ಗೋಕರ್ಣ :
ಪ್ರವಾಸೋದ್ಯಮದ ಮಂಚೂಣಿ ಸ್ಥಾನದಲ್ಲಿನ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಕಳೆದ 6 ದಿನಗಳಿಂದ ಕೂಜ್ನಿ ದೋಣಿಬೈಲ್ ಹೊಟೆಲ್ ಮಾಲಿಕರ ಸಂಘ ಹಾಗು ಸಸ್ವರ ರೆಸಾರ್ಟ್ ಹಾಗು ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ನಾಯಿ ಹಾಗು ಬೆಕ್ಕುಗಳ ಸಂತಾನ ವೃದ್ದಿ ಆಗದಂತೆ ಶಸ್ತ್ರ ಚಿಕಿತ್ಸೆ ಏರ್ಪಾಡಾಗಿತ್ತು. ಒಟ್ಟು 219 ನಾಯಿ ಹಾಗು ಬೆಕ್ಕುಗಳು ಚಿಕಿತ್ಸೆ ಪಡೆದವು ಇವುಗಳಲ್ಲಿ 168 ಬಿಡಾಡಿ ನಾಯಿಗಳು 8 ಬೆಕ್ಕುಗಳು ಚಿಕಿತ್ಸೆಗೊಳಗಾಗಿದ್ದವು ಬೆಂಗಳೂರು ಹಾಗು ಜರ್ಮನಿ ಹಾಗು ಈಟಾಲಿ ದೇಶದ ಸಾಕು ಪ್ರಾಣಿ ಶಸ್ತ್ರ ಚಿಕಿತ್ಸಾ ವೈದ್ಯರು ಭಾಗವಹಿಸಿದ್ದು ವಿಶೇಷತೆ ಪಡೆದಿತ್ತು. ಬೆಂಗಳೂರಿನ ಸರ್ವೋದಯ ಸೇವಾ ಸಂಸ್ಥೆ ಹಾಗು ಗೋವಾ ಎನಿಮಲ್ ಹೆಲ್ತ ಕೆರ್ ಸಂಘ ಸಹಕರಿಸಿದ ಈ ಶಿಬಿರ ಸಮಾರೋಪದಲ್ಲಿ ಮಿನಿಚಂದ್, ಮಹಾಲಕ್ಷ್ಮಿ ಭಡ್ತಿ, ಗೋವಿಂದ ಗೌಡ, ಸುರೇಶ ಗೌಡ, ಶುಕ್ರು ಗೌಡ, ಪಾರ್ವತಿ ನಾಯ್ಕ, ಶೇಖರ ನಾಯ್ಕ ಹಾಗು ಶಸ್ತ್ರ ಚಿಕಿತ್ಸಾ ಶಿಬಿರದ ಮುಖ್ಯ ಸಂಘಟಕಿ ಜರ್ಮನಿಯ ಡೆನಿಸ್ ದಾಸ್ ಹಾಗು ಬಂಕಿಕೊಡ್ಲದ ಶಂಕರ ಪ್ರಸಾದ ಫೌಂಡೆಷನ್ ಸ್ವಾಮೀಜಿ ಯೋಗರತ್ನಾಕರ ಹಾಗು ಸುಬೋಧ ಶೆಟ್ಟಿ ಮುಂತಾದವರು ಬಾಗವಹಿಸಿದ್ದರು
ಶಿಬಿರ ವರದಿಯಂತೆ 3.5 ಲಕ್ಷ ರೂಗಳು ಖರ್ಚಾಗಿವೆ. ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿ ನಡೆಯಿತು.
✍? *ಪುಷ್ಪಹಾಸ ಬಸ್ತಿಕರ
Leave a Comment