ಕಾರವಾರ: ಬಟ್ಟೆ ಒಣಗಿಸಲು ತೆರಳಿದ್ದ ಬಾಲ ಅಪರಾಧಿಯೊಬ್ಬ ನಾಪತ್ತೆಯಾದ ಘಟನೆ ರಿಮಾಂಡ್ ಹೋಂ ನಲ್ಲಿ ನಡೆದಿದೆ. ಮುಂಡಗೋಡ ಮಳಗಿಯ ಪರಶುರಾಮ್ ಆಲೂರು ತಪ್ಪಿಸಿಕೊಂಡವ. ಈತ ಬಟ್ಟೆ ಒಣಗಿಸುವ ಉದ್ದೇಶದಿಂದ ಬಾಲ ಆರೋಪಿ ಗೃಹದ ಅಂಗಳಕ್ಕೆ ತೆರಳಿದ್ದು, ಅಲ್ಲಿಂದ ಸಿಬ್ಬಂದಿ ಕಣ್ತಪ್ಪಿಸಿ ಕಾಣೆಯಾಗಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಹುಡುಕಾಟ ನಡೆದಿದೆ. … [Read more...] about ಬಾಲ ಅಪರಾಧಿ ನಾಪತ್ತೆ