ಹೊನ್ನಾವರ:
ಹೊನ್ನಾವರ ಕನ್ನಡ ಅಭಿಮಾನಿ ಸಂಘ ಹೊನ್ನಾವರ ಇವರು ಇಂದು ಪ್ರತ್ರಿಕಾಗೋಷ್ಠಿಯನ್ನು ನಡೆಸಿ ಕುಮಟಾ ಘನತ್ಯಾಜ್ಯ ವಿಲೇವಾರಿಗೆ ಹೊನ್ನಾವರ ಪಟ್ಟಣ ಪಂಚಾಯತ ತಿರಸ್ಕರ
ಮಾಡಿದನ್ನು ಜಿಲ್ಲಾಧಿಕಾರಿಗಳು ಅಮಾನತ ಮಾಡಿದ ಬಗ್ಗೆ ತಿವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷರಾದ ಜಿ ಜಿ ಶಂಕರ ಈ ಹಿಂದೆ ನಮ್ಮ ಸಂಘ ಪ್ರಪ್ರಥಮವಾಗಿ ವಿಲೇವಾರಿ ವಿರೋಧಿಸಿ ಮಾನ್ಯ ತಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ನಂತರ ಹೊನ್ನಾವರದ ನಗರಿಕರು ವಿಲೇವಾರಿಯನ್ನು ಖಂಡಿಸಿದರು. ನಂತರ ಭಾರತೀಯ ಜನತಾ ಪಾರ್ಟಿ ಹೊನ್ನಾವರ ಘಟಕ, ಜಾಗ್ರತ ಹೆ ನ್ನಾವರದಂತ ಸಂಘಟನೆ ವಿಲೇವಾರಿಗೆ ಭಾರಿ ವಿರೋಧ ಮಾಡಿ ಮನವಿ ನೀಡಿದರು ಜಿಲ್ಲಾಧಿಕಾರಿಗಳು ಏಕಪಕ್ಷಿಯ ದೋರಣೆ ತಾಳಿ ಪ.ಪಂಚಾಯತ ಠರಾವು ಅಮಾನತು ಮಾಡಿದ್ದು ಸರಿಯಾದಿದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಭಾ.ಆ.ಸೇ ವ್ಯಾಸಂಗ ಮಾಡಿದರೂ ತ್ಯಾಜ್ಯವಸ್ತುವಿನ ಬಗ್ಗೆ ಅವರಿಗೆ ತಿಳಿಸಬೇಕಾಗಿದ್ದು ಎನು ಇಲ್ಲಾ ಹಾಗೆ ನೋಡಿದರೆ ನಮ್ಮ ದೇಶದ ಪ್ರಧಾನಿಗಳಾದ ನರೇಂದ್ರ ಮೋಧಿಯವರು ಸ್ವಚ್ಛಭಾರತ ನಿರ್ಮಾಣ ಕನಸು ಕಾಣುತ್ತಾ ಇರುವಾಗ ಬೇರೆ ತಾಲೂಕ ತ್ಯಾಜ್ಯ ನಮ್ಮ ತಾಲೂಕಿಗೆ ಸಾಗಿಸುವುದು ಎಷ್ಠರ
ಮಟ್ಟಿಗೆ ಸರಿ? ಮಾನ್ಯ ಜಿಲ್ಲಾಧಿಕಾರಿಗಳಿಗೆ ರಾಜಕೀಯ ಒತ್ತಡವಿದೆಯೆನೋ ಅನ್ನುವ ಅನುಮಾನ ನಮಗೆ ಬರುತ್ತದೆ. ಕುಮಟಾ ಘನತ್ಯಾಜ್ಯದಿಂದ ಕುಮಟಾ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಅನ್ನುತ್ತಾರೆ. ಇದು ನಮ್ಮ ಹೊನ್ನಾವರದ ನಿವಾಸಿಗಳಿಗೆ ಅನ್ವಯವಾಗುವುದಿಲ್ಲವೇ? ಈ ವಿಷಯದಲ್ಲಿ ಮಾನ್ಯ ಶಾಸಕಿಯರು ಮಧ್ಯ ಪ್ರವೇಶ ಮಾಡಿ ನಮಗೆ ನ್ಯಾಯ ನೀಡಬೇಕಾಗಿತ್ತು ಆದರೆ ಅವರು ಈ ವಿಷಯದಲ್ಲಿ ಹೊನ್ನಾವರದ ಪರ ಮೌನವಹಿಸಿದ್ದು ಸರಿಯಲ್ಲ ಮಾನ್ಯ ಜಿಲ್ಲಾಧಿಕಾಗಳು ಖುದ್ ಹೊನ್ನಾವರಕ್ಕೆ ಭೇಟಿ ನೀಡಿ ಜನಾಭಿಪ್ರಾಯ ಪಡೆದು ನಮ್ಮ ಭಾವನೆಗೆ ಹಾಗೂ ಆರೋಗ್ಯಕ್ಕೆ ಧಕ್ಕೆ ಆಗುವ ಈ ತಮ್ಮ ನಿಲುವನ್ನು ಬದಲಾಯಿಸಲು ವಿನಂತಿಸಿದರೂ ಇದಕ್ಕೆ ಮೀರಿದ ಕಸ ವೀಲೆವಾರಿ ಹೊನ್ನಾವರಕ್ಕೆ
ಮಾಡಿದರೆ ಈ ಕುರಿತು ತಾಲೂಕಿನ ಸಮಸ್ತ ನಾಗರಿಕರು ಸಂಘ ಸಂಸ್ಥೆಗಳು ಸೆರಿ ಬೃಹತ ಹೋರಾಟ ಮಾಡಬೇಕಾಗುತ್ತದೆ ಈ ಹೋರಾಟ ಉಗ್ರತೆಯಲ್ಲಿ ಆಗುವ ಸಾವು-ನೋವು-ನಷ್ಟಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ಶಾಸಕಿಯರು ಮತ್ತು ಸರ್ಕಾರವೇ ನೇರ ಹೋಣೆ ಆಗಬೇಕಾಗಿರುತ್ತಾರೆ ಎಂದು ಆಗ್ರಹಿದರು.
ಈ ಸಂದರ್ಭದಲ್ಲಿ ವಿನೋದ ನಾಯ್ಕ ರಾಯಲ್ಕೆರಿ ಇವರು ಮಾತನಾಡಿ ಈ ಕಸ ವಿಲೇವಾರಿಯಲ್ಲಿ ನೇರಾ ನೇರಾ ಶಾಸಕಿಯವರು “ರೀಲ್ ಮಾಸ್ಟರ್” ಯಾಕೆಂದರೆ ನನಗೆ ಹೊನ್ನಾವರ ಮತ್ತು ಕುಮಟಾ ಎರಡು ಕಣ್ಣು ಅಂತಾರೆ ಆದರೆ ಹೊನ್ನಾವರಕ್ಕೆ ಅನ್ಯಾಯವಾಗಿದೆ. ಈಗ ಯಾಕೆ ಸುಮ್ಮನಿದ್ದಾರೆ ಕುಮಟಾ ತಮ್ಮ ಸ್ವಂತ ಆಸ್ತಿ ತರ ಮಾಡುತ್ತಾರೆ ಮಲತಾಯಿ ಧೋರಣೆ ಸರಿಯಲ್ಲ ಕುಡಿಯುವ ನೀರು, ಒಳಚರಂಡಿ, ರಸ್ತೆ ಎಲ್ಲದಿರಲು ಹೊನ್ನಾವರವನ್ನು ಭೇದ ಭಾವದಿಂದ ನೋಡುತ್ತಾರೆ ಎಂದು ಖಂಡಿಸಿದ್ದಾರೆ.
ಉದಯರಾಜ ಮೇಸ್ತಾ ಅವರು ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಾಗು ಸಂಘ ಸಂಸ್ಥೆಗಳ ಮನವಿಗಳಿಗೆ ಬೆಲೆ ನೀಡುತಿಲ್ಲ ಎಲ್ಲಾ ತಾಲೂಕನ್ನು ತಾವು ಏಕದೃಷ್ಟಿಯಲ್ಲಿ ನೋಡಬೇಕು ಹಾಗೆ ಶಾಸಕಿ ಶಾರದಾ ಮೋಹನ್ ಶೆಟ್ಟಿ ಇವರು ತನ್ನ ಎರಡು ಕಣ್ಣು ಅಂತಾರೆ ಈಗ ಎಲ್ಲಿ ಹೋದರು? ಕುಮಟಾ ಉದ್ಯಾನವನ ಮಾಡುತಿದ್ದಾರೆ ,ಹೊನ್ನಾವರ ತ್ಯಾಜ್ಯ ಗುಂಡಿ ಮಾಡುತಿದ್ದಾರೆ. ಇದೆಲ್ಲಾ ನೋಡಿದರೆ ನಮ್ಮ ಹೊನ್ನಾವರ ಪ್ರತ್ಯೆಕ ವಿಧಾನಸಭೆ ಮಾಡುವುದೇ ಸರಿಯಾದ ಮಾರ್ಗವೆಂದರು.
ರಾಜು ಭಂಡಾರಿ ಯವರು ಮಾತನಾಡಿ ತ್ಯಾಜ್ಯವಿಲೇವಾರಿ ಇದು ನಮಗೆ ಸಾರ್ವಜನಿಕ ಕಗ್ಗೊಲೆ ಎಂದು, ಈಗಾಗಲೆ ಬೇರೆ ರಾಜ್ಯದಲ್ಲಿ ರದ್ದುಗೊಂಡ ಯೋಜನೆ ಒಳಚರಂಡಿ ಕಾಮಗಾರಿ ಹೊನ್ನಾವರದಲ್ಲಿ ಆರಂಭವಾಗಿದೆ. ಇದು ಅತ್ಯಂತ ಕಳಪೆಯಾಗಿದೆ. ಯೋಜನೆಯ ನಿರ್ದಿಷ್ಟ ಅಂದಾಜು ವೆಚ್ಚ ಎಲ್ಲವನ್ನು ಕಾಮಗಾರಿ ಮಾಡಲು ನಾಮಫಲಕವನ್ನು ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಆದರೆ ಅದು ಆಗಲಿಲ್ಲ. ಇದರಲ್ಲಿ ಬ್ರಷ್ಟಾಚಾರದ ಕರಿ ನೆರೆಳು ಕಾಣುತ್ತಿದೆ ಎಂದರು
ಇಬ್ರಾಹಿಂ ಸಾಬ ಮಾತನಾಡಿ ಈ ಎಲ್ಲ ಕಳಪೆ ಕಾಮಗಾರಿ Àತ್ಯಾಜ್ಯ ವಸ್ತು ವಿಲೇವಾರಿ ಹಿಂದೆ ಶಾರದಾ ಮೋಹನ್ ಶೆಟ್ಟಿ ಪಾತ್ರವಿದೆ ಎಂದು ಹೇಳಿ
ತಿವ್ರವಾಗಿ ಖಂಡಿಸಿದರು.
ಸತ್ಯ ಜಾವಗಲ್ ಅವರು ಮಾತನಾಡಿ ವೈಜಾನಿಕವಾದ ಕಾರ್ಯ ಒಳಚರಂಡಿಯಲ್ಲಿ ಆಗುತಿಲ್ಲ ಕಾರಣ ಅವರು ಬಳಿ ಯಾವುದೆ ಸರಿಯಾದ ಕಾರಣ ಹೊನ್ನಾವರ ಜನತೆ ಕಾಮಗಾರಿಯನ್ನು ಈಗಾಗಲೆ ಸ್ಥಗಿತ ಮಾಡಿಸಿದ್ದಾರೆ ಇದರಲ್ಲಿ ಕಾಣದ ಕೈಗಳು ಲಾಭಕ್ಕೆ ಮಾಡಿದ ವಿಫಲತೆಯ ಯೋಜನೆ ಎಂದು ಅಭಿಪ್ರಾಯಪಟ್ಟಿದಾರೆ
ಈ ಸಂದರ್ಭದಲ್ಲಿ ಸಂಘಟನೆಗಳು, ಶೇಖರ ವಗ್ಗರ, ಅಲ್ತಾಫ ಶೇಖ, ರಾಘವ ಮೇಸ್ತ ,ವಿನಾಯಕ ಆಚರಿ, ಗಣಪತಿ ಚಿತ್ತಾರ ಇÀvರರು
ಉಪಸ್ಥಿತರಿದರು.
-gaju
Leave a Comment