ಗೋಕರ್ಣ :
150 ಕ್ಕೂ ಹೆಚ್ಚಿನ ಸ್ವಸಹಾಯ ಸಂಘ ಇಂದು ನಿರಂತರ ತನ್ನ ಕಾರ್ಯ ಚಟುವಟಿಕೆಯಿಂದ ಸ್ವಾವಲಂಬಿ ಜೀವನ ರೂಪಿಸಿಕೊಂಡಿದೆ. ತನಗಾಗಿ ಅಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ದ್ಯೇಯ ವಾಕ್ಯದೊಂದಿಗೆ ನಾವು ಹುಟ್ಟಿಬಂದಮೇಲೆ ಕೇವಲ ಸ್ವಾರ್ಥ ಚಿಂತನೆ ಮಾದದೇ ಸಮಾಜದಲ್ಲಿ ಹುಟ್ಟಿಬಂದ ಋಣ ಭೂಮಿಯಮೇಲೆ ಜನಿಸಿದ ಋಣ ಮಾತಾಪಿತೃಗಳಿಗಾಗಿ ನಾವು ಕೊಡುವ ಋಣ ಬಾದೆಗಳು ನಮ್ಮೊಟ್ಟಿಗೂ ಇವೆ ಅದನ್ನು ತೀರಿಸುವ ಕಾಯಕದಲ್ಲಿ ತೊಡಗಿಕೊಳ್ಳಿ” ಎಂದು ಯಶೋಧರ ನಾಯ್ಕ ಹೇಳಿದರು. ಅವರು ಹೊಲಿಗೆ ಯಂತ್ರ ವಿತರಣೆಯ ನಂತರದ ದಿನಗಳಲ್ಲಿ ತಾವು ಕೊಡಮಾಡಿದ ಸ್ವಸಹಾಯ ಗುಂಪುಗಳ ಕಾರ್ಯವೈಖರಿ ಹಾಗು ಗುಂಪಿನವರಿಗಾಗಿ ಸ್ಪರ್ದಾ ಕಾರ್ಯಕ್ರಮ ಆಯೋಜಿಸಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕುಮಟಾದ ಯಶೋಧರ ನಾಯ್ಕ ಟ್ರಸ್ಟ್ ಕಾರ್ಯಕ್ರಮ ಪ್ರಾಯೋಜಿಸಿತ್ತು. ಶೃಂಗೇರಿ ಮಠ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಫಾದರ್ ಗೆಬ್ರಿಯಲ್ ಡಿಸೋಜಾ ಉದ್ಘಾಟಿಸಿದರು. ಅದ್ಯಕ್ಷರಾಗಿದ್ದ ಯಶೋಧರಾ ನಾಯ್ಕರನ್ನು ಸನ್ಮಾನಿಸಲಾಯಿತು .ವೇದಿಕೆಯಲ್ಲಿ ಗೋಕರ್ಣ ರೋಟರಿ ಕ್ಲಬ್ ಅದ್ಯಕ್ಷೆ ಭಾರತಿ ದೇವತೆ, ಬ್ಯಾಂಕ ನಿರ್ದೇಶಕ ರಾಜಗೋಪಾಲ ಅಡಿ. ಪತ್ರಕರ್ತ ಗಜಾನನ ನಾಯಕ, ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿ ಎಂ . ಗೋವಿಂದ , ಗ್ರಾ.ಪಂ ಮಾಜಿ ಉಪಾದ್ಯಕ್ಷೆ ಪಾರ್ವತಿ ನಾಯ್ಕ, ಉದ್ಯಮಿ ಹರೀಶ ಶೇಟ್, ಪಾರ್ವತಿ ಸೂರಿ ಭಟ್, ನಿವೃತ್ತ ಸೇನಾನಿ ಗಜಾನನ ಪೈ, ಬಿ. ಎಂ. ಗೌಡ, ಬಿ.ಟಿ. ಗೌಡ. ಮಾಲತಿ ಗುರ್ಲಿಂಗ ನಾತಲ ದಿನ್ನಿ ಇದ್ದರು. ಈ ಸಂದರ್ಬದಲ್ಲಿ ಸ್ವ ಸಹಾಯ ಸಂಘದ 200 ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು. ಒಂದು ನಿಮಿಷದಲ್ಲಿ ಮೇಣದ ಬತ್ತಿ ಹಚ್ಚುವ ಸ್ಪರ್ದೆ, ಸಂಗೀತ ಕುರ್ಚಿ, ತಲೆಗೆ ಸ್ಟ್ರೊ ಚುಚ್ಚುವ ಸ್ಪರ್ದೆ. ಲಿಂಬು ಚಮಚ, ಹಲವು ಏಕಾಗ್ರತೆಗೆ ಸಂಬಂದಿಸಿದ ವಿವಿಧ ಸ್ಪರ್ದೆಗಳು ನಡೆದು ಚಂದ್ರಕಲಾ ಗೌಡ, ಸವಿತಾ ಆಚಾರಿ, ಗೌರಿ ಗೌಡ, ರೇವತಿ ಗೌಡ ಮುಂತಾದವರು ಬಹುಮಾನ ಪಡೆದರು ಆರಂಬದಲ್ಲಿ ರೇಶ್ಮಾ ಆಚಾರಿ ಸ್ವಾಗತಿಸಿದರು, ಶಾಲಿನಿ ನಾರ್ವೇಕರ ವಂದಿಸಿದರು, ಸರೀತಾ ಗೌಡ ನಿರ್ವಹಣೆ ಚೆನ್ನಾಗಿ ಮೂಡಿಬಂದಿತ್ತು.
✍? *ಪುಷ್ಪಹಾಸ ಬಸ್ತಿಕರ
Leave a Comment