ಹೊನ್ನಾವರ :
ಪಟ್ಟಣದ ಸುವರ್ಣ ಕೊ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ 11 ನೇ ವರ್ಷದ ನಾಡವರ ಬಳಗದ ಮಿತ್ರಕೂಟವು ನಡೆಯಿತು. ಉದ್ಘಾಟಕರಾಗಿ ಕುಮಟಾದ ಖ್ಯಾತ ವೈದ್ಯ ಡಾ|| ಶ್ರೀನಿವಾಸ ಆರ್.ನಾಯಕ, ಅಧ್ಯಕ್ಷತೆಯನ್ನು ನಾಡವ ಬಳಗದ ಅಧ್ಯಕ್ಷ ಗಣಪತಿ ಟಿ.ನಾಯಕ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಒಂದು ಕುಟುಂಬದ ಮೂವರನ್ನು ಸನ್ಮಾನ ಮಾಡಲಾಯಿತು. ಇಲ್ಲಿನ ಚಂದ್ರಾಣಿ ಶಾಲೆಯ ಶಿಕ್ಷಕ ಎಚ್.ರಮೇಶ್ ಇವರ ಪತ್ನಿ ವಂದೂರು ಶಾಲೆಯ ಶಿಕ್ಷಕಿ ಉಷಾ ನಾಯಕ ಇವರು ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು ಹಾಗೂ ಇವರ ಪುತ್ರಿ ಯು.ಆರ್.ಸೌಪರ್ಣಿಕಾ ಇವರು ಧಾರವಾಡ ಶೆಟಲ್ ಬ್ಯಾಡ್‍ಮಿಂಟನ್‍ನಲ್ಲಿ `ಯೂನಿವರ್ಸಿಟಿ ಬ್ಲೂ’ ಗೌರವಕ್ಕೆ ಪಾತ್ರರಾಗಿದ್ದರು. ಇಡೀ ಕುಟುಂಬವು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗಮನಿಸಿ ಹೊನ್ನಾವರ ನಾಡವರ ಬಳಗ ಇವರನ್ನು ಸನ್ಮಾನಿಸಿದೆ.
ವೈದ್ಯ ಡಾ|| ಶ್ರೀನಿವಾಸ ನಾಯಕ ಮಾತನಾಡಿ ಇದೊಂದು ಅಪರೂಪದ ಸಂಗತಿ ಎಂದರು. ಹಾಗೂ ನಿವೃತ್ತ ಶಿಕ್ಷಕ ಗೋಪಾಲ ನಾಯಕರನ್ನು ಸನ್ಮಾನಿಸಲಾಯಿತು. ನಾಡವ ಸಮಾಜದ ಮಕ್ಕಳ ಪರೀಕ್ಷಾ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ವೇದಿಕೆಯ ಮೇಲೆ ರಾಮಾ ನಾಯಕ, ಶಿವಾನಂದ ನಾಯಕ, ಅರುಣ ಕೌರಿ, ರಾಜೇಂದ್ರ ನಾಯಕ, ಆನಂದ ನಾಯಕ, ಪ್ರಕಾಶ ನಾಯಕ. ಪಾಂಡುರಂಗ ಗಾಂವಕರ್ ಸ್ವಾಗತಿಸಿದರು, ಎಚ್.ರಮೇಶ್ ವಂದಿಸಿದರು. ವಿನೋದ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು.
-gaju
Leave a Comment