ಭಟ್ಕಳ:
ಬಾವಿ ತೋಡುವ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬ ಮೇಲಕ್ಕೆ ಬರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ತಾಲ್ಲೂಕಿನ ಬೆಳಕೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಟ್ಟಿಕೇರಿಯಲ್ಲಿ ನಡೆದಿದೆ.
ಬೈಂದೂರು ತಾಲ್ಲೂಕಿನ ಶಿರೂರು ಹಣಬರಕೇರಿ ನಿವಾಸಿ ಬಚ್ಚಾ ಮಂಜ ಹಣಬರ (55) ಮೃತ ವ್ಯಕ್ತಿ.
ಈತ ಕೃಷ್ಣ ನಾಯ್ಕ ಎಂಬುವವರ ಮನೆಯ ಬಾವಿಗೆ ರಿಂಗ್ ಅಳವಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೇಲಕ್ಕೆ ಬರುವ ವೇಳೆಯಲ್ಲಿ ಕೆಳಕ್ಕೆ ಬಿದ್ದು ರಕ್ತ ನಾಳಕ್ಕೆ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಲು ಸಾಗಿಸುವ ವೇಳೆ ರಸ್ತೆ ಮಧ್ಯ ಮೃತಪಟ್ಟಿದ್ದಾನೆ.
ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment