ಗೋಕರ್ಣದ :
ಇಂದು ಮದ್ಯಾಹ್ನ ಗೋವಾ ಕಡಲ ತೀರದ ಲೈಫ್ ಸೇವರ್ ಪಡೆ ಹಾಗು ಗೋಕರ್ಣ ಕರಾವಳಿ ಕಾವಲು ಪಡೆ ಹಾಗು ಗೋಕರ್ಣ ಪೊಲೀಸ್ ಸಿಬ್ಬಂದಿ ಹಾಗು ಬಂಕಿಕೊಡ್ಲದ ಶಂಕರ ಪ್ರಸಾದ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಬೆಸ್ತರಿಗೆ ಹಾಗು ಗೋಕರ್ಣದ ಬೆಸ್ತರಿಗೆ ಹಾಗು ನೀರಿನಲ್ಲಿ ಆಸಕ್ತ ಜೀವ ಉಳಿಸುವ ತಂತ್ರಗಾರಿಕೆ ಕಲಿಯುವವರಿಗಾಗಿ ಗೋಕರ್ಣ ಬೀಚ್ನಲ್ಲಿ ಸಾರ್ವಜನಿಕರನ್ನು ಮತ್ತು ಪ್ರವಾಸಿಗರನ್ನು ಸಮುದ್ರದಲೆಯಲ್ಲಿ ಸಿಲುಕಿದಾಗ ಉಳಿಸುವ ಕಲೆಯ ಪ್ರಾತ್ಯಕ್ಷಿಕತೆ ನಡೆಯಿತು.
ಇದೇ ಸಮಯದಲ್ಲಿ ಸೋಜಿಗ ಎಂಬಂತೆ ನಿಜವಾಗಿಯೂ ಇಲ್ಲಿನ ಕುಡ್ಲೆ ಸಮುದ್ರದಲ್ಲಿ ಈಜಾಡಲು ಗೆಳೆಯರೊಟ್ಟಿಗೆ ತೆರಳಿದ ಹೈದರಾಬಾದ್ ನ ಕೇ. ವಿದ್ಯಾಸಾಗರ (24) ಸಮುದ್ರ ಸೆಳೆತಕ್ಕೆ ಸಿಲುಕಿ ನಂತರ ಎಳೆತಂದು 108 ವಾಹನದಲ್ಲಿ ಓಕ್ಸಿಜನ್ ನೀಡಿದರು. ನಂತರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಜಗದೀಶ ನಾಯ್ಕ ತೀವೃ ಪ್ರಯತ್ನ ನಡೆಸಿದರೂ ಫಲಕಾರಿಯಾಗದೇ ಮರಣ ಪಟ್ಟಿದ್ದಾನೆ. ಬೆಂಗಳೂರಿನಲ್ಲಿ ಆಗತಾನೇ ವೈದ್ಯಕೀಯ ಪದವಿ ಶಿಕ್ಷಣ ಪಡೆದು ಇನ್ನೂ ಹತ್ತು ದಿನ ನಂತರ ರಿಸರ್ಟ್ ಬರಲಿದೆ ಎಂಬ ಖುಶಿಯಲ್ಲಿ ಗೋಕರ್ಣ ಕ್ಷೇತ್ರ ದರ್ಶನಕ್ಕೆ ಬಂದವ ಸಮುದ್ರ ಸಾವಿಗೀಡಾಗಿದ್ದಾನೆ. ಇತ್ತ ಕೋಟಿತೀರ್ಥದಲ್ಲಿ ತಂದೆಯ ಅಪರ ಕರ್ಮಾಂಗ ಮುಗಿಸಿ ಕೊನೆಯಲ್ಲಿ ತೀರ್ಥ ಸ್ನಾನಕ್ಕಾಗಿ ಕೋಟಿತೀರ್ಥದಲ್ಲಿ ಮೂಳುಗಿ ಮೇಲೆ ಬಾರದಿದ್ದಾಗ ಕಟ್ಟೆಯ ಮೇಲಿದ್ದ ಸಂಬಂದಿಗಳ ಬೊಬ್ಬೆ ಕೇಳಿ ಇಲ್ಲಿನ ಚಿಗುರು ಮಿತ್ರ ಮಂಡಳದ ಸಂಸ್ಥಾಪಕ ಅದ್ಯಕ್ಷರಾದ ಈಜುಪಟು ತಿಮ್ಮಪ್ಪಾ ಉಪಾದ್ಯಾಯ ನೀರಿಗೆ ಧುಮುಕಿ ಮೇಲೆತ್ತು ಬಚಾವಾಗಿಸಿದ್ದಾರೆ. ಮಂಗಳೂರಿನ ವಿನಯಕುಮಾರ (42) ಎಂದಿದ್ದು ಪಿ.ಎಸ್.ಐ. ಹಾಗು ಸಿಬ್ಬಂದಿ ಈರ್ವರದೂ ಪ್ರಕರಣ ಧಾಕಲಿಸಿ ತನಿಖೆ ಕೈಕೊಂಡಿದ್ದಾರೆ. ಗೋಕರ್ಣದ ಸಮುದ್ರದಲ್ಲಿ 2017 ರ 14 ಸಾವು ಇದಾಗಿದೆ.
-pushpahas bastikar
Leave a Comment