ಬಂಕನಾಥೇಶ್ವರ ಯುವಕ ಸಂಘ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಬಂಕಿಕೊಡ್ಲ ಆನಂದಾಶ್ರಮ ಪ್ರೌಢಶಾಲೆಯ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಪ್ರದೀಪ ನಾಯಕರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸನ್ಮಾನಿತಗೊಂಡ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸುಕ್ರಜ್ಜಿ ಮಾತನಾಡುತ್ತಾ ಹಾಲಕ್ಕಿ ಸಮಾಜ ದುಃಶ್ಚಟಗಳಿಂದ ದೂರವಿದ್ದು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ನುಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ನಿವೃತ್ತ ಡಿ. ಎಫ್.ಓ. ಹಾಗೂ ಬೆಳಕು ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ರವರು ಮಾತನಾಡುತ್ತಾ ಸುಕ್ರಜ್ಜಿಯನ್ನು ಗುರುತಿಸಿ ಪದ್ಮಶ್ರೀ ಯಂತಹ ಅತ್ಯುನ್ನತ ಪ್ರಶಸ್ತಿಯನ್ನು ನೀಡಿದ ಕೇಂದ್ರ ಸರಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಯಕ್ಷಗಾನದಲ್ಲಿ ಚಿಟ್ಟಾಣಿ ಹೆಗಡೆ, ಈಗ ಜಾನಪದದಲ್ಲಿ ಸುಕ್ರಜ್ಜಿ ಇವರಿಗೆ ಸಿಕ್ಕ ಸನ್ಮಾನ ಈ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಸಂದ ಸನ್ಮಾನ ಎಂದು ಹೇಳುತ್ತಾ ಅತ್ಯಂತ ಉತ್ತಮ, ಅಮೋಘ ಹಾಗೂ ಸುಸಜ್ಜಿತವಾಗಿ ನಡೆಸುತ್ತಿರುವ ಈ ವಾಲಿಬಾಲ್ ಪಂದ್ಯಾವಳಿಯ ಸಂಘಟಕರನ್ನು ಶ್ಲಾಘಿಸಿ ಅವರ ಸಂಘಟನಾ ಕೌಶಲ್ಯತೆಯನ್ನು ಕೊಂಡಾಡಿದರು. ಹಿಂದುಳಿದ ಜಾತಿ, ಹಿಂದುಳಿದ ಪ್ರದೇಶದವರು ನಡೆಸುತ್ತಿರುವ ಈ ಪಂದ್ಯಾವಳಿ ಸುತ್ತ ಮುತ್ತಲ ಹಳ್ಳಿಯ ಗಮನ ಸೆಳೆದಿದೆ ಎಂದು ಹೇಳುತ್ತಾ ಹಾಲಕ್ಕಿ ಸಮಾಜವನ್ನು ಅವರ ಬೇಡಿಕೆಯಾದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮನ್ವಯದಿಂದಾಗಲಿ. ಹಿಂದುಳಿದ ಈ ಸಮಾಜ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಗೋಕರ್ಣ ಪ್ರಾಧಿಕಾರದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದರು.
ಸಭೆಯಲ್ಲಿ ಗಾಯತ್ರಿ ಗೌಡ, ಮನೋಹರ ಗೌಡ, ಶ್ರೀನಿವಾಸ ನಾಯಕ, ಅರುಣ ಗೌಡ, ಗಜಾನನ ನಾಯ್ಕ, ಆನಂದು ಕವರಿ, ವಾಸುದೇವ ಗೌಡ, ನಾಗೇಶ ರಾಯ್ಕರ್, ನಾಗರಾಜ ನಾಯಕ ಹನೇಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
-gaju
Leave a Comment