ಕಾರವಾರ:
ಎಂಎಸ್ಸಿ ವಿದ್ಯಾರ್ಥಿ ಅಮಿತ್ ಹೆಗಡೆ ಸಿದ್ಧಪಡಿಸಿರುವ ವರ್ಷ-ಹರ್ಷ ಎಂಬ ಕಿರುಚಿತ್ರ ಬಿಡುಗಡೆ ಮಾ.22 ರಂದು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೊಜಿಸಲಾಗಿಸಲಾಗಿತ್ತು, ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಿತು. ಕಾರ್ಯಕ್ರಮವನ್ನು ಪ್ರಭಾರ ಪ್ರಾಚಾರ್ಯರಾದ ಪ್ರೊ. ಎಂ.ವಿ. ಗಿರಿ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಇಕೋ ಕ್ಲಬ್, ಬಯೋಡೈವರ್ಸಿಟಿ ಕ್ಲಬ್ ಹಾಗು ಬೆಂಗಳೂರಿನ ಪಿಪಲ್ ಟ್ರಿ ಎಂಬ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವೆಸ್ಟರ್ನ್ ಘಾಟ್ ಟಾಸ್ಕ ಫೋರ್ಸ್ನ ಸದಸ್ಯರಾದ ಎಂ. ಜಯಕರ್ ಭಂಡಾರಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು , ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಕೇರಳ ತ್ರಿಶೂರ್ನಲ್ಲಿರುವ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ ಸಂಸ್ಥೆಯಲ್ಲೂ ಇದೇ ಸಮಯದಲ್ಲಿ ಕಿರುಚಿತ್ರ ಪ್ರದರ್ಶನಗೊಂಡಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಅರಣ್ಯ ಪ್ರದೇಶದಲ್ಲಿ 9 ನಿಮಿಷದ ಈ ಚಿತ್ರಿಕರಿಸಲಾಗಿದೆ. ಮಲೆನಾಡಿನಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಹವಾಮಾನ ಬದಲಾವಣೆಯನ್ನು ಕೇಂದ್ರಿಕರಿಸಿ ಚಿತ್ರ ರಚಿಸಲಾಗಿದೆ. ಇದೇ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಪಿಪಲ್ ಟ್ರಿ ಎಂಬ ಸಂಸ್ಥೆ ಚಿತ್ರಕ್ಕೆ ಸಹಕರಿಸಿದೆ.
-ganapathi hegde
Leave a Comment