ಕಾರವಾರ: ಬೈಕ್ ಸ್ಕಿಡ್ ಆದ ಪರಿಣಾಮ ಸಹ ಸವಾರ ಮೃತಪಟ್ಟ ಘಟನೆ ಅಮದಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಂಕೋಲಾ ಹೊಸಗದ್ದೆಯ ಅಕಿಲಾ ಅಣ್ವೇಕರ್ (49) ಮೃತರು. ತಮ್ಮ ಪತಿ ಶಂಕರ್ ಅಣ್ವೇಕರ್ ಜೊತೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಬೈಕ್ ನೆಲಕ್ಕೆ ಅಪ್ಪಳಿಸಿದ್ದು, ಹಿಂಬದಿ ಸವಾರರಾಗಿದ್ದ ಅಕಿಲಾ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವರು ಮೃತಪಟ್ಟರು. ಶಂಕರ್ರ ಕೈ ಮೂಳೆ ಮುರಿದಿದೆ. ಗಾಯಾಳವುನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. … [Read more...] about ಬೈಕ್ ಸ್ಕಿಡ್: ಸವಾರ ಸಾವು