ಹೊನ್ನಾವರ :
ಹೊನ್ನಾವರ ಇಲ್ಲಿನ ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಾಲಯದ ಸುಂದರ ಪ್ರಕೃತಿಯ ನಡುವೆ ಏಪ್ರಿಲ್ 2 ಭಾನುವಾರ 3 ಗಂಟೆಯಿಂದ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮ ನಡೆಯುವುದು. ಹಲವು ಭಿನ್ನ ವಿಭಿನ್ನವಾದ ವೈಶಿಷ್ಟ್ಯ ಪೂರ್ಣವಾದ ನೂರಾರು ಕಾರ್ಯಕ್ರಮಗಳನ್ನು ರಾಗಶ್ರೀ ಸಮಾಜಕ್ಕೆ ನೀಡಿದ್ದು ಅದೇ ರೀತಿ ಈ ರಾಗಶ್ರೀಯ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮವನ್ನು ಡಾ| ಭೀಮೇಶ್ವರ ಜೋಶಿ ಧರ್ಮಕರ್ತರು ಶ್ರೀ ಕ್ಷೇತ್ರ ಹೊರನಾಡು ಉದ್ಘಾಟಿಸುವರು. ಧರ್ಮದÀರ್ಶಿಗಳು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕೆ.ಎಸ್.ಎಲ್.ಡಿ. ಬ್ಯಾಂಕಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ಈಶ್ವರ ಎನ್. ನಾಯ್ಕ ಮುರ್ಡೆಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಗೀತ ಗುರುಗಳಾದ ಡಾ| ಅಶೋಕ ಹುಗ್ಗಣ್ಣವರ ಎಸ್.ಡಿ.ಎಂ. ಕಾಲೇಜ್, ಹೊನ್ನಾವರ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆ ಕಾರವಾರ ಇದರ ಸಹಾಯಕ ನಿರ್ದೇಶಕರಾದ ಶ್ರೀ ಶಫಿ ಸಾದುದ್ದೀನ್ ಇವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ದಿ| ಪಂ| ಜಿ. ಆರ್. ಭಟ್ಟ ಬಾಳೇಗದ್ದೆಯವರ ಸಂಸ್ಕರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಪುರಸ್ಕರಿಸಲ್ಪಟ್ಟ ನಮ್ಮೂರ ಸಾಧಕರಾದ ಡಾ| ಬಿ. ಸಿ. ರಾಯ (ಕಲ್ಕತ್ತಾ) ಪ್ರಶಸ್ತಿ ಪುರಸ್ಕøತರಾದ ಡಾ| ಕೆ.ಎಸ್. ಭಟ್ಟ ಭದ್ರಾವತಿ ಹಿರಿಯ ಸಾಹಿತಿಗಳಾದ ಪ್ರೋ ಗಜಾನನ ಹೆಗಡೆ, ಮೈಸೂರು ಮಂಗಳೂರಿನ ಬಿ.ಎಸ್.ಎನ್.ಎಲ್ನ ವಿಶ್ರಾಂತ ಉಪ ಮಹಾಪ್ರಬಂಧಕರಾದ ಶ್ರೀ ಎಸ್.ಎಂ. ಹೆಗಡೆ ಇವರ ಸಮಾಜಿಕ ಕ್ಷೇತ್ರದ ಸೇವೆಗಾಗಿ ಸನ್ಮಾನಿಸಲಾಗುವುದು. ನಂತರ ರಾಗಶ್ರೀ ಭರತನಾಟ್ಯ ಕೇಂದ್ರದ ಗುರು ವೈದೇಹಿ ಶೆಟ್ಟಿ ಹಾಗೂ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು, ನಂತರ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಪಂ| ಗಣಪತಿ ಭಟ್ಟ ಹಾಸಣಗಿ ಇವರಿಂದ ಸಂಗೀತ ಕಛೇರಿ ನಡೆಯಲಿದೆ. ಇವರಿಗೆ ಪ್ರೋ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ್ ಎಸ್.ಡಿ.ಎಂ. ಕಾಲೇಜ್, ಹೊನ್ನಾವರ ತಬಲಾ ಸಾಥ್ನ್ನು ವಿದ್ವಾನ್ ಗೌರೀಶ ಯಾಜಿ ಸಂವಾದಿನಿ ಸಾಥ್ನ್ನು ನೀಡಲಿದ್ದಾರೆ. ಗ್ರಾಮೀಣ ಸುಂದರ ಪರಿಸರ ಹಾಗೂ ದೇವ ಸನ್ನಿಧಿಯಲ್ಲಿ ನಡೆಯುವ ನಾದ ಸಂವಹನ ಹಾಗೂ ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಶೋತುೃಗಳು ಸಂಗೀತಾಭಿಮಾನಿಗಳು ಬರುವಂತೆ ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ, ಹಡಿನಬಾಳ ಹಾಗೂ ಕಾರ್ಯದರ್ಶಿ ವಿದ್ವಾನ್ ಎನ್. ಜಿ. ಹೆಗಡೆ, ಕಪ್ಪೆಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-gaju
Leave a Comment