ಒಬ್ಬಾತ ವ್ಯಾಪಾರಿಯು ಒಂದು ಮೃಗಾಲಯವನ್ನು ತೆರೆದರು.
ಮೊದಲು ಪ್ರವೇಶ ಶುಲ್ಕವನ್ನು 50/ ರುಪಾಯಿಗಳನ್ನು ನಿಗದಿಪಡಿಸಿದರು. ಆದರೆ ಜನರು ಯಾರೂ ಬರಲಿಲ್ಲ. ಆತ ಶುಲ್ಕವನ್ನು 25/- ರುಪಾಯಿಗಳಿಗೆ ಇಳಿಸಿದರು. ಆದರೂ ಯಾರೂ ಬಾರದಾದಾಗ ಶುಲ್ಕವನ್ನು 20/- ರುಪಾಯಿ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ.
ನಂತರ ಆತ 15/- ರುಪಾಯಿಗಳನ್ನು ನಿಗದಿಪಡಿಸುತ್ತಾರೆ. ಆದರೂ ಜನರು ಸುಳಿಯಲೇ ಇಲ್ಲ. ಕೊನೆಯ ಪರಿಶ್ರಮ ಎಂಬಂತೆ ಪ್ರವೇಶ ಶುಲ್ಕವನ್ನು 10/- ರುಪಾಯಿಗಳನ್ನಾಗಿ ಮಾಡುತ್ತಾರೆ.
ಆದರೂ ಜನರ್ಯಾರೂ ಬರಲೇ ಇಲ್ಲ. ಕೊನೆಗೆ ಆತ ಪ್ರವೇಶ ಶುಲ್ಕ ಫ್ರೀ ಅಂತ ಬೋರ್ಡ್ ಹಾಕುತ್ತಾರೆ. ನಿಮಿಷಗಳೊಳಗೆ ಮೃಗಾಲಯವು ಜನರಿಂದ ತುಂಬಿತ್ತು.
ಕೂಡಲೇ ಆತ ” ಹೌಸ್ ಫುಲ್ ” ಅಂತ ಬೋರ್ಡ್ ಹಾಕಿ ಗೇಟ್ ಬಂದ್ ಮಾಡುತ್ತಾರೆ. ನಂತರ ಹುಲಿಯ ಪಂಜರವನ್ನು ತೆರೆದು ಬಿಡುತ್ತಾರೆ. ಇದನ್ನು ನೋಡಿದ ಒಳಗಿದ್ದ ಜನರು ಗೇಟಿನಾಚೆ ಓಡತೊಡಗಿದರು.
ಗೇಟ್ ನಲ್ಲಿ ನೇತಾಕಿದ ಬೋರ್ಡನ್ನು ನೋಡಿ ಜನರು ದಂಗಾದರು.
ಹೊರಗೆ ಹೋಗಲು ಶುಲ್ಕ 303/- ರುಪಾಯಿಗಳು.
ಆ ಮೃಗಾಲಯದ ಹೆಸರೇ “ಜಿಯೋ “