ಯಲ್ಲಾಪುರ:
ಮಾರ್ಚ 28 ರಂದು ನಡೆಯುವ ಯುಗಾದಿ ಉತ್ಸವ ಶೋಭಾಯಾತ್ರೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುಗಾದಿ ಉತ್ಸವ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರವಿವಾರ ಮಧ್ಯಾಹ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಬೈಕ್ ರ್ಯಾಲಿ ನಡೆಯಿತು.
ಮಧ್ಯಾಹ್ನ ಕಾಳಮ್ಮನಗರ ಕಾಳಮ್ಮ ದೇವಸ್ಥಾನದಿಂದ ಪ್ರಾರಂಭವಾದ ಬೈಕ್ ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ಬೈಕ್ ಸವಾರರು ಪಾಲ್ಗೊಂಡಿದ್ದರು. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎನ್.ಗಾಂವ್ಕರ, ಮಾಜಿ ಅಧ್ಯಕ್ಷ ಗಜಾನನ ನಾಯ್ಕ, ನಿವೃತ್ತ ಅರಣ್ಯಾಧಿಕಾರಿ ಆರ್.ಡಿ.ಬಂಟ್ ಮುಂಥಾದವರು ಚಾಲನೆ ನಿಡಿದರು, ಪಟ್ಟಣದ ಕಾಳಮ್ಮ ನಗರದ ತಾಲ್ಲೂಕು ಕ್ರಿಡಾಂಗಣದಿಂದ ಹೊರಟ ರ್ಯಾಲಿ ಕಾಳಮ್ಮನಗರ, ತಟಗಾರ ಕ್ರಾಸ್, ನಾಯ್ಕಿನಕೆರೆ, ಮಾಗೋಡು ಕ್ರಾಸ್, ಅಕ್ಬರ್ ಗಲ್ಲಿ, ಮೂಲಕ ಸಾಗಿ ಮಂಜುನಾಥ ನಗರ, ನೂತನನಗರ, ಜಡ್ಡಿ, ರವಿಂದ್ರನಗರ ಮೂಲಕ ಸಾಗಿ ಗ್ರಾಮ ದೇವಿ ದೇವಸ್ಥಾನದಲ್ಲಿ ಕೊನೆಗೊಂಡಿತು.
ನೂರಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಒಂದೂವರೆ ಸಾವಿರಕ್ಕೂ ಹೆಚ್ಚು ಬೈಕ್ ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಕೇಸರಿ ಧ್ವಜ, ಭಾರತೀಯ ಸಂಸ್ಕøತಿ ಬಿಂಬಿಸುವ ಉಡುಗೆ ತೊಟ್ಟ ಯುವಕರು ಹಿಂದೂ ಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯುದ್ದಕ್ಕೂ ಸಾಗಿದರು. ಡಿವೈಎಸ್ಪಿ ನಾಗೇಶ ಶೆಟ್ಟಿ, ಪೊಲೀಸ್ ನಿರೀಕ್ಷಕ ವಿಜಯ ಬೀರಾದಾರ, ಉಪ ನಿರೀಕ್ಷಕರಾದ ಶ್ರೀಧರ ಎಸ್.ಆರ್ ಮತ್ತು ಕೆ.ಆಯ್.ಕಾಂಬ್ಳೆ ಮತ್ತು ಸಿಬ್ಬಂದಿಗಳು ಪಟ್ಟಣದ ಇಕ್ಕೆಲ್ಲಗಳಲ್ಲಿ ಬೈಕ್ ರ್ಯಾಲಿ ನಡೆಯುವ ಸಂದರ್ಭದಲ್ಲಿ ಸೂಕ್ತ ಬಂಧೋಬಸ್ತ ಕಲ್ಪಿಸಿದ್ದರು.
– ಗಣಪತಿ ಹೆಗಡೆ.
Leave a Comment