ಗೋಕರ್ಣ :
ಇಲ್ಲಿನ ಭದ್ರಕಾಳಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮಕ್ಕಳ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪರೀಕ್ಷಾ ಮೇಲ್ವಿಚಾರಕರು ಬೇಟಿ ಮಾಡಿ ವಿದ್ಯಾರ್ಥಿಗಳ ಮಾಹಿತಿ ಹಾಗು ಪರೀಕ್ಷಾ ಶಿಸ್ತಿನ ಕುರಿತು ತಪಾಸಣೆ ನಡೆಸಿದರು. ಗೋಕರ್ಣ ಕೇಂದ್ರದಲ್ಲಿ ಭದ್ರಕಾಳಿ ಕಾಲೇಜ್ ಹಾಗು ಹಿರೇಗುತ್ತಿ ಎಂ.ಜಿ.ಎಂ ಜ್ಯೂನೀಯರ್ ಕಾಲೇಜು ಸೇರಿಸಿ ಒಟ್ಟು 282 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕುಳಿತಿದ್ದು 175 ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯುತ್ತಿದ್ದರೆ 107 ಹುಡುಗರು ಪರೀಕ್ಷೆ ಬರೆಯುತ್ತಿದ್ದಾರೆ.
ವಿಜ್ನಾನ, ವಾಣಿಜ್ಯ, ಕಲಾ ವಿದ್ಯಾರ್ಥಿಗಳಿದ್ದು ಬಹು ಶಿಸ್ತಿನ ಪರೀಕ್ಷೆ ನಡೆಯುತ್ತಿದೆ. ಇಂದು ಪರೀಕ್ಷಾ ಕೇಂದ್ರಕ್ಕೆ ತಾಲ್ಲೂಕಾ ಸ್ಕಾಡ್ ಹಾಗು ಪಿ.ಯು.ಸಿ ಪರೀಕ್ಷಾ ಮಂಡಳಿಯ ಚೆರ್ಮೆನ್ ಜಯರಾಮ ನಾಯಕ, ಜಿಲ್ಲಾ ಶಿಕ್ಷಣ ಉಪವಿಭಾಗಾಧಿಕಾರಿ ಏ.ಟಿ. ಹೆಗಡೆ, ಸ್ಕಾಡ್ ಕಮೀಟಿ ಪರೀಕ್ಷಾ ಕೇಂದ್ರದ ಸದಸ್ಯರಾದ ಜಗದೀಶ ನಾಯಕ, ಉತ್ತಮ ನಾಯಕ, ಮಮತಾ ನಾಯಕ ಹಾಗು ತಾಲ್ಲೂಕಾ ಪರಿಕ್ಷಾ ಸಿಟಿಂಗ್ ಸ್ಕಾಡ್ ರಾಮಕೃಷ್ಣ ನಾಯಕ, ಶರಣಯ್ಯಾ ಹಿರೇಮಠ ಬೇಟಿ ಮಾಡಿ ಶಿಸ್ತಿನ ಪರೀಕ್ಷೆ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಬದಲ್ಲಿ ಶಾಲೆಯ ಪರಿಕ್ಷಾ ಕೇಂದ್ರದ ಮೇಲ್ವಿಚಾರಕರಾದ ಪ್ರೋಫೆಸರ್ ರಾಮಮೂರ್ತಿ ನಾಯಕ, ಹಾಗೂ ಎನ್.ಎಸ್. ಲಮಾಣಿ ಹಾಗು ಎಸ್.ಎಸ್. ಹೆಗಡೆ ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಮಾಹಿತಿ ಹಾಗು ಪರೀಕ್ಷೆಯ ಕ್ರಮ ವಿವರಿಸಿದರು. ಯಾವದೇ ವಿದಾರ್ಥಿಗಳ ಅನೈತಿಕತೆ ಹಾಗು ಅಶಿಸ್ತಿನ ಘಟನೆ ನಡೆಯದೇ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೂ ತೊಂದರೆ ಇಲ್ಲವಾಗಿದ್ದು ತಿಳಿದು ಬಂದಿದೆ.ಈ ಬಾರಿ ಗೋಕರ್ಣದಲ್ಲಿ ಹೆಚ್ಚಿನ ಸ್ಟ್ರಿಕ್ಟ್ ಪರೀಕ್ಷೆ ಮ್ನಕ್ಕಳಿಗೆ ನಡೆಯುತ್ತಿದೆ.
✍? *ಪುಷ್ಪಹಾಸ ಬಸ್ತಿಕರ
Leave a Comment