ಹೊನ್ನಾವರ:
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ 2016-17ನೇ ಸಾಲಿನ ಶೈಕ್ಷಣಿಕ ವರ್ಷದ ದತ್ತಿ ನಿಧಿ, ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಫರ್ಧೆಗಳಲ್ಲಿ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ರಚಿತವಾದ ಹಸ್ತ ಪುಸ್ತಕ ‘ಮರಿದುಂಬಿ’ಯನ್ನು ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಹೊನ್ನಾವರ ರೋಟರಿ ಅಧ್ಯಕ್ಷ ಶ್ರೀ ವಿ.ಜಿ. ನಾಯ್ಕ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿವಿಧ ಬಗೆಯ ಪ್ರತಿಭೆಗಳಿದ್ದು, ಯಾರೂ ಕೂಡ ನಿಷ್ಪ್ರಯೋಜಕರಲ್ಲ ಎಂದು ತಿಳಿಸಿದರು. ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು, ಆಡಳಿತ ಮಂಡಳಿ ಮತ್ತು ಶಿಕ್ಷಕರಿಂದ ನೀಡಲಾಗುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಾಜಕ್ಕೆ ಒಳಿತಾಗುವಂತೆ ಬಾಳಬೇಕೆಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜೆ.ಟಿ. ಪೈ ಮಾತನಾಡಿ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ಮುಖ್ಯಾಧ್ಯಾಪಕ ಶ್ರೀ ವಿ.ಎಸ್. ಅವಧಾನಿ ಸ್ವಾಗತಿಸಿದರು. ದತ್ತಿ ನಿಧಿ, ಸಾಂಸ್ಕøತಿಕ ಮತ್ತು ಕ್ರೀಡಾ ಸ್ಫರ್ಧೆಗಳ ಬಹುಮಾನಿತರ ಯಾದಿಯನ್ನು ಕ್ರಮವಾಗಿ ಶ್ರೀ ಜಯಂತ ನಾಯಕ, ಶ್ರೀ ಸೂರಜ್ ನಾಯ್ಕ, ಶ್ರೀ ಎಲ್. ಎಚ್. ಚಂದಾವರಕರ ಓದಿದರು. ಶ್ರೀ ಶಂಕರ ಹೆಗಡೆ ವಂದಿಸಿದರು. ಶ್ರೀ ಅಶೋಕ ನಾಯ್ಕ ಮತ್ತು ಶ್ರೀ ರಾಘವೇಂದ್ರ ಹೆಗಡೆ ನಿರೂಪಿಸಿದರು.
-gaju
Leave a Comment