ಹೊನ್ನಾವರ:
ಹೊನ್ನಾವರ ತಾಲೂಕಿನ ಉಪ್ಪೋಣಿಯ ಹೊಸ್ಕೇರಿಹೊಂಡದ ಶ್ರೀ ಮಾರುತಿ, ಚೌಡೇಶ್ವರಿ, ಶನೈಶ್ಚರ,
ಭೂತೇಶ್ವರ ದೇವರ ವಾರ್ಷಿಕ ವರ್ಧಂತಿ ಉತ್ಸವ ಮಾ. 10, 11 ರಂದು ವಿಜೃಂಭಣೆಯಿಂದ ನಡೆಯಲಿದೆ.
ಮಾ. 10 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಶುದ್ಧಿಕರ್ಮ, ಗಣೇಶ ಪೂಜೆ, ಪುಣ್ಯಾಹ, ಹವನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 11 ರಂದು ಸಾಮೂಹಿಕ ಶ್ರೀ ಶನೈಶ್ಚರ ವೃತ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿವೆ. ರಾತ್ರಿ 7 ಗಂಟೆಗೆ ಮನರಂಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸುನಿಲ ಬಿ. ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 10 ಗಂಟೆಗೆ `ಪಾಪಣ್ಣ ವಿಜಯ-ಗುಣಸುಂದರಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
-gaju
Leave a Comment