• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಮೂಹ ಚಿತ್ರಕಲಾ ಪ್ರದರ್ಶನ

March 23, 2017 by Sachin Hegde Leave a Comment

IMG 20170323 WA0064 1 IMG 20170323 WA0062 1

ಕಾರವಾರ:

ಏಕಾಗ್ರತೆಯ ಜೊತೆಗೆ ಕ್ರಿಯಾಶೀಲ ಮನಸ್ಸುಳ್ಳ ವ್ಯಕ್ತಿಯಿಂದ ಉತ್ತಮ ಚಿತ್ರ ರಚಿಸಲು ಸಾಧ್ಯ. ಚಿತ್ರಕಲೆ ಕೇವಲ ಕಲಾವಿದನ ಕಲೆಯಷ್ಟೇ ಆಗಿರದೆ ನಮ್ಮ ಸುತ್ತಮುತ್ತಲಿನ ಸಂಸ್ಕøತಿಗಳ ಬಿಂಬಕ ರೂಪಕವಾಗಿದೆ ಎಂದು ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಮ್ಮ ಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ವಿದ್ಯಾ ಪ್ರಸಾರಕ ಸಮಿತಿಯ ಟಾಗೋರ ಚಿತ್ರಕಲಾ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿ ಒಕ್ಕೂಟದವರು ಹಮ್ಮಿಕೊಂಡಿದ್ದ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಕಲಾವಿದರಲ್ಲಿರುವ ತಾಳ್ಮೆ, ಸಂಯಮ ಮೆಚ್ಚುವಂತದ್ದಾಗಿದೆ. ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರಗಳು ರಚನೆಯಾದರೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‍ನ ಪ್ರಾಂಶುಪಾಲ ವಿ.ಎಂ.ಹೆಗಡೆ, ಉಳಿದೆಲ್ಲ ಕಲಾ ಪ್ರಕಾರಗಳಿಗಿಂತ ಚಿತ್ರಕಲಾ ಕಲಾವಿದರಲ್ಲಿ ಏಕಾಗ್ರತೆ ಹೆಚ್ಚಿರುತ್ತಿದ್ದು, ವಿದ್ಯಾರ್ಥಿಗಳು ರಚಿಸಿದ ಚಿತ್ರಗಳು ಮನಸೂರೆಗೊಳ್ಳುತ್ತಿವೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನ ಉಪನ್ಯಾಸಕ ಡಾ.ಜಾಫರ್, ಟಾಗೋರ್ ಚಿತ್ರಕಲಾ ಮಹಾವಿದ್ಯಾಲಯದ ಗೌರವ ಪ್ರಾಚಾರ್ಯ ಜಿ.ಕೆ.ಮಹಾಲೆ, ಶಿಕ್ಷಕ ಕೆ.ಜಾನ್ ಬೆಲ್ ಮುಂತಾದವರು ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಆರ್.ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕøತೆ ಸುಕ್ರಿ ಗೌಡರನ್ನು ವಿದ್ಯಾ ಪ್ರಸಾರಕ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳೇ ಚಿತ್ರಿಸಿದ ಸುಕ್ರಜ್ಜಿಯ ಚಿತ್ರವನ್ನು ಅವರಿಗೆ ನೀಡಿದ್ದು ವಿಶೇಷವೆನಿಸಿತ್ತು.

ಗಮನಸೆಳೆದ ಚಿತ್ರಗಳು:
ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳು ಪ್ರದರ್ಶನಗೊಂಡವು. ಸುಕ್ರಿ ಗೌಡ, ಕೈಯ್ಯಲ್ಲಿ ದೀಪ ಹಿಡಿದ ಬಾಲಕಿ, ತಬಲಾ ಬಾರಿಸುತ್ತಿರುವ ಬಾಲ ವಿನಾಯಕ, ಶಿಲೆಯ ಮೂರ್ತಿಗಳ ಚಿತ್ರ, ಕೃಷ್ಣ-ರುಕ್ಮಿಣಿಯರ ಚಿತ್ರ ಸೇರಿದಂತೆ ವಿವಿಧ ಕಲಾಕೃತಿಗಳು ಜನರ ಮನಸೂರೆಗೊಂಡವು. ಟಾಗೋರ್ ಚಿತ್ರಕಲಾ ಮಹಾವಿದ್ಯಾಲಯದ ಪ್ರತಿಭಾವಂತ ಚಿತ್ರಕಲಾ ವಿದ್ಯಾರ್ಥಿಗಳಾದ ನಿತ್ಯಾನಂದ ಎಲ್. ನಾಯ್ಕ ಬೇಳಾಬಂದರ ಅಂಕೋಲಾ, ಅಶ್ವಿನಿ ಆನಂದು ಕೋಠಾರಕರ ಮಾಜಾಳಿ ಕಾರವಾರ, ಪ್ರಸಾದ ದತ್ತಾ ತಾಮಸೆ ಬೇಲೇಕೇರಿ ಅಂಕೋಲಾ, ನಾಗೇಂದ್ರ ಜಿ. ನಾಯ್ಕ ತದಡಿ ಗೋಕರ್ಣ, ರಾಜೇಶ್ವರಿ ಗಣೇಶ ಪಟಗಾರ ಅಚವೆ ಚನಗಾರ ಅಂಕೋಲಾ, ಆನಂದ ಬಿ. ಮಸೂತಿ ಕಾರವಾರ, ದೇವೇಂದ್ರ ವಿ. ನಾಯ್ಕ ಕಾರವಾರ, ಮಂಜುನಾಥ ವಿಠೋಬ ನಾಯ್ಕ ಕಾರವಾರ, ಅಕ್ಷತಾ ಎ. ನಾಯ್ಕ ಸಿದ್ದರ ಕಾರವಾರ, ಸೂರಜ ಕಿನ್ನರಕರ ಮಲ್ಲಾಪುರ ಕಾರವಾರ, ಕಾರ್ತಿಕ ಆರ್. ಹರಿಕಂತ್ರ ಕಾರವಾರ, ಸಂಜಯ ಆರ್. ಭೋಯಿ ಕಾರವಾರ ಹಾಗೂ ಅರುಣ ಎಂ. ನಾಯ್ಕ ಹಿರೇಗುತ್ತಿ ಕುಮಟಾ ಅವರು ಈ ಕಲಾಕೃತಿಗಳನ್ನು ರಚಿಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರದರ್ಶನ ನಡೆದಿದ್ದು ನೂರಾರು ಕಲಾಸಕ್ತರು ಚಿತ್ರಗಳನ್ನು ವೀಕ್ಷಿಸಿದ್ದರು.

-ganapathi hegde

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: National News, Other

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,113 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...