ಹೊನ್ನಾವರ:
ಹೊನ್ನಾವರ ನಗರ ಪ್ರದೇಶಗಳಲ್ಲಿ ಕೈಗೊಂಡ ಒಳಚರಂಡಿ ಯೋಜನೆಯ ಕಾಮಗಾರಿಯು ಕಳಪೆಯಾಗಿದ್ದು, ಅದನ್ನು ತಕ್ಷಣ ಕೈ ಬಿಡಬೇಕೆಂದು ನಗರ ನಿವಾಸಿಗಳು ಒತ್ತಾಯಿಸಿದ್ದಕ್ಕೆ ಕಾಮಗಾರಿ ನಡೆಸುತ್ತಿದ್ದ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ತೆರಳಿದ ಘಟ£ ಬಜಾರ ರಸ್ತೆಯಲ್ಲಿ ನಡೆದಿದೆ.
ಮಾಸ್ತಿಕಟ್ಟಾ ಬಜಾರ ರಸ್ತೆಯನ್ನು ಯಾವ ಮೂನ್ಸೂಚನೆಯನ್ನು ನೋಡದೆ ಪೇಟೆಯಲ್ಲಿ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ ಸಂದರ್ಭದಲ್ಲಿ ಜೆ.ಸಿ.ಬಿ. ತಂದು ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಅಗೆಯಲು ಆರಂಭಸಿದ ಒಳ ಚರಂಡಿ ಕಾರ್ಮಿಕರನ್ನು ಸ್ಥಳೀಯರು ಆ ಕುರಿತು ವಿಚಾರಿಸಿದರೂ ಕಾಮಗಾರಿ ಮುಂದುವರೆಸಿದ್ದರು. ವಿವಿಧ ಸಂಘಟನೆಯ ಪ್ರಮುಖರು ಸ್ಥಳಕ್ಕೆ ಆಗಮಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು, ಇಂಜಿನೀಯರುಗಳನ್ನು ಹಾಗೂ ಕಾಮಗಾರಿ ಪಡೆದ ಗುತ್ತಿಗೆದಾರರನ್ನು ಸ್ಥಳಕ್ಕೆ ಬರುವವರೆಗೆ ಕೆಲಸ ಮಾಡಬಾರದೆಂದು ಒತ್ತಾಯಿಸಿದರು.
ಸಾರ್ವಜನಿಕ ಆಪಾದನೆ: ಜನ ಕಿರಿದಾದ ಮಣ್ಣಿನ ಪೈಪ್ಗಳನ್ನು ಕಾಂಕ್ರಿಟ್ ಬೆಡ್ ಹಾಕದೇ ಜೋಡಿಸುತ್ತಾ ಹೋದರೆ ಜೋಡಣೆಯ ಸಂದಿಯಿಂದ ಮರಗಳ ಬೇರುಗಳು ಪೈಪಿನ ಒಳಗಡೆ ಹೋಗಿ ಪೈಪ್ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಭಾರವಾದ ವಾಹನಗಳು, ಭೂಮಿಯ ಅಡಿಯಲ್ಲಿರುವ ಮಣ್ಣಿನ ಪೈಪಗಳ ಮೇಲೆ ಓಡಾಡಿದರೆ ಪೈಪ್ ಒಡೆದು ಹೋಗುವ ಸಂದರ್ಭ ಇರುತ್ತದೆ. ಈ ಎಲ್ಲಾ ಪ್ರಸಂಗಗಳಲ್ಲಿ ಸೋರುವ ಕೊಳಚೆ ನೀರು ಕುಡಿಯುವ ನೀರಿನ ಬಾವಿಗೆ ಇಳಿಯುವ ಅಪಾಯವಿರುತ್ತದೆ. ಕೊಳಚೆ ನೀರು ಸರಿಯಾಗಿ ಹರಿಯದೇ ರೋಗರುಜಿನುಗಳಿಗೆ ಕಾರಣವಾಗುತ್ತದೆ ಎಂದು ಆಪಾದಿಸಿದರು.
ಮಧ್ಯಾಹ್ನ 3.30 ಕ್ಕೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ದಿನಕರ ಶೆಟ್ಟಿ, ಪ.ಪಂ. ಸದಸ್ಯರಾದ ವಕೀಲ ಎಮ್.ಎನ್. ಸುಬ್ರಹ್ಮಣ್ಯ, ವಿಜು ಕಾಮತ, ತಾರಾ ನಾಯಕ, ವಕೀಲರಾದ ಸಂಜಯ ಕಾಮತ, ಕಮಲಾಕರ ಮಡಿವಾಳ, ಅನಿಲ್ ಪೈ, ಉದ್ಯಮಿ ವಿ.ಕೆ. ಕಾಮತ, ಉದಯರಾಜ ಮೇಸ್ತ, ಸಂಜಯ ಶೇಟ್, ರಾಜು ಭಂಡಾರಿ, ರಘು ಜಿ. ಪೈ, ಸುರೇಶ ಸಾರಂಗ, ಲೋಕೇಶ ಮೇಸ್ತ, ಶಿವಾನಂದ ಪ್ರಭು, ರಾಮಚಂದ್ರ ಕಾಮತ, ಇನ್ನಿತರರು ಗುತ್ತಿಗೆ ಕಾರ್ಯ ನಿರ್ವಹಿಸುತ್ತಿದ್ದ ಹರಿನಾಥ ಮತ್ತು ಅಂಬಯ್ಯ ಮತ್ತು ಒಳ ಚರಂಡಿ ಇಲಾಖೆಯ ಅಧಿಕಾರಿ ಪ್ರಕಾಶ ನಾಯಕ ಎನ್ನುವವರ ಬಳಿ ಕಾಮಗಾರಿಯ ಕುರಿತು ಚರ್ಚಿಸಿದರು.
ಆದರೆ ಸಮರ್ಪಕ ಮಾಹಿತಿಯನ್ನು ನೀಡಲು ಅವರು ವಿಫಲರಾದರು. ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಜೈನಾಬಿ ಸಾಬ್ ಸ್ಥಳಕ್ಕೆ ಆಗಮಿಸಿ ಜನರೊಂದಿಗೆ ಚರ್ಚಿಸಿದರು ಹಾಗೂ ತಾನು ಈಗಾಗಲೇ ಸಾರ್ವಜನಿಕ ದೂರನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದು, ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಉತ್ತರಿಸಿ ಉದ್ದೇಶಿತ ಒಳಚರಂಡಿಯ ಕಾಮಗಾರಿಗಳ ಯೋಜನಾ ನಕ್ಷೆ, ಅಂದಾಜು ಪತ್ರಿಕೆ, ಯೋಜನಾ ವೆಚ್ಚ ಇತರ ಕಾಮಗಾರಿಯ ಮಾಹಿತಿಯನ್ನು ನೀಡಿ ಗುಣಮಟ್ಟದ ಕಾಮಗಾರಿ ಮಾಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಧಾರವಾಡರವರಿಗೆ ತಿಳಿಸಿದ್ದೆ. ಆದರೂ ಕಾಮಗಾರಿ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯರು ಪ.ಪಂ. ಅಧ್ಯಕ್ಷರಿಗೆ ಮನವಿ ನೀಡಿ ಕಾಮಗಾರಿಯಲ್ಲಿ ಹಲವಾರು ಲೋಪದೋಷಗಳಿವೆ ಅವೈಜ್ಞಾನಿಕವಾಗಿ ಕಾಮಗಾರಿ ಮುಂದುವರೆಸಲಾಗಿದೆ ಈ ಯೋಜನೆ ಪುನಃ ಪ್ರಾರಂಭಿಸುವ ಪೂರ್ವದಲ್ಲಿ ನಗರ ನಿವಾಸಿಗಳ ಅಭಿಪ್ರಾಯವನ್ನು ಪಡೆಯಬೇಕು ಸ್ಥಳೀಯ ಸಮಸ್ಯೆಯ ಕುರಿತು ಸ್ಪಂಧಿಸಬೇಕು. ಕೊಳಚೆ ನೀರು ಹರಿವಿನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಧಾರವಾಡ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಪ.ಪಂ. ಸದಸ್ಯರು ಮತ್ತು ಸಾರ್ವಜನಿಕರು ಮುಕ್ತ ಚರ್ಚೆಗೆ ಅವಕಾಶ ನೀಡಬೇಕು ನಂತರ ಕಾಮಗಾರಿ ಆರಂಭಿಸಬೇಕು ಎಂಬ ಬೇಡಿಕೆಯನ್ನು ಇಟ್ಟರು. ಸ್ಪಂಧಿಸಿದ ಪ.ಪಂ. ಅಧ್ಯಕ್ಷೆ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಸಭೆ ಜರುಗಿಸಿ, ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಹಾಗೂ ಬಜಾರದಲ್ಲಿ ಕೊಳವೆ ಅಳವಡಿಸಲು ತೆಗೆದ ತೋಡನ್ನು ಮುಚ್ಚಿಸಿದರು.
————————— ————————————————————-
ಸರ್ಕಾರವು ಒಳ್ಳೆಯ ಉದ್ದೇಶದಿಂದ ಇಂತಹ ಯೋಜನೆಗಳನ್ನು ಆರಂಭಿಸುತ್ತದೆ. ಆದರೆ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು, ಯೋಜನೆಯ ಸ್ಥಳೀಯ ಸಮಸ್ಯೆಗಳ ನಿವಾರಣೆಗಳಿಗೆ ಪೂರಕವಾಗಿ ಕಾಮಗಾರಿ ಅನುಷ್ಠಾನಗೊಳಸಲು ಸಾಮಾನ್ಯ ಜ್ಞಾನ ಹೊಂದಿರಬೇಕು. ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸಲ್ಲ. ಗುಣಮಟ್ಟದ ಕಾಮಗಾರಿಗೆ ನಗರವಾಸಿಗಳೊಂದಿಗೆ ಚರ್ಚಿಸುವುದು ಸೂಕ್ತ.
-gaju
Leave a Comment