ಹೊನ್ನಾವರ :
ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಆಕ್ಷೇಪಕ್ಕೊಳಗಾಗಿದ್ದ ತಾಲೂಕಿನ ಮಂಕಿಯ ನಾಕುದಾ ಮೊಹಲ್ಲಾದ ಸರ್ಕಾರಿ ಶಾಲೆಯ ಶಿಕ್ಷಕ ಝೋರಾನ್ ಗೊನ್ಸಾಲ್ವೀಸ್ ಈತನ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳಲ್ಲಿ ಹಿಂದೆ ಶಿಕ್ಷಕ ಅಶ್ಲೀಲ ಚಿತ್ರ ತೋರಿಸಿದ ಧೋರಣೆಯಿಂದ ಆಕ್ರೋಶಗೊಂಡಿದ್ದ ಪಾಲಕರು ಹಾಗೂ ಸಾರ್ವಜನಿಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಕ್ಷಕ ಝೋರಾನ್ ಗೊನ್ಸಾಲ್ವೀಸ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಶಿಕ್ಷಣ ಇಲಾಖೆ ಮಂಕಿ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪೋಲಿಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
-gaju
Leave a Comment