ಹೊನ್ನಾವರ:
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಭಾನುವಾರ ಹೊನ್ನಾವರದ ಭೇಟಿ ಹಲವು ರಾಜಕೀಯ ಸಂಚಲನ ಮೂಡಿಸಿರುವುದು ಈಗ ನಿಧಾನವಾಗಿ ಹೊರಬರತೊಡಗಿದೆ.
ಭಟ್ಕಳ-ಹೊನ್ನಾವರ, ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರಗಳಿಗೆ ಸಂಭಂಧಿಸಿದಂತೆ ಹಲವು ಕುತೂಹಲಗಳನ್ನು ಹರಿಯಬಿಟ್ಟಿದೆ.
ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಅಭ್ಯರ್ಥಿಗಳ ಪೈಪೋಟಿ ಈ ಎರಡೂ ಕ್ಷೇತ್ರಗಳಲ್ಲಿ ವರ್ಷದ ಹಿಂದಿನಿಂದಲೇ ತೀವ್ರಗೋಂಡು ರಾಜಕೀಯ ಕ್ಷೇತ್ರದಲ್ಲಿ ನಿತ್ಯ ಸುದ್ದಿಯಲ್ಲಿದೆ.
ಸಂಪೂರ್ಣ ತಯಾರಿ ಮಾಡಿಕೊಳ್ಳಿ
” ಇನ್ನೂ ಒಂದುವರೆ ವರ್ಷ ಇದೆ. ಶಿವಾನಂದ ನಾಯ್ಕರ ಆಶೀರ್ವಾದ ಪಡೆದುಕೊಂಡು ಕ್ಷೇತ್ರದಲ್ಲಿ ಸಂಪೂರ್ಣ ತಯಾರಿ ಮಾಡಿಕೊಳ್ಳುವಂತೆ ” ಯಡಿಯೂರಪ್ಪ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಸ್ವಲ್ಪ ಮುಂಚೆ ಸುನೀಲ್ ನಾಯ್ಕರಿಗೆ ಸೂಚನೆ ನಿಡಿದ್ದಾರೆ ಎಂದು ತಿಳಿದು ಬಂದಿದೆ.
– ಗಣಪತಿ ಹೆಗಡೆ.
Leave a Comment