ಗೋಕರ್ಣ:
ರಾಮದಾಸ ಮಿಷನ್ ವತಿಯಿಂದ ಶ್ರೀ ಶಾಂತಿರಾಮ ಕೊಲ್ಲೂರಿನಿಂದ ಹೊರಟ ರಾಮರಥ ಸ್ಥಳೀಯ ಜೀವೋತ್ತಮ ಮಠಕ್ಕೆ ಬಂದು ಶುಕ್ರವಾರ ರಾತ್ರಿ ತಲುಪಿತು.
ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಈ ದೇಶ ಸುರಕ್ಷಿತವಾಗಿರಬೇಕಾದರೆ ಹಿಂದುತ್ವದ ಭದ್ರ ಬುನಾದಿಯಿಂದ ಮಾತ್ರ ಸಾಧ್ಯ ಎಲ್ಲಾ ಕೋಮಿನವರನ್ನು ಪ್ರೀತಿಸುವ ಹಿಂದೂಗಳು ಸೌಹಾರ್ದವಾಗಿ ಬಾಳುತ್ತಿದ್ದಾರೆ.ಈ ದೇಶದ ಮೇಲೆ ಹಿಂದೆ ನಡೆದಿದ್ದ ಮತ್ತು ಈಗ ನಡೆಯುತ್ತಿರುವ ಅನೇಕ ಘಟನೆ ಭಯೋತ್ಪಾದನೆಗಳು ತಲ್ಲಣಗೊಳಿಸುತ್ತಿದೆ.
ನಾವೆಲ್ಲ ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸುವ ಅನಿವಾರ್ಯತೆ ಇದೆ. ಇದು ರಾಮ ರಾಜ್ಯವಾಗಬೇಕು ರಾವಣ ರಾಜ್ಯವಲ್ಲ ಮುಂದಿನ ದಿನ ನಾವೆಲ್ಲ ಅತ್ಯಂತ ಪ್ರಜ್ಞಾವಂತರಾಗಬೇಕು.ಯಾವ ಕಾರಣಕ್ಕೂ ಈ ಜವಾಬ್ದಾಯಿಂದ ನುಣಿಚಿಕೊಳ್ಳಬಾರದು ಎಂದರು.
ರಮೇಶ ಗುರು ಸ್ವಾಮಿ ಮಾದನಗೇರಿ,ರಮೇಶ ನಾಯ್ಕ,ಆರ್‌ಎಸ್‌ಎಸ್ ಕಾರ್ಯಕರ್ತರು ಉಪಸ್ಥಿತಿದ್ದರು.
✍? *ಪುಷ್ಪಹಾಸ ಬಸ್ತಿಕರ
Leave a Comment