್‌ಪಿಸಿ), ಅಧಾರ್ ಕಾರ್ಡ್(ಇತ್ತೀಚಿನದು), ಬ್ಯಾಂಕ್ ಪಾಸ್‌ಬುಕ್ (ಮೊದಲ ಪುಟ -ಬ್ಯಾಂಕ್ ಖಾತೆಯ ವಿವರಣೆಯೊಂದಿಗೆ) ಹಾಗೂ ಬೆಳೆಯ ಬಿತ್ತನೆಯ ಪ್ರಮಾಣ ಪತ್ರ (ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಕಡ್ಡಾಯಗೊಳಿಸಿದ್ದರೆ) ಮುಂತಾದವುಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಪಾಲುದಾರ ಅಥವಾ ಗೇಣಿಗಾರರಾಗಿರುವ ಪರಿಸ್ಥಿತಿಯಲ್ಲಿ ಭೂಮಿಯ ಮಾಲಿಕರೊಂದಿಗೆ ಕರಾರು ಒಪ್ಪಂದ, ಬಾಡಿಗೆ/ ಗುತ್ತಿಗೆ ಪತ್ರ ಮುಂತದ ಕಾಗದಪತ್ರಗಳು ಕಡ್ಡಾಯವಾಗಿರುತ್ತವೆ.
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ ವಿಮಾ ಘಟಕ ಎಂದರೇನು?
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಕ್ಷೇತ್ರದ ದೃಷ್ಟಿಕೋನದ ಆಧಾರದ ಮೇಲೆ ವಿಮಾ ಘಟಕವನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಗಳು ಪ್ರಮುಖ ಬೆಳೆಗಳಿಗಾಗಿ ಗ್ರಾಮ/ಗ್ರಾಮ ಪಂಚಾಯತ ಅಥವಾ ಇತರ ಬೇರೆ ಸಮಾನ ಘಟಕ (ಭೂಕಂದಾಯ ಮಂಡಳಿ/ ಪಟವಾರ ಸರ್ಕಲ್ (ಸರ್ಕಾರಿ ಕರಣಿಕ ವಲಯ) ಮುಂತಾದವುಗಳಂತಹ)ವನ್ನು ಹಾಗೂ ಸಣ್ಣ ಬೆಳೆಗಳಿಗಾಗಿ ಜಿಲ್ಲಾ ತಾಲೂಕಾ ಅಥವಾ ಅದರ ಸಮಾನ ಘಟಕಗಳನ್ನು ವಿಮಾ ಘಟಕದ ರೂಪದಲ್ಲಿ ಸೂಚಿಸಬಹುದು.
ಸ್ಥಳೀಯ ವಿಪತ್ತುಗಳಿಂದಾದ ಬೆಳೆಗಳ ನಷ್ಟಕ್ಕಾಗಿ ಮಾಹಿತಿಯನ್ನು ಸಲ್ಲಿಸುವ ಪ್ರಕ್ರಿಯೆಗಳೇನು
ಪ್ರಭಾವಿತ ವಿಮಾ ಕೃಷಿಕರು ವಿಪತ್ತಿನ 72 ಗಂಟೆಯ ಒಳಗಡೆ ನೇರವಾಗಿ ವಿಮಾ ಕಂಪನಿಯ ಟೋಲ್ ಫ್ರೀ ನಂಬರ್ ಅಥವಾ ಕ್ರಾಪ್ ಇನ್‌ಶೂರನ್ಸ್ ಆ್ಯಪ್‌ನಲ್ಲಿ ಅಥವಾ ಲಿಖಿತ ರೂಪದಲ್ಲಿ ತಮ್ಮ ಬ್ಯಾಂಕ್/ಕೃಷಿ ವಿಭಾಗದ ಅಧಿಕಾರಿಗಳ ಮಾಧ್ಯದಿಂದ ತಿಳಿಸುವುದು ಕಡ್ಡಾಯವಾಗಿರುತ್ತದೆ. ಇದರಲ್ಲಿ ಕೃಷಿಕರ ಹೆಸರು, ಮೊಬೈಲ್ ನಂಬರ್, ಅಧಿಸೂಚಿತ ಪಟವಾರ ಸರ್ಕಲ್ (ಸರ್ಕಾರಿ ಕರಣಿಕ ವಲಯ), ಬ್ಯಾಂಕ್‌ನ ಹೆಸರು, ಬ್ಯಾಂಕ್ ಖಾತೆಯ ಸಂಖ್ಯೆ, ವಿಪತ್ತಿನ ಪ್ರಕಾರ, ಪ್ರಭಾವಿತ ಬೆಳೆ ಮುಂತಾದ ಮಾಹಿತಿಯನ್ನು ಗುರುತಿಸಬೇಕು.

ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojana
ಹೆಚ್ಚಿನ ಮಾಹಿತಿಗಾಗಿ :
ಕಿಸಾನ್ ಕಾಲ್ ಸೆಂಟರ್ (1800-180-1551), ಸಿಎಸ್‌ಸಿ, ಬ್ಯಾಂಕ್ ಅಥವಾ ಇಸ್‌ಕ್ಯೂರನ್ಸ್ ಏಜಂಟ್‌ರನ್ನು ಸಂಪರ್ಕಿಸಿ ಹಾಗೂ ಅಧಿಸೂಚಿತ ಬೆಳೆಗಳು, ವಿಮಾ ಮೊತ್ತ ಹಾಗೂ ನಿಮ್ಮ ಹಳ್ಳಿಯಲ್ಲಿ ಯೋಜನೆಗಾಗಿ ದಾಖಲಾತಿಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿಯನ್ನು ಪಡೆಯಿರಿ.
@PMFasalBima Yojana @pmfby www.pmfby.gov.in Crop Insurance (Farmer’s app)
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಸಮೀಪದ ಬ್ಯಾಂಕ ಶಾಖೆ / ಗ್ರಾಹಕ ಸೇವಾ ಕೇಂದ್ರ ವನ್ನು ಅಥವಾ ನಮ್ಮ ಶುಲ್ಕರಹಿತ ಫೋನ ನಂಬರ್ 1800 209 1111 ಅನ್ನು ಸಂಪರ್ಕಿಸಿ,
Leave a Comment