ಕುಮಟಾ:
ಕುಮಟಾ ತಾಲೂಕ ದಿವಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದ ದಿನೇಶ ಗೌಡ ಹರಕಡೆ 93.76% ಅಂಕ ಗಳಿಸಿ ಪಾಸಾಗುವುದರೊಂದಿಗೆ ಈ ಸಂಪೂರ್ಣ ಅಂಗವಿಕಲ ಸಾಧಿಸಿದ ಸಾಧನೆಯ ಕುರಿತು ಅನೇಕರು ಮೆಚ್ಚುಗೆ ಮಾತುಗಳನ್ನು, ಅಲ್ಪ ಸ್ವಲ್ಪ ಸಹಾಯವನ್ನು ಮಾಡಿದ್ದಾರೆ. ಆದರೂ ಬೆಳಕು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ನಾಗರಾಜ ನಾಯಕ ತೊರ್ಕೆ ಅವರ ಅಧ್ಯಕ್ಷತೆಯಲ್ಲಿ ತಮ್ಮೆಲ್ಲಾ ಸಿಬ್ಬಂದಿ ವರ್ಗದೊಂದಿಗೆ ದಿನೇಶ ಗೌಡನ ಮನೆಗೆ ತೆರಳಿ ಅವನ ಸಾಧನೆಗೆ ಸನ್ಮಾನಿಸುವುದರೊಂದಿಗೆ ಅವನನ್ನು ದತ್ತು ಪಡೆದು ಅವನ ಈ ವರ್ಷದ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸಿರುತ್ತಾರೆ. ಸಂಪೂರ್ಣ ಅಂಗವಿಕಲನಾದ ಇವನಿಗೆ ಡಾ|| ಎ.ವಿ ಬಾಳಿಗಾ ಕಾಮರ್ಸ ವಿಭಾಗದಲ್ಲಿ ಆಡಳಿತ ವರ್ಗದವರೊಂದಿಗೆ ಸಮಾಲೋಚಿಸಿ ಕಾಲೇಜ ಪ್ರವೇಶ ದೊರಕಿಸಿದ್ದಲ್ಲದೇ ಆತನಿಗೆ ಬೇಕಾದ ವಿಶೇಷ ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಇನ್ನಿತರ ಸೌಲಭ್ಯಗಳನ್ನು ಕಲ್ಪಸಿರುವರು. ಪ್ರತಿದಿನ ಮನೆಯಿಂದ ಕಾಲೇಜಿಗೆ ಪ್ರಯಾಣಕ್ಕೆ ರಿಕ್ಷಾ ವ್ಯವಸ್ಥೆ ಮಾಡಿರುತ್ತಾರೆ. ದಿನೇಶ ಗೌಡ ಮೊದಲ ವರ್ಷದ ವ್ಯಾಸಂಗ ಮುಗಿಸಿ ಈ ವರ್ಷದ ಕೊನೆಯ ಪರೀಕ್ಷೆಯನ್ನು ದಿ:-3-3-17ರಂದು ಬರೆದಿದ್ದು ನಾಗರಾಜ ನಾಯಕರಿಗೆ ಧನ್ಯವಾದ ಹೇಳಿದ್ದಲ್ಲದೇ ನಾಗರಾಜ ನಾಯಕರವರು ದಿನೇಶ ಗೌಡನನ್ನು ಭೇಟಿಯಾಗಿ ಅವನ ಕುರಿತು ಚರ್ಚಿಸಿದಾಗ ಪರೀಕ್ಷೆ ಚೆನ್ನಾಗಿ ಬರೆದಿದ್ದು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಆಶಾಭಾವ ಹೊಂದಿದ್ದು ಅತ್ಯಂತ ಕೃತಜ್ಞತೆಯಿಂದ ಬೆಳಕು ಸಂಸ್ಥೆಯ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳನ್ನು ಧನ್ಯವಾದ ಹೇಳುತ್ತಿದ್ದ ಕ್ಷಣ ನಿಜವಾಗಿ ಮನ ಕಲಕುವಂತಿತ್ತು ಅಂತೆಯೇ ನಾಗರಾಜ ನಾಯಕ ಸಹಿತ ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಲಿ ಮುಂದೆಯೂ ಸಹ ಈ ಸಂಸ್ಥೆ ಮತ್ತು ನಾನು ಸಹ ಸಹಾಯಕಾರಿ ಎನ್ನುವುದರೊಂದಿಗೆ ಸಮಾಜದ ಇತರೇ ಸಂಸ್ಥೆಗಳಿಗೆ, ದಾನಿಗಳಿಗೆ, ಸಮಾಜ ಸುಧಾರಕರಿಗೂ ಮಾದರಿಯಾಗಿರುತ್ತಾರೆ.
-gaju
Leave a Comment