ಯಲ್ಲಾಪುರ:
ಯುಗಾದಿ ಉತ್ಸವವನ್ನು ಮಾ.28ರಂದು ಭವ್ಯ ಶೋಭಾಯಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ವೆಂಕಟರಮಣ ಮಠದ ಸಭಾಭವನದಲ್ಲಿ ನಡೆದ ಯುಗಾದಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಯುಗಾದಿ ಉತ್ಸವ ಜಾಗೃತಿ ಪ್ರಯುಕ್ತ ಮಾ.26ರಂದು ಪಟ್ಟಣದಲ್ಲಿ ಬೈಕ್ ರಾರಯಲಿ ನಡೆಸಲು ನಿರ್ಧರಿಸಲಾಯಿತು. ಮಾ.29ರಂದು ಸಂಜೆ ಗ್ರಾಮದೇವಿ ದೇವಸ್ಥಾನದ ಸಭಾಮಂಟಪದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಸತ್ಯಜಿತ್ ಸುರತ್ಕಲ್ ಅವರಿಂದ ಧರ್ಮ ಜಾಗೃತಿ ಉಪನ್ಯಾಸ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Leave a Comment