ಕಾರವಾರ:ತಾಲೂಕಿನ ಹಣಕೋಣದಲ್ಲಿ ಗ್ರಾಮಸ್ಥರಿಂದ ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಮುಕ್ತಿದಾಮವಾದ ಸ್ಮಶಾನ ಸ್ವಚ್ಚತೆಗೆ ಆದತ್ಯೆ ನೀಡುವಂತೆ ಊರಿನ ಮೊಕ್ತೇಸರ ವೆಂಕಟೇಶ್ ನಾಯ್ಕ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸೇರಿದ್ದ ಗ್ರಾಮಸ್ಥರು ಸ್ಮಶಾನದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಸ್ವಚ್ಚ ಮಾಡಿದರು. ಸ್ಮಶಾನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು. … [Read more...] about ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ
Karwar News
ಬಲಿಷ್ಟ ಭಾರತ ನಿರ್ಮಾಣ ತಾಯಿಯರ ಕೈಯಲಿದೆ;ಸಚಿವ ಆರ್.ವಿ. ದೇಶಪಾಂಡೆ
ಕಾರವಾರ:ಬಲಿಷ್ಟ ಭಾರತ ನಿರ್ಮಾಣ ತಾಯಿಯರ ಕೈಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ತಾಲೂಕಿನ ಬಾವಳದಲ್ಲಿ ಮಾತ್ರಪೂರ್ಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯನ್ನು ಬಳಸಿಕೊಂಡು ಮಾತೆಯರು ಮಕ್ಕಳನ್ನು ಪೋಷಿಸಬೇಕು. ಗರ್ಭಿಣಿ ಹಾಗೂ ಬಾಣಂತಿಯರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು. ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ … [Read more...] about ಬಲಿಷ್ಟ ಭಾರತ ನಿರ್ಮಾಣ ತಾಯಿಯರ ಕೈಯಲಿದೆ;ಸಚಿವ ಆರ್.ವಿ. ದೇಶಪಾಂಡೆ
ಬೈಕ್ ಸ್ಕಿಡ್: ಸವಾರ ಸಾವು
ಕಾರವಾರ: ಬೈಕ್ ಸ್ಕಿಡ್ ಆದ ಪರಿಣಾಮ ಸಹ ಸವಾರ ಮೃತಪಟ್ಟ ಘಟನೆ ಅಮದಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಂಕೋಲಾ ಹೊಸಗದ್ದೆಯ ಅಕಿಲಾ ಅಣ್ವೇಕರ್ (49) ಮೃತರು. ತಮ್ಮ ಪತಿ ಶಂಕರ್ ಅಣ್ವೇಕರ್ ಜೊತೆ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಬೈಕ್ ನೆಲಕ್ಕೆ ಅಪ್ಪಳಿಸಿದ್ದು, ಹಿಂಬದಿ ಸವಾರರಾಗಿದ್ದ ಅಕಿಲಾ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವರು ಮೃತಪಟ್ಟರು. ಶಂಕರ್‍ರ ಕೈ ಮೂಳೆ ಮುರಿದಿದೆ. ಗಾಯಾಳವುನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. … [Read more...] about ಬೈಕ್ ಸ್ಕಿಡ್: ಸವಾರ ಸಾವು
ಬೆಂಕಿ ಹಚ್ಚಿದ ಕಿಡಿಗೇಡಿಗಳು
ಕಾರವಾರ:ನಗರದಲ್ಲಿ 7 ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಎಂ.ಜಿ ರಸ್ತೆಯಲ್ಲಿ ಸೋಮವಾರ ನಡೆದಿದೆ. ಭೂ ಮಾಪನ ಇಲಾಖೆ ಹಿಂಬಾಗ ನಿಲ್ಲಿಸಿಟ್ಟ ಬೈಕ್‍ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರ ಊರುಗಳಿಗೆ ತೆರಳಬೇಕಿದ್ದ ಸ್ಥಳೀಯರು ಇಲ್ಲಿ ಬೈಕ್ ನಿಲ್ಲಿಸಿ ಬಸ್ ಮೂಲಕ ಹೋಗುತ್ತಿದ್ದರು. ಹೀಗೆ ಸಾಲಿನಲ್ಲಿ ನಿಲ್ಲಿಸಲಾದ ಬೈಕ್‍ಗಳಿಗೆ ಬೆಂಕಿ ತಗುಲಿದೆ. ಪರಿಣಾಮ ಎಲ್ಲ ಬೈಕ್‍ಗಳು ಸಂಪೂರ್ಣ ಭಸ್ಮವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ … [Read more...] about ಬೆಂಕಿ ಹಚ್ಚಿದ ಕಿಡಿಗೇಡಿಗಳು
ಶರದ್ ಸಂದ್ಯಾ ಸತ್ಸಂಗ ಕಾರ್ಯಕ್ರಮ
ಕಾರವಾರ:ಆರ್ಟ ಆಫ್ ಲಿವಿಂಗ್ ವತಿಯಿಂದ ಅ. 4ರ ಸಂಜೆ 5.30ಕ್ಕೆ ನಗರದ ರಾಘವೇಂದ್ರ ಮಠ ಸಭಾಂಗಣದಲ್ಲಿ ಶರದ್ ಸಂದ್ಯಾ ಸತ್ಸಂಗ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಿಂದ ಸೂರ್ಯಪಾದ ಸ್ವಾಮೀಜಿ ನಗರಕ್ಕೆ ಆಗಮಿಸಲಿದ್ದು, ಸತ್ಸಂಗ ನಡೆಸಲಿದ್ದಾರೆ. ಮಾಹಿತಿಗೆ 9538413959 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ. … [Read more...] about ಶರದ್ ಸಂದ್ಯಾ ಸತ್ಸಂಗ ಕಾರ್ಯಕ್ರಮ

