ಹೊನ್ನಾವರ: ಉ.ಕ. ಜಿಲ್ಲಾಧಿಕಾರಿಗಳು ಪುರಸಭೆ ಕುಮಟಾ ವ್ಯಾಪ್ತಿಯ ಘನ ತ್ಯಾಜ್ಯವನ್ನು ಹೊನ್ನಾವರ ಪ.ಪಂ. ಘನತ್ಯಾಜ್ಯ ಘಟಕದಲ್ಲಿ ತಾತ್ಪೂರ್ತಿಕವಾಗಿ ವಿಲೇವಾರಿ ಮಾಡುವ ಕುರಿತು ಹೊರಡಿಸಿದ ಆದೇಶವು ಜನ ವಿರೋಧಿ, ಪರಿಸರ ವಿರೋಧಿ, ಆದೇಶವಾಗಿದ್ದು ಅದನ್ನು ತಕ್ಷಣ ಕೈಬಿಡಲು ಒತ್ತಾಯಿಸಿ ಜಾಗೃತ ಹೊನ್ನಾವರ ವೇದಿಕೆಯ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ ತಾಲೂಕಿನ ವಿವಿಧ ಸಂಘಟನೆಯ ಪ್ರಮುಖರೊಂದಿಗೆ ತಹಶೀಲ್ದಾರರಿಗೆ ಮನವಿ ನೀಡಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ ವಿ.ಆರ್. ಗೌಡ ಮನವಿಯನ್ನು ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು.
ಹೊನ್ನಾವರ ಘನತ್ಯಾಜ್ಯ ವಿಲೇವಾರಿಯಲ್ಲಿ ಸಮರ್ಪಕತೆ ಇಲ್ಲದ್ದರಿಂದ ಘಟಕದ ಸುತ್ತ ಮುತ್ತಲೂ ಇರುವ ಗ್ರಾಮಗಳಾದ ಮುಗ್ವಾ, ಆರೊಳ್ಳಿ, ಆರ್‍ಕೊಡ್ಲು, ದುಗ್ಗೂರು, ಕರ್ಕಿ ಭಾಗದ ಜನರ ಜಾನುವಾರುಗಳು, ಆಕಳುಗಳು ತ್ಯಾಜ್ಯದಿಂದ ಅಪಾಯಕ್ಕೆ ಸಿಲುಕಿವೆ. ಕಸಾಯಿಖಾನೆಗಳ, ಚಿಕನ್À ಸೆಂಟರಗಳ ಸರಿಯಾಗಿ ವಿಲೇವಾರಿ ಆಗದ ಮಾಂಸಗಳನ್ನು ಇಲ್ಲಿ ಎಲ್ಲೆಂದರೆಲ್ಲಿ ಚೆಲ್ಲಿ ಹೋಗುವುದರಿಂದ ಬಿಡಾಡಿ ನಾಯಿಗಳು ಹೆಚ್ಚಿ ಇಲ್ಲಿಗೆ ಮೇಯಲು ಬರುವ ಆಕಳುಗಳ ಮೇಲೆ ದಾಳಿ ಮಾಡುವ ಪ್ರಸಂಗಗಳು ಹೆಚ್ಚುತ್ತ್ತಿವೆ. ಕಾಡುಹಂದಿಗಳು ಹಗಲಲ್ಲೇ ಈ ಭಾಗದಲ್ಲಿ ಗುಡ್ಡದ ಹುಲ್ಲಿಗೆ, ತರಗೆಲೆ ಸಂಗ್ರಹಿಸಲು ಬರುವ ಜನರನ್ನು ಓಡಿಸುತ್ತಿವೆ. ಘಟಕದ ವಿಷಯುಕ್ತ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹಾಳಾಗುತ್ತಿದೆ. ಪರಿಸರದಲ್ಲಿ ದುರ್ವಾಸನೆ ಹರಡಿವೆ. ಸಣ್ಣ ಸಣ್ಣ ಗುಡ್ಡದ ಪ್ರಾಣಿಗಳು-ಪಕ್ಷಿಗಳು ಸಾಯುತ್ತಿವೆ ಉತ್ತಮ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸದೇ ಇದ್ದರಿಂದ ಸುತ್ತಲಿನ ಪರಿಸರ ಹಾನಿಗೊಳಗಾಗಿದೆ. ಈ ಸಮಯದಲ್ಲೇ ಪುರಸಭೆ ಕುಮಟಾದಿಂದ ತ್ಯಾಜ್ಯ ತಂದು ಇಲ್ಲಿ ಸುರಿದರೆ. ಘಟಕವು ಹೊರಸೂಸುವ ದುರ್ವಾಸನೆ, ಹಾರುತ್ತಿರುವ ಪ್ಲಾಸ್ಟಿಕ್, ಕಸ, ದೂಳುಗಳಿಂದ ಶಾಂತಿಯುತ ಆರೋಗ್ಯ ಪೂರ್ಣ ಬದುಕಿಗೆ ಅಪಾಯವನ್ನು ಉಂಟಾಗಲಿದೆ. ಘಟಕದಿಂದ ಹರಿದು ಬರುವ ವಿಷಯುಕ್ತ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹಾಳಾಗುತ್ತದೆ. ಸುಮಾರು 20 ಕಿ.ಮೀ. ದೂರದ ಕುಮಟಾ ಪಟ್ಟಣ ಪಂಚಾಯತ ವ್ಯಾಪ್ತಿಯಿಂದ ತ್ಯಾಜ್ಯವನ್ನು ಹೆದ್ದಾರಿಯಲ್ಲಿ ತಂದು ಈ ಘಟಕಕ್ಕೆ ಸುರಿಯುವುದು ವೈಜ್ಞಾನಿಕವಾಗಿ, ಆರ್ಥಿಕವಾಗಿ ಸಮಂಜಸವಲ್ಲ.
ರಾಜಕೀಯ ಒತ್ತಡಕ್ಕೆ ಪಟ್ಟಭದ್ರರಿಗೆ ಸಹಾಯ ಮಾಡುವ ಉದ್ದೇಶದಿಂದ ದೂರದ ಕುಮಟಾ ಭಾಗದಿಂದ ಎತ್ತಿ ತರುವ ತ್ಯಾಜ್ಯವನ್ನು ಇಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡಲು ಹೊನ್ನಾವರ ಘನತ್ಯಾಜ್ಯ ಘಟಕವನ್ನು ಬಳಸಲು ನಾವು ವಿರೋಧಿಸುತ್ತೇವೆ. ಜನರ, ಜಾನುವಾರುಗಳ ಆರೋಗ್ಯಕ್ಕೆ ತ್ಯಾಜ್ಯಗಳ ಸಾಗಾಟದ ಸಮಯದಲ್ಲಿ ಮಾರಕವಾಗುವ, ಆರ್ಥಿಕವಾಗಿ ಸರ್ಕಾರಕ್ಕೆ ಹೊರೆ ಆಗಬಲ್ಲ, ವೈಜ್ಞಾನಿಕವಲ್ಲದ ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು. ತಪ್ಪಿದರೆ ಯೋಜನೆಯ ವಿರುದ್ಧ ಜನ ಕಾನೂನು ಬದ್ಧ ಹೋರಾಟಕ್ಕೆ ಅಣಿಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಾಗೃತ ಹೊನ್ನಾವರ ಸಂಘಟನೆಯ ಸತ್ಯ ಜಾವಗಲ್, ಸಂಜಯ ಕಾಮತ, ನಾಗರಾಜ ಕಾಮತ, ಎಲ್.ಆರ್. ನಾಯ್ಕ, ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಉದಯರಾಜ ಮೇಸ್ತ, ಸುಧಾಕರ ಹೊನ್ನಾವರ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ, ಲಾಯನ್ಸ್ ಕ್ಲಬ್ ಅಧ್ಯಕ್ಷ ಶೇಖರ ನಾಯ್ಕ, ರೋಟರಿ ಸಂಸ್ಥೆಯ ಅಧ್ಯಕ್ಷ ವಿ.ಜಿ. ನಾಯ್ಕ, ಕಾರ್ಯದರ್ಶಿ ಸೂರ್ಯಕಾಂತ ಸಾರಂಗ, ಡಾ. ಪೂಜಾರಿ, ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಜಿ.ಪಿ. ಪಾಠಣಕರ, ಪ.ಪಂ. ಸದಸ್ಯರಾದ ರವೀಂದ್ರ ನಾಯ್ಕ, ತುಳಸಿದಾಸ ಪುಲ್ಕರ್, ಬಾಳೇರಿ ಬಾಳ, ಸುರೇಶ ಶೇಟ್, ನಾಗೇಶ ಮೇಸ್ತ, ತಾರಾ ಕೆ. ನಾಯ್ಕ, ಉದಯ ಮರ್ತು ನಾಯ್ಕ, ಕರ್ಕಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಕಾಂತ ಮೊಗೇರ, ಸದಸ್ಯ ಜಿ.ಕೆ. ಶೆಟ್ಟಿ, ತಾ.ಪಂ. ಸದಸ್ಯ ತುಕಾರಾಮ ನಾಯ್ಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಘವ ಬಾಳೇರಿ, ಎನ್.ಇ.ಎಸ್. ಶಿಕ್ಷಣ ಸಂಸ್ಥೆಯ ಆರ್.ಜಿ. ಪೈ, ಮೀನು ಸಗಟು ವ್ಯಾಪಾರಿ ಸಂಘದ ಅಧ್ಯಕ್ಷ ಗಣಪತಿ ಮೇಸ್ತ ಹಾಗೂ ತಾಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment